37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿ

ಕಣಿಯೂರು ಕುಂಡಗುರಿ ಶ್ರೀಧರ ಸಾವಿನ ಪ್ರಕರಣಸಮಗ್ರ ತನಿಖೆಗೆ ಮೃತನ ಸಹೋದರ ಆಗ್ರಹ

ಬೆಳ್ತಂಗಡಿ: ಕಣಿಯೂರು ಗ್ರಾಮದ ಕುಂಡಗುರಿ ನಿವಾಸಿ ಕೊರಗು ಎಂಬವರ ಪುತ್ರ ಶ್ರೀಧರ(೩೬ವ) ಎಂಬವರ ಅನುಮಾನಾಸ್ಪದ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮೃತರ ಸಹೋದರ ಶಿವಪ್ರಸಾದ್ ಆಗ್ರಹಿಸಿದ್ದಾರೆ.


ಅವರು ಜ.೭ರಂದು ಬೆಳ್ತಂಗಡಿ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀಧರ ಅವರ ಶವ ಆಗಸ್ಟ್ ೨೬ರಂದು ಬೆಳಿಗ್ಗೆ
ನ್ಯಾಯತರ್ಪು ಗ್ರಾಮದ ಪಲ್ಲಾದೆ ಎಂಬಲ್ಲಿ ಕೆರೆಯಲ್ಲಿ ಅನುಮಾನಾಸ್ಪದವಾಗಿ ಪತ್ತೆಯಾಗಿತ್ತು. ಶ್ರೀಧರನ ಮೃತದೇಹದ ಹಣೆ ಭಾಗದಲ್ಲಿ ಏಟು ಬಿದ್ದ ಗಾಯವಿತ್ತು. ಕೈಕಾಲುಗಳು ಒರಟಾಗಿ ದೇಹದಿಂದ ಮೇಲೆತ್ತಿದ ರೀತಿಯಲ್ಲಿ ಮರಗಟ್ಟಿದ ಸ್ಥಿತಿಯಲ್ಲಿತ್ತು. ಕೆರೆಯಲ್ಲಿ ಶವವಾಗಿ ಪತ್ತೆಯಾದ
ಶ್ರೀಧರನ ಅನುಮಾನಾಸ್ಪದ ಸಾವಿನ ಪ್ರಕರಣದ ಬಗ್ಗೆ ದ.ಕ. ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿ, ನಾಲ್ಕು ತಿಂಗಳಿನಿಂದ ಪೊಲೀಸರ
ತನಿಖೆಗಾಗಿ ಕಾಯುತ್ತಿದ್ದೇವೆ. ಇದೀಗ ಮಾನವಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದೇವೆ. ಬೆಳ್ತಂಗಡಿ ಪೋಲೀಸರು ಸ್ಥಳಕ್ಕಾಗಮಿಸಿ ಸ್ಥಳ ಮಹಜರು ನಡೆಸಿ ಇಲಾಖಾ ಪ್ರಕ್ರಿಯೆ ನಡೆಸಿದ್ದರು ಎಂದು ತಿಳಿಸಿದರು.
ನಾನು ಎಸ್ಪಿಗೆ ದೂರು ನೀಡಿ ನಾಲ್ಕು ತಿಂಗಳುಗಳಾದರೂ ಪೊಲೀಸ್ ಇಲಾಖೆ ಪ್ರಕರಣದ ತನಿಖೆಗೆ ಸಂಬಂಧಿಸಿ ಯಾವ ಕ್ರಮಕೈಗೊಂಡಿದೆ ಎಂಬ ಬಗ್ಗೆ ನಮಗೆ ಯಾವುದೇ ಮಾಹಿತಿ ಇದುವರೆಗೂ ಬಂದಿಲ್ಲ. ಶ್ರೀಧರನ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಗಾಯದ ಬಗ್ಗೆ ಉಲ್ಲೇಖಿಸಲಾಗಿಲ್ಲ. ಆತನ ಸಾವಿನ ಬಗ್ಗೆ ಕೆಲ ಅನುಮಾನಗಳನ್ನು ವ್ಯಕ್ತಪಡಿಸಿ ನಾನು ದೂರಿನಲ್ಲಿ ತಿಳಿಸಿದ್ದೇನೆ. ಮುತ್ತರಾಜ್ ಎಂಬಾತ
ಶ್ರೀಧರನನ್ನು ಹುಡುಕೋಣ ಎಂದು ಹೇಳಿ ಕಾಡು ಪ್ರದೇಶವನ್ನು, ದಾಟಿ ಕೆರೆಯ ಬದಿಗೆ ಕರೆದುಕೊಂಡು ಬಂದು ಶ್ರೀಧರನ ಒಂದು ಜೊತೆ ಚಪ್ಪಲನ್ನು ತೋರಿಸಿ, ಮೀನು ಹಿಡಿಯಲು ಕಟ್ಟಿರುವ ಗಾಳ ಮತ್ತು ಶ್ರೀಧರನ ಮೃತದೇಹವನ್ನು ತೋರಿಸಿದ್ದಾನೆ. ಅವರು ಸೇರಿದಂತೆ ಕೆಲವರ ವರ್ತನೆಗಳ ಬಗ್ಗೆ ಅನುಮಾನ ನಮಗಿದೆ ಇದನ್ನು ದೂರಿನಲ್ಲಿ ತಿಳಿಸಿದ್ದೇವೆ. ಶ್ರೀಧರನ ಸಾವಿನಿಂದ ನೊಂದ ನಮ್ಮ ಕುಟುಂಬಕ್ಕೆ ಪೊಲೀಸ್ ಇಲಾಖೆ ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸುವುದಾಗಿ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಂಬಂಧಿ ಶ್ರೀಧರ ಉಪಸ್ಥಿತರಿದ್ದರು.

