32.1 C
ಪುತ್ತೂರು, ಬೆಳ್ತಂಗಡಿ
September 15, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ಯಕ್ಷಗಾನ ಬಣ್ಣಗಾರಿಕೆ ಶಿಬಿರ

ಪುಂಜಾಲಕಟ್ಟೆ : ಯಕ್ಷಧ್ರುವ ಪಟ್ಲ ಫೌಂಡೇಶನ್ ಇದರ ಪುಂಜಾಲಕಟ್ಟೆ ಘಟಕ, ಶ್ರುತಿ ಆರ್ಟ್ಸ್ ಕಾವಳಕಟ್ಟೆ ಇದರ ಆಶ್ರಯದಲ್ಲಿ ಯಕ್ಷಗಾನ ಬಣ್ಣಗಾರಿಕೆ ತರಬೇತಿ ಶಿಬಿರ ಜೂ.14ರಂದು ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿಯ ಸಭಾಂಗಣದಲ್ಲಿ ನಡೆಯಿತು.

ಘಟಕದ ಉಪಾಧ್ಯಕ್ಷ ಹಿರಿಯ ಯಕ್ಷಗಾನ ಕಲಾವಿದ ದಿವಾಕರ ದಾಸ್ ಕಾವಳಕಟ್ಟೆ ಅವರು ಶಿಬಿರವನ್ನು ಉದ್ಘಾಟಿಸಿ, ಮಾತನಾಡಿ, ಯಕ್ಷಗಾನದಲ್ಲಿ ವೇಷ ಭೂಷಣಗಳ ಜತೆ ಬಣ್ಣಗಾರಿಕೆಯು ಪ್ರಮುಖ ಅಂಗವಾಗಿದೆ. ಪಾತ್ರಗಳ ಸ್ವಭಾವ, ವೈಶಿಷ್ಟಕ್ಕೆ ತಕ್ಕಂತೆ ವಿನ್ಯಾಸಗಳನ್ನು ಮುಖದಲ್ಲಿ ಚಿತ್ರಿಸುವುದಾಗಿದೆ. ಎಳವೆಯಲ್ಲಿ ಮುಖವರ್ಣಿಕೆ ಕರಗತಗೊಳಿಸಲು ಇಂತಹ ಶಿಬಿರಗಳು ಸಹಕಾರಿಯಾಗಿದೆ. ಎಂದು ಹೇಳಿದರು. ಘಟಕದ ಅಧ್ಯಕ್ಷ ಹರೀಂದ್ರ ಟಿ.ಪೈ ಅವರು ಮಾತನಾಡಿ, ಕಲಿತ ವಿದ್ಯೆ ಯಾವತ್ತೂ ವ್ಯರ್ಥವಾಗುವುದಿಲ್ಲ. ಇದನ್ನು ಸದುಪಯೋಗಪಡಿಸಿಕೊಳ್ಳಬೇಕು. ಪಟ್ಲ ಫೌಂಡೇಶನ್ ಮೂಲಕ ಮುಂದಿನ ಪೀಳಿಗೆಗೆ ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಲು ಸಹಕಾರಿಯಾಗಿದೆ ಎಂದರು.

