23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ರಾಷ್ಟ್ರಮಟ್ಟದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ವಿದ್ವತ್ ಪಿಯು ಕಾಲೇಜಿನ ವಿದ್ಯಾರ್ಥಿಗಳ ಗಮನಾರ್ಹ ಸಾಧನೆ:15 ವಿದ್ಯಾರ್ಥಿಗಳಿಗೆ ಡಿಸ್ಟಿಂಕ್ಷನ್ ನೊಂದಿಗೆ ಸ್ವರ್ಣ ಪದಕ:ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರಿಂದ ವಿದ್ಯಾರ್ಥಿಗಳ ಸಾಧನೆಗೆ ಮೆಚ್ಚುಗೆ:

ಗುರುವಾಯನಕೆರೆ: 2025-26 ನೇ ಶೈಕ್ಷಣಿಕ ವರ್ಷದ ರಾಷ್ಟ್ರಮಟ್ಟದ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಗುರುವಾಯನಕೆರೆಯ ವಿದ್ವತ್ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡಿದ್ದಾರೆ.

ವಿದ್ವತ್ ಪದವಿ ಪೂರ್ವ ಕಾಲೇಜು ಗುರುವಾಯನಕೆರೆ, ಇದೇ ಶೈಕ್ಷಣಿಕ ವರ್ಷದ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಅಂತರಾಷ್ಟ್ರೀಯ ಮಟ್ಟದ ಒಲಿಂಪಿಯಾಡ್ ಪರೀಕ್ಷೆಗಳ ತರಬೇತಿ ನೀಡಿ ಪರೀಕ್ಷೆ ಬರೆಯಿಸಲಾಗಿತ್ತು. ಅದರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಗಮನ ಸೆಳೆಯುವ ಫಲಿತಾಂಶ ಪಡೆದಿದ್ದು, ಗುರುವಾಯನಕೆರೆಯ ಎಲ್ಲಾ ಶಿಕ್ಷಣ ಪ್ರೇಮಿಗಳು ಹೆಮ್ಮೆ ಪಡುವ ವಿಚಾರವಾಗಿದೆ.

ಅಂತರಾಷ್ಟ್ರೀಯ ಕಾಮರ್ಸ್ ಹಾಗೂ ಇಂಗ್ಲೀಷ್ ಒಲಿಂಪಿಯಾಡ್ ಪರೀಕ್ಷೆಯಲ್ಲಿ ಒಟ್ಟು 15 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ನೊಂದಿಗೆ ಸ್ವರ್ಣ ಪದಕಗಳಿಸಿ ದಕ್ಷಿಣ ಕನ್ನಡ ಜಿಲ್ಲೆಯ ಶಿಕ್ಷಣಾಸಕ್ತರ ಗಮನವನ್ನು ವಿದ್ವತ್ ಪಿ.ಯು ನಡೆಗೆ ಸೆಳೆದಿದ್ದಾರೆ, ಕಾಮರ್ಸ್ ಒಲಂಪಿಯಡ್ ನಲ್ಲಿ 6, ಇಂಗ್ಲೀಷ್ ಒಲಿಂಪಿಯಾಡ್ ನಲ್ಲಿ 9. ವಿದ್ಯಾರ್ಥಿಗಳು 90 ಕ್ಕಿಂತ ಅಧಿಕ ಪರ್ಸೆಂಟೈಲ್ ಗಳಿಸುವುದರ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ.

ಇಂಗ್ಲಿಷ್ ಒಲಿಂಪಿಯಾಡ್ ನಲ್ಲಿ ನೇಹಾ ಭಟ್,ಚಂದನ ಅಗ್ನಿಹೋತ್ರಿ, ಭುವನ್ ತೇಜ್,ಅಮೋಘವರ್ಷಿಣಿ ಜೆ, ಸಾಯಿಜಿತ್ ಹೆಗಡೆ, ಪ್ರತ್ಯುಷ್ ಎನ್ ಸಮಾನಿ. ಕಾಮರ್ಸ್ ಒಲಿಂಪಿಯಾಡ್ ನಲ್ಲಿ, ನೇಹಾ ಭಟ್, ರಿಶಾಂತ್ ವೈ ಪಿ, ಜಿ ಕೀರ್ತನ್, ದೀಕ್ಷಿತ್ ಬಿ ಆರ್, ಕ್ರಿತಿಕ್ ಕೆ, ಶಿವತ್ಸ ಛತ್ರ, ಸ್ವರ್ಣ ಪದಕ ಸಾಧನೆ ಮಾಡಿದ್ದಾರೆ.ಭಾರತೀಯ ಒಲಿಂಪಿಯಾಡ್ ಸಂಸ್ಥೆಯು ವಿದ್ವತ್ ಪಿ.ಯು ಕಾಲೇಜಿನ ಸಾಧನೆಯನ್ನು ಗುರುತಿಸಿ ಪ್ರಶಂಸನಾ ಪತ್ರವನ್ನು ಕೂಡ ರವಾನಿಸಿದೆ.

ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿಯ ವ್ಯವಸ್ಥಿತ ಸಾಧಕ ಮಾದರಿ ಪರಿಚಯಿಸಿರುವ ವಿದ್ವತ್ ಪಿ.ಯು ಒಲಿಂಪಿಯಾಡ್ ಪರೀಕ್ಷಾ ಸಾಧನೆಯ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಸಂಚಲನ ಮೂಡಿಸುವತ್ತ ದಾಪುಗಾಲಿಡುವ ಲಕ್ಷಣಗಳು ಈಗಲೇ ಗೋಚರಿಸುತ್ತಿವೆ ಎಂದು ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಸಿಇಟಿ ಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳ ಅಮೋಘ ಸಾಧನೆ, ಜೆಇಇ, ಎನ್ ಡಿ ಎ, ನಾಟಾ ಸೇರಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಅತ್ಯುತ್ತಮ ಸಾಧನೆ

Suddi Udaya

ಎಲ್‌.ಪಿ.ಜಿ ಸಿಲಿಂಡರ್‌ ದರ 100ರೂ ಕಡಿತ

Suddi Udaya

ರಬ್ಬರ್ ಕೃಷಿಕರ ಸಮಸ್ಯೆ ಪರಿಹರಿಸುವಂತೆ ಶಾಸಕ ಹರೀಶ್ ಪೂಂಜ ಇವರಿಗೆ ಮನವಿ

Suddi Udaya

ಮಾಜಿ ಮುಖ್ಯ ಮಂತ್ರಿ ಹೆಚ್. ಡಿ ಕುಮಾರ ಸ್ವಾಮಿ ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ

Suddi Udaya

ಪದ್ಮುಂಜ ಸರಕಾರಿ ಪ. ಪೂ. ಕಾಲೇಜಿಗೆ ಶೇ. 86.04 ಫಲಿತಾಂಶ

Suddi Udaya

ಸುದೆಮುಗೇರು ವೃದ್ಧಾಶ್ರಮದಲ್ಲಿ. ದೇಶದ ಪ್ರಥಮ ಮಹಿಳಾ ಪ್ರಧಾನಿ , ಭೂಸುಧಾರಣಾ ಕಾಯ್ದೆಯ ರೂವಾರಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮದಿನಾಚರಣೆ

Suddi Udaya
error: Content is protected !!