September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಸಚಿವರ ಸಂವಾದ

ಉಜಿರೆ: ರಾಜ್ಯ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಉಜಿರೆ ಗ್ರಾಮದ ಮಲ ತ್ಯಾಜ್ಯ ಘಟಕದ ಬಗ್ಗೆ ಕೇಂದ್ರ ಜಲಶಕ್ತಿ ಖಾತೆ ಸಚಿವ ಸಿ. ಆರ್.ಪಾಟೀಲ್, ಕೇಂದ್ರ ರೈಲ್ವೆ ಖಾತೆ ಸಚಿವ ವಿ.ಸೋಮಣ್ಣ ಅವರಿಗೆ ಅನುಭವ ಹಂಚಿಕೆ ಕಾರ್ಯಕ್ರಮ ಜ.6ರಂದು ನಡೆಯಿತು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಯಿಂದ ವಿಡಿಯೊ ಕಾನ್ಸರೆನ್ಸ್ ಮೂಲಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮತ್ತು ಜಿಪಂ ಸಿಇಒ ನರ್ವಾಡೆ ವಿನಾಯಕ ಕಾರ್ಭಾರಿ ಮಾಹಿತಿ ನೀಡಿದರು.

ಯೋಜನೆ ‘ಗ್ರಾಮೀಣಾಭಿವೃದ್ಧಿ ಗಳನ್ನು ಸಮರ್ಪಕವಾಗಿ ಅನುಷ್ಠಾನ ತರಬೇಕು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗ ಪಡೆಯ ಬೇಕು. ಈ ಯೋಜನೆಗಳನ್ನು ಜಾರಿಗೆ ತರುವಾಗ ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿಯ ಯೋಜನೆ ಎಂಬುದನ್ನು ಜನರಿಗೆ ತಿಳಿಸಬೇಕು,” ಎಂದು ಸಚಿವ ಸೋಮಣ್ಣ ಹೇಳಿದರು.

ದೇಶದ ಆಯ್ದ ರಾಜ್ಯಗಳ ಮಲ ತ್ಯಾಜ್ಯ ನಿರ್ವಹಣೆ ಕುರಿತು ನಡೆದ ಸಂವಾದದಲ್ಲಿ ಕರ್ನಾಟಕದಿಂದ ಉಜಿರೆ ಗ್ರಾಪಂ ಮಾತ್ರ ಆಯ್ಕೆ ಮಾಡಲಾಗಿತ್ತು. ಗ್ರಾಮದಲ್ಲಿ ಅನುಷ್ಠಾನ ಮಾಡಿರುವ ಮಲ ತ್ಯಾಜ್ಯ ಘಟಕ ಬಗ್ಗೆ ಪಿಪಿಟಿ ಮೂಲಕ ಸಚಿವರಿಗೆ ಅನುಭವ ಪ್ರಸ್ತುತಪಡಿಸಲಾಯಿತು.

ಉಜಿರೆ ಗ್ರಾಪಂ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಪಿಡಿಒ ಪ್ರಕಾಶ್ ಶೆಟ್ಟಿ ಸಂಜೀವಿನಿ ಒಕ್ಕೂಟದ ಸದಸ್ಯೆ ದೇಜಮ್ಮ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯಕಾರಿ ಎಂಜಿನಿಯರ್ ಜೈಪ್ರಕಾಶ್, ಸ್ವಚ್ಛಭಾರತ್ ಸಮಾಲೋಚಕರು ಉಪಸ್ಥಿತರಿದ್ದರು.

Related posts

ಪಡಂಗಡಿ : ಕುಂಡದಬೆಟ್ಟು ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಬೆಳ್ತಂಗಡಿ ಶ್ರೀ ಧ. ಮಂ. ಆಂ.ಮಾ. ಶಾಲೆಗೆ ದೇಶಭಕ್ತಿ ಗೀತ ಗಾಯನ ಸ್ಪರ್ಧೆಯಲ್ಲಿ ಬಹುಮಾನ

Suddi Udaya

ಉಜಿರೆಯಲ್ಲಿ ಲೋಕಕಲ್ಯಾಣಾರ್ಥ “ಶ್ರೀ ವಿಷ್ಣು ಯಾಗ”   

Suddi Udaya

ಮಲವಂತಿಗೆ ಶ್ರೀ ವಿದ್ಯಾ ಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳ ಆಯ್ಕೆ

Suddi Udaya

ನಿಡ್ಲೆ: ಬೂಡುಜಾಲು ಕಪಿಲ ನದಿಯ ಪಕ್ಕದಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ

Suddi Udaya

ಬೆಳ್ತಂಗಡಿ ವಕೀಲರ ಸಂಘಕ್ಕೆ ರಾಜ್ಯ ವಕೀಲರ ಪರಿಷತ್ತಿನ ನೂತನ ಸದಸ್ಯರಾಗಿ ಆಯ್ಕೆಯಾದ ನಾರಾಯಣ ಸ್ವಾಮಿ ಭೇಟಿ

Suddi Udaya
error: Content is protected !!