ಗೌರವಾಧ್ಯಕ್ಷ ಪುರುಷೋತ್ತಮ ಪೂಜಾರಿ ಬುಳೆಕ್ಕಿನಕೋಡಿ, ಸಂಚಾಲಕ ರಮೇಶ್ ಶೆಟ್ಟಿ ಮಜಲೋಡಿ, ಶ್ರೀ ಮುರುಘಂದ್ರ ಮಿತ್ರ ಮಂಡಳಿಯ ಅಧ್ಯಕ್ಷ ಚಂದ್ರಶೇಖರ್ ಶೆಟ್ಟಿಗಾರ್, ಮಹಿಳಾ ಘಟಕದ ಗೌರವಾಧ್ಯಕ್ಷೆ ನಿವೃತ್ತ ಶಿಕ್ಷಕಿ ಉಮಾ ಡಿ. ಗೌಡ, ಅಧ್ಯಕ್ಷೆ ಶಶಿಕಲಾ ಗೋಪಾಲ ಪೂಜಾರಿ, ಯಕ್ಷಗುರು ಸಾಯಿಸುಮಾ ನಾವಡ ಕಾರಿಂಜ, ಪದಾಧಿಕಾರಿಗಳಾದ ಶೋಭಾ ಶೆಟ್ಟಿ, ಚಂದ್ರಶೇಖರ ಶೆಟ್ಟಿ ವಿನೋದ್, ಸುರೇಶ ಶೆಟ್ಟಿ ಮಜಲೋಡಿ, ಅಜಿತ್ ಶೆಟ್ಟಿ ಕಾರಿಂಜ ಪ್ರ. ಕಾರ್ಯದರ್ಶಿ ಸತೀಶ್ ಆಚಾರ್ಯ ಬೆರ್ಕಳ, ಮತ್ತಿತರರು ಉಪಸ್ಥಿತರಿದ್ದರು. ಯಕ್ಷಗಾನ ಕಲಾವಿದರಾದ ದಿವಾಕರ ದಾಸ್, ಪ್ರಭಾಕರ ಶೆಟ್ಟಿ ತೆಂಕಕಾರAದೂರು, ಶಶಿಧರ ಬಾಚಕೆರೆ, ಸಾಯಿಸುಮಾ ನಾವಡ ಅವರು ಬಣ್ಣಗಾರಿಕೆ ತರಬೇತಿ ನೀಡಿದರು.

Related posts

ಬೆಳಾಲು ಪೆರಿಯಡ್ಕ ಶಾಲಾ ಅಭಿವೃದ್ದಿಗೆ ಸಕಲ ಸೌಲಭ್ಯಗಳನ್ನು ಒದಗಿಸಿದ ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನ ಸಂಚಾಲಕ ಮೋಹನ್ ಕುಮಾರ್ ಅವರಿಗೆ ಸನ್ಮಾನ

Suddi Udaya

ಮಡಂತ್ಯಾರು: ಎಲೆಕ್ಟ್ರಿಕಲ್ ಉದಯ ಹೃದಯಾಘಾತದಿಂದ ನಿಧನ

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದಿಂದ ಉದಯ್ ಪೂಜಾರಿಯವರಿಗೆ ಸಾಂತ್ವಾನ ನಿಧಿ ಹಸ್ತಾಂತರ

Suddi Udaya

ಮರೋಡಿ: ಗಾಳಿ ಮಳೆಗೆ ಮನೆ ಮೇಲೆ ಬಿದ್ದ ಬೃಹತ್‌ ಗಾತ್ರದ ಮರ, ಪ್ರಾಣಪಾಯದಿಂದ ಪಾರಾದ ಮನೆಯವರು: ಮನೆ ಸಂಪೂರ್ಣ ಹಾನಿ, ಲಕ್ಷಾಂತರ ರೂ. ನಷ್ಟ

Suddi Udaya

ನಿಡ್ಲೆ: ಸಿಡಿಲು ಬಡಿದು ಗಾಣಂತಿ ರಾಜೇಂದ್ರ ಗೌಡರವರ ಪಂಪು ಶೆಡ್, ಬೋರ್ ಪಂಪು ಸಹಿತ ಮನೆಗೆ ಹಾನಿ

Suddi Udaya

ಬೆಳ್ತಂಗಡಿ: ಬಹುಭಾಷೆ ಕವಿಗೋಷ್ಠಿಯಲ್ಲಿ 15 ಕವಿಗಳಿಂದ 7 ಭಾಷೆಯಲ್ಲಿ ಕವನ‌ ಮಂಡನೆ

Suddi Udaya
error: Content is protected !!