September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿರುದ್ದದ ಪ್ರಕರಣ ಹೈಕೋರ್ಟ್‌ನಲ್ಲಿ ವಜಾ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವಿರುದ್ಧ ಕೆಲವು ಆರೋಪಗಳನ್ನು ಮಾಡಿ 2016ರಲ್ಲಿ ದಾಖಲಿಸಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಹೈಕೋರ್ಟ್ ವಜಾಗೊಳಿಸಿದೆ.

ಬೆಳ್ತಂಗಡಿಯ ಗುರುವಾಯನಕೆರೆ ನಿವಾಸಿ ರಂಜನ್ ರಾವ್ ಯರ್ಡೊರು ಅವರು ಬೆಳ್ತಂಗಡಿ ಪೊಲೀಸ್ ಠಾಣೆಗೆ ನೀಡಿದ್ದ ದೂರು ಮತ್ತು ಅದನ್ನು ಆಧರಿಸಿ ಬೆಳ್ತಂಗಡಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿದ್ದ ವಿಚಾರಣ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ವಜಾಗೊಳಿಸಿ ನ್ಯಾ| ಎಂ.ಐ ಅರುಣ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ ಶುಕ್ರವಾರ ಆದೇಶಿಸಿದೆ.

ರಂಜನ್ ರಾವ್ ಯರ್ಡೂರು 2016ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ (ಎಸ್.ಕೆ.ಡಿ.ಆರ್.ಡಿ.ಪಿ) ವಿರುದ್ಧ ಕೆಲವು ಆರೋಪಗಳನ್ನು ಮಾಡಿ ಖಾಸಗಿ ದೂರು ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಶ್ರೀಕ್ಷೇತ್ರದ ಧರ್ಮಾಧಿಕಾರಿ ಡಾ। ವೀರೇಂದ್ರ ಹೆಗ್ಗಡೆ ಸಹಿತ 13 ಮಂದಿ ಟ್ರಸ್ಟಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಶ್ರೀಕ್ಷೇತ್ರದ ಪರ ಹಿರಿಯ ನ್ಯಾಯವಾದಿ ಪಿ.ಪಿ. ಹೆಗ್ಡೆ ವಾದ ಮಂಡಿಸಿದ್ದರು.

ವಿಚಾರಣೆ ವೇಳೆ ಶ್ರೀಕ್ಷೇತ್ರದ ಪರ ವಕೀಲ ಪಿ.ಪಿ. ಹೆಗ್ಡೆ ವಾದ ಮಂಡಿಸಿ, ಯೋಜನೆಯು ಕೇಂದ್ರ ಸರಕಾರ ಹಾಗೂ ಆರ್.ಬಿ.ಐ ಮಾರ್ಗಸೂಚಿಗಳಂತೆ ನಡೆಸಿಕೊಂಡು ಬರಲಾಗುತ್ತಿದೆ. ಯಾವುದೇ ಅಕ್ರಮ ಅಥವಾ ಅವ್ಯವಹಾರ ನಡೆಯುತ್ತಿಲ್ಲ. ಯೋಜನೆಯು ಸಂಪೂರ್ಣ ಕಾನೂನು ಬದ್ದವಾಗಿದೆ. ಶ್ರೀಕ್ಷೇತ್ರ ಹಾಗೂ ಯೋಜನೆಯ ವಿರುದ್ದ ದುರುದ್ದೇಶದಿಂದ ಮತ್ತು ಕ್ಷೇತ್ರದ ಪಾವಿರ್ತ್ಯಕ್ಕೆ ಧಕ್ಕೆ ತರಲು ಹಾಗೂ ಮಾನಹಾನಿ ಉಂಟು ಮಾಡಲು ಈ ಪ್ರಯತ್ನಗಳು ನಡೆದಿವೆ. ಆದ್ದರಿಂದ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಿದರು.

ಈ ವಾದವನ್ನು ಮಾನ್ಯ ಮಾಡಿದ ನ್ಯಾಯಾಲಯ ಸಂಪೂರ್ಣ ಪ್ರಕರಣವನ್ನು ವಜಾಮಾಡಿ ಆದೇಶಿಸಿದೆ. ಅಲ್ಲದೆ ಶ್ರೀಕ್ಷೇತ್ರದ ಹೆಸರು ಕೆಡಿಸಲು ಇಂತಹ ದೂರು ನೀಡಲಾಗಿದೆ. ಮಾನಿಹಾನಿ ಉಂಟು ಮಾಡುವ ಮತ್ತು ಪ್ರಚಾರ ಪಡೆಯುವ ಉದ್ದೇಶದಿಂದ ಸುಳ್ಳು ದೂರು ನೀಡಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.

Related posts

ಬೆಳ್ತಂಗಡಿ: ಸಂತೆಕಟ್ಟೆ ಮೆಸ್ಕಾಂ ರಸ್ತೆಯಲ್ಲಿ ರಾತ್ರಿ ತಿರುಗಾಡುತ್ತಿದ್ದ ಮಾನಸಿಕ ಅಸ್ವಸ್ಥತೆ; ಬೆಳ್ತಂಗಡಿ ಪ.ಪಂ ಅಧ್ಯಕ್ಷ ಜಯಾನಂದ ಗೌಡ ನೇತೃತ್ವದಲ್ಲಿ ಬಾಲಕಿ ಸಿಯೋನ್ ಆಶ್ರಮಕ್ಕೆ ದಾಖಲು

Suddi Udaya

ನಿಡ್ಲೆ ಗ್ರಾಮ ಪಂಚಾಯತ್ ವತಿಯಿಂದ ಮಕ್ಕಳ ಗ್ರಾಮಸಭೆ

Suddi Udaya

ಜಿಲ್ಲಾ ಮಟ್ಟದ ಭಾವೈಕ್ಯತೆ ಮಕ್ಕಳ ಮೇಳ: ಕುಂಭಶ್ರೀ ಶಾಲಾ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya

ಓಡಿಲ್ನಾಳ ಸ.ಉ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಅಕ್ಟೋಬರ್ ನಲ್ಲಿ ಬೆಳ್ತಂಗಡಿ ಇಂದಿರಾ ಕ್ಯಾಂಟೀನ್ ಉದ್ಘಾಟನೆ

Suddi Udaya

ವಿದ್ವತ್ ಪಿಯು ಕಾಲೇಜಿನಲ್ಲಿ ವಿಜ್ -ವರ್ಲ್ಡ್ 2025

Suddi Udaya
error: Content is protected !!