25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ದಕ್ಷಿಣ ಆಫ್ರಿಕಾದಲ್ಲಿ ಅಂತ್ಯಕ್ರಿಯೆವಾಗಲಿದ್ದ ಲಾಯಿಲದ ದಾಮೋದರ ಗೌಡ ರವರ ಮೃತದೇಹವನ್ನು ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಕ್ಯಾ| ಬ್ರಿಜೇಶ್ ಚೌಟ ಮತ್ತು ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ : ಲಾಯಿಲ ಗ್ರಾಮದ ದಾಮೋದರ ಗೌಡ ಇವರು ಮಧ್ಯ ಆಫ್ರಿಕಾದ ಕ್ಯಾಮರೂನ್ ದೇಶದಲ್ಲಿ ಕಳೆದ ಹಲವಾರು ವರ್ಷಗಳಿಂದ ಉದ್ಯೋಗದಲ್ಲಿದ್ದರು, ಕಳೆದ ಡಿಸೆಂಬರ್ 28 ರಂದು ಹೃದಯಾಘಾತದಿಂದ ನಿಧನರಾದರು.
ಆದರೆ ಗೊತ್ತು ಪರಿಚಯ ಇಲ್ಲದ ಪರದೇಶದಿಂದ ಮೃತ ದೇಹ ಮನೆಗೆ ತರುವುದು ಹೇಗೆ ಎಂಬ ವೇದನೆ ಮನೆಯವರಿಗೆ. ಈ ಸಮಯದಲ್ಲಿ ನೆರವಿಗೆ ಬಂದವರು ದಕ್ಷಿಣ ಕನ್ನಡ ಜಿಲ್ಲೆಯ ಸಂಸದರಾದ ಬ್ರಿಜೇಶ್ ಚೌಟರವರು. ಸಂಸದರನ್ನು ಫೋನ್ ಕರೆಯ ಮೂಲಕ ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿದಾಗ, ಕೂಡಲೇ ಸ್ಪಂದಿಸಿ ಅಲ್ಲಿನ ರಾಯಭಾರ ಕಚೇರಿ ಜೊತೆ ಸಂಪರ್ಕ ಸಾಧಿಸಿ ದೇಹವನ್ನು ಆದಷ್ಟು ಬೇಗ ಊರಿಗೆ ತಲುಪಲು ಸಹಾಯ ಮಾಡಿದರು.

ಅಲ್ಲಿನ ವೈದ್ಯಕೀಯ ವೆಚ್ಚ, ವಿಮಾನದ ವೆಚ್ಚ ಮತ್ತಿತರ ಖರ್ಚುಗಳನ್ನು ಭರಿಸಲು ಕುಟುಂಬ ಸಾದ್ಯವಾಗಲಿಲ್ಲ. ಆ ಸಮಯದಲ್ಲಿ ಅಲ್ಲಿ ನೆಲೆಸಿರುವ ಭಾರತೀಯ ಬಂಧುಗಳು ಬಹಳಷ್ಟು ಸಹಾಯಹಸ್ತ ನೀಡಿ ಸುಮಾರು ರೂ.8ಲಕ್ಷಕ್ಕೂ ಹೆಚ್ಚು ಹಣದ ಅವಶ್ಯಕತೆಯನ್ನು ನಿಭಾಯಿಸಿ ಮೃತದೇಹವನ್ನು ವಿಮಾನದ ಮೂಲಕ ಬೆಂಗಳೂರಿಗೆ ಕಳುಹಿಸಿದರು.

