July 23, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಶೌರ್ಯ ತುರ್ತು ಸ್ಪಂದನಾ ತಂಡಕ್ಕೆ ಅಂತಾರಾಷ್ಟ್ರೀಯ ತರಬೇತುದಾರರಿಂದ ತರಬೇತಿ

ಬೆಳ್ತಂಗಡಿ: ಶೌರ್ಯ ಶ್ರೀ ಧರ್ಮಸ್ಥಳ ವಿಪತ್ತು ನಿರ್ವಹಣಾ ಕಾರ್ಯಕ್ರಮದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತುರ್ತು ಸ್ಪಂದನಾ ತಂಡ ಬೆಳ್ತಂಗಡಿ ಇದರ ಸ್ವಯಂಸೇವಕರು ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ (ಈಜು)ತರಬೇತಿಯಲ್ಲಿ ಪಾಲ್ಗೊಂಡಿರುತ್ತಾರೆ.


ಬಂಟ್ವಾಳ ತಾಲೂಕು ವಿಟ್ಲ ಸಮೀಪದ ಅಡ್ಯನಡ್ಕದ ವಾರಾಣಸಿ ಫಾರ್ಮ್ನಲ್ಲಿ ಅಂತಾರಾಷ್ಟ್ರೀಯ ಫ್ರೀ ಡ್ರೈವಿಂಗ್ ಕೋಚಸ್ ಅಪ್ ಏಷ್ಯಾದ ಸ್ಥಾಪಕ ಜೇರೋಲೆನ್ ಎಲೌಟ್ ಇವರಿಂದ 7 ದಿನದ ತರಬೇತಿ ಕಾರ್ಯಕ್ರಮ ಆರಂಭಗೊಂಡಿದೆ.
ಈಜುಗಾರಿಕೆಯಲ್ಲಿ 30 ವರ್ಷಗಳ ಸುದೀರ್ಘ ಅನುಭವ ಪಡೆದ ಇವರು ನೆದರಲ್ಯಾಂಡ್ ದೇಶದಿಂದ ತರಬೇತಿ ನೀಡಲು ಆಗಮಿಸಿರುತ್ತಾರೆ.


ಈಜುಗಾರಿಕೆಯ ಮುಂಚೆ ವಹಿಸಬೇಕಾದ ಎಚ್ಚರಿಕೆ ಕ್ರಮಗಳು, ಈಜುವಾಗ ಆರೋಗ್ಯದಲ್ಲಿ ಆಗುವ ಏರುಪೇರುಗಳು, ಅದಕ್ಕೆ ಆರೋಗ್ಯದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕೆಯ ಮಾಹಿತಿಯೊಂದಿಗೆ ಈಜುಗಾರಿಕೆಯಲ್ಲಿ ವಿವಿಧ ಆಯಾಮಗಳ ಪ್ರಾತ್ಯಕ್ಷತೆಯನ್ನು ಈಜು ಕೊಳದಲ್ಲಿ ಮಾಡಿಸಿರುತ್ತಾರೆ.


ತರಬೇತಿ ಸಹಾಯಕರಾಗಿ ಜೇಕೊಬ್, ವಿನಯ್, ಪ್ರಿಯಾಂಕಾ ಸಹಕಾರ ನೀಡಿರುತ್ತಾರೆ.
ತರಬೇತಿಯಲ್ಲಿ ಬೆಳ್ತಂಗಡಿ ತಾಲೂಕು ಸಮಿತಿ ಮಾಸ್ಟರ್ ಅವಿನಾಶ್ ಭಿಡೆ, ಸ್ವಯಂ ಸೇವಕರಾದ ಸಚಿನ್ ಭೀಡೆ, ರಮೇಶ್, ಅನಿಲ್, ಜಯರಾಮ್, ಸತೀಶ್ ನೆರಿಯ, ಶರತ್ ನಿಂತಿಕಲ್ಲು ತರಬೇತಿಯಲ್ಲಿ ಪಾಲ್ಗೊಂಡಿದ್ದು, ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿ ಕಿಶೋರ್ ಕುಮಾರ್ ಮಾರ್ಗದರ್ಶನ ನೀಡಿರುತ್ತಾರೆ.

Related posts

ದ.ಕ ಜಿ.ಪಂ. ನೂತನ ಸಿಇಒ ವಿನಾಯಕ್ ಕರ್ತವ್ಯಕ್ಕೆ ಹಾಜರು

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಆಂ.ಮಾ. ಶಾಲೆಯಲ್ಲಿ ಬಕ್ರೀದ್ ಹಬ್ಬ ಆಚರಣೆ

Suddi Udaya

ರೆಖ್ಯ: ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಕಾರು ನಡುವೆ ಅಪಘಾತ

Suddi Udaya

ಗುರುವಾಯನಕೆರೆ ಹೋಟೆಲ್ ರೇಸ್ ಇನ್ ನ ಆಹಾರ ವಿಭಾಗವಾದ “ಪೆಗ್ಸ್ ರೆಸ್ಟೋ ಬಾರ್ & ಫ್ಯಾಮಿಲಿ ರೆಸ್ಟೋರೆಂಟ್” ಹೊಸ ಆಡಳಿತದೊಂದಿಗೆ ಶುಭಾರಂಭ

Suddi Udaya

ಉಜಿರೆ ರುಡ್ ಸೆಟ್ ಸಂಸ್ಥೆಯಲ್ಲಿ ಟಿ.ವಿ ಟೆಕ್ನಿಷಿಯನ್ ತರಬೇತಿ ಸಮಾರೋಪ ಸಮಾರಂಭ

Suddi Udaya

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಶಾಲಾ ಸುರಕ್ಷತೆ ಮತ್ತು ವಿಪತ್ತು ನಿರ್ವಹಣೆ ಅರಿವು ತರಬೇತಿ ಕಾರ್ಯಕ್ರಮ

Suddi Udaya
error: Content is protected !!