ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬದ್ಯಾರು ಮನೆಯಂಗಳದಲ್ಲಿ ನಾಗರಹಾವುಗಳ ಕಾದಾಟ: ಲಾಯಿಲದ ಸ್ನೇಕ್ ಅಶೋಕ್ ರಿಂದ ರಕ್ಷಣೆ

ಬೆಳ್ತಂಗಡಿ: ಮನೆಯೊಂದರ ಅಂಗಳದಲ್ಲಿ ಎರಡು ನಾಗರಹಾವುಗಳು ಪರಸ್ಪರ ಕಾದಾಟ ನಡೆಸಿದ ಘಟನೆ
ಗುರುವಾಯನಕೆರೆ ಸಮೀಪದ ಬದ್ಯಾರು ಎಂಬಲ್ಲಿ ಜ.8 ರಂದು ಮಧ್ಯಾಹ್ನ ನಡೆದಿದೆ.

ಕಾದಾಟದಲ್ಲಿ ಒಂದು ಹಾವು ಗಾಯಗೊಂಡಿದೆ. ಮಧ್ಯಾಹ್ನ ವೇಳೆ ಮನೆ ಅಂಗಳಕ್ಕೆ ಬಂದ ಎರಡು ಹಾವುಗಳು ಏಕಾಏಕಿ ದಾಳಿ ನಡೆಸುತ್ತಿದ್ದನ್ನು ಗಮನಿಸಿದ ಮನೆಯವರು ಉರಗ ರಕ್ಷಕ ಸ್ನೇಕ್ ಅಶೋಕ್ ಲಾಯಿಲ ಅವರನ್ನು ಸಂಪರ್ಕಿಸಿದ್ದರು. ಸ್ಥಳಕ್ಕೆ ಆಗಮಿಸಿದ ಅವರು ಹಾವುಗಳ ಕಾದಾಟವನ್ನು ತಪ್ಪಿಸಿ ಎರಡು ಹಾವುಗಳನ್ನು ಸುರಕ್ಷಿತವಾಗಿ ಹಿಡಿದು ಅರಣ್ಯಕ್ಕೆ ಸೇರಿಸಿದ್ದಾರೆ. ಹಾವುಗಳು ಕಾದಾಟ ನಡೆಸಿದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿಯಲಾಗಿದೆ. ಈ ಸಮಯ ಹಾವುಗಳ ಮಿಲನ ಕಾಲವಾಗಿದ್ದು ಗಂಡು ಹಾವಿನ ಹುಡಾಕಾಟದಲ್ಲಿ ಎರಡು ಹೆಣ್ಣು ಹಾವುಗಳು ಕಾದಾಟ ನಡೆಸಿದೆ. ಅಂದಾಜು 5
4-5ಅಡಿ ಉದ್ದ ವರೆಗೆ ಈ ಎರಡು ಹಾವುಗಳು ಗಾತ್ರವಿತ್ತು ಎಂದು ಅಶೋಕ್ ಸುದ್ದಿ ಉದಯಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

Related posts

ನೇತ್ರಾವತಿ ನದಿ ತಟದಿಂದ ಧರ್ಮಸ್ಥಳ ಅಣ್ಣಪ್ಪ ಸನ್ನಿಧಾನದವರೆಗೆ ಪಾದಯಾತ್ರೆ ಕು.ಸೌಜನ್ಯ ತಾಯಿ ಕುಸುಮಾವತಿ ಭಾಗಿ

Suddi Udaya

ಉಜಿರೆ ಕ್ರೀಡಾ ವಸತಿ ನಿಲಯದಲ್ಲಿ ವಾಸ್ತವ್ಯವಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿನಿ ನಾಪತ್ತೆ

Suddi Udaya

ಆ.24: ಬೆಳ್ತಂಗಡಿ ಮುಳಿಯ ಜುವೆಲ್ಸ್ ನಲ್ಲಿ ಶ್ರೀ ಕೃಷ್ಣಾ ಜನ್ಮಾಷ್ಟಮಿ ಪ್ರಯುಕ್ತ ಕೃಷ್ಣ ವೇಷ ಸ್ಪರ್ಧೆ

Suddi Udaya

ಕಣಿಯೂರು: ದೀಪಾ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ರೆಖ್ಯ: ಹೆದ್ದಾರಿ ಪರಕ್ಕಳದಲ್ಲಿ ಲಾರಿ ಪಲ್ಟಿ

Suddi Udaya

ಧರ್ಮಸ್ಥಳ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ರಕ್ಷಾ ಸಮಿತಿಗೆ ಸದಸ್ಯರ ನೇಮಕ

Suddi Udaya
error: Content is protected !!