ಬೆಂಗಳೂರಿನಿಂದ ಪುನಃ ಅಂಬ್ಯುಲೆನ್ಸ್ ಮೂಲಕ ತರಲು ಕುಟುಂಬದವರಿಗೆ ಕಷ್ಟವಾದಾಗ ನೆರವಿಗೆ ಬಂದವರು ಬೆಳ್ತಂಗಡಿ ಶಾಸಕ ಹರೀಶ್ ಪೂಂಜರವರು. ಮನೆಯವರ ಅಸಹಾಯಕತೆಯನ್ನು ಅರಿತ ಶಾಸಕರು ಅಂಬ್ಯುಲೆನ್ಸ್ ವ್ಯವಸ್ಥೆಯ ಜವಾಬ್ದಾರಿ ಹೊತ್ತರು. ಈ‌ ಮೂಲಕ ವಿದೇಶದಲ್ಲಿ ನಿಧನರಾದ ದಾಮೋದರರ ಮೃತ ದೇಹ ಊರಿಗೆ ತರುವಲ್ಲಿ ಸಹಕರಿಸಿದ ಸಂಸದ ಮತ್ತು ಶಾಸಕರಿಗೆ ಕುಟುಂಬದ ಪರವಾಗಿ ಧನ್ಯವಾದವನ್ನು ತಿಳಿಸಿದ್ದಾರೆ.

Related posts

ಬೆಳ್ತಂಗಡಿ : KAF ಕ್ರಿಯೇಟಿವ್ ಶಾಪ್ ನಲ್ಲಿ ಹಿಲಿಯಂ ಗ್ಯಾಸ್ ಬ್ಲಾಸ್ಟ್ : ಬೆಂಕಿ ಕೆನ್ನಾ ‌ಲಿಗೆ ಸುಟ್ಟು ಭಸ್ಮವಾದ ವಸ್ತುಗಳು

Suddi Udaya

ಬೆಳ್ತಂಗಡಿ ನಗರ ಮಹಾಶಕ್ತಿ ಕೇಂದ್ರದಸಂಚಾಲಕರಾಗಿ ಸುನೀಲ್ ಬೆಳ್ತಂಗಡಿ, ಸಹಸಂಚಾಲಕರಾಗಿ ನಿತಿನ್

Suddi Udaya

ನ್ಯಾಯಾಲಯದ ಆದೇಶ ಉಲ್ಲಂಘನೆ ; ಯೂಟ್ಯೂಬರ್ ಸಮೀರ್ ಎಂ.ಡಿ. ಗೆ ಬಿಗ್ ಶಾಕ್..!! ಹಾಜರಾತಿಗೆ ನೋಟೀಸ್ ಜಾರಿ, ತಕ್ಷಣ ವಿಡಿಯೋ ಡಿಲೀಟ್ ಮಾಡಲು ಆದೇಶ; ಹತ್ತು ಕೋಟಿ ಮಾನನಷ್ಟ ಮೊಕದ್ದಮೆ ದಾಖಲು

Suddi Udaya

ಗೇರುಕಟ್ಟೆ ಫ್ರೌಡ ಶಾಲಾ ಹಿಂಬದಿ ಟವರ್ ಬುಡದಲ್ಲಿ ಬೆಂಕಿ ಜ್ವಾಲೆ: ದೊಡ್ಡ ಅನಾಹುತ ತಪ್ಪಿಸಿದ ಸ್ಥಳೀಯ ಯುವಕರ ತಂಡ

Suddi Udaya

ಆ.17: ಉಜಿರೆಯಲ್ಲಿ ಅಗ್ರಿಲೀಫ್ ಉದ್ಯೋಗ ಮೇಳ : ಅರ್ಹ ಅಭ್ಯರ್ಥಿಗಳಿಗೆ ನೇರ ಸಂದರ್ಶನ

Suddi Udaya

ದಕ್ಷಿಣ ವಲಯ ಇಂಟರ್ ಯೂನಿವರ್ಸಿಟಿ ಚೆಸ್ ಪಂದ್ಯಾವಳಿಗೆ ಎಸ್‌ಡಿಎಂ ಕಾಲೇಜಿನ ಮೂರು ವಿದ್ಯಾರ್ಥಿಗಳು ಆಯ್ಕೆ

Suddi Udaya
error: Content is protected !!