Related posts

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ನಟ ದೇವರಾಜ್ ಕುಟುಂಬ ಸಮೇತ ಭೇಟಿ

Suddi Udaya

ಉಜಿರೆ ಎಸ್‌ಡಿಎಂ ಆಂ.ಮಾ. ಶಾಲೆಯಲ್ಲಿ ಚಿಂತನಾ ದಿನಾಚರಣೆ

Suddi Udaya

ಉಜಿರೆ: ರುಡ್‌ಸೆಟ್ ಸಂಸ್ಥೆಯಲ್ಲಿ ಎಲೆಕ್ಟ್ರಿಕಲ್ ಮೊಟಾರ್ ರಿವೈಂಡಿಂಗ್ ಮತ್ತು ಮೆನ್ಸ್ ಪಾರ್ಲರ್ ಮೆನೇಜ್‌ಮೆಂಟ್ ತರಬೇತಿಗಳ ಸಮಾರೋಪ ಸಮಾರಂಭ

Suddi Udaya

ಶುಭ ಕಾರ್ಯಕ್ರಮಕ್ಕೆ ಹೋಗಿ ಹಿಂತಿರುಗಿದಾಗ ನಾಲ್ಕೂರು ಬೊಕ್ಕಸ ಬಳಿ ಬೈಕ್ ಸ್ಕಿಡ್ : ಗಂಭೀರ ಗಾಯಗೊಂಡ ಮಹಿಳೆ ಸಾವು

Suddi Udaya

ಧರ್ಮಸ್ಥಳ: ದೊಂಡೋಲೆ ಪರಶುರಾಮ ದೇವಸ್ಥಾನಕ್ಕೆ ಮುಖ್ಯಮಂತ್ರಿಯವರ ಕಾರ್ಯದರ್ಶಿ ಗೋಪಾಲ್ ಪಿ. ಎ ಭೇಟಿ

Suddi Udaya

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ಆದೇಶ ಪ್ರಕರಣ ಪ್ರತಿಭಟನೆಗೆ ಪೊಲೀಸರಿಂದ ಅನುಮತಿ ನಿರಾಕರಣೆ

Suddi Udaya
error: Content is protected !!