22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಪೊಲೀಸ್ಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ: ಬಸ್ಸಿನಲ್ಲಿ ಮಹಿಳೆಯರ ಬಗ್ಗೆ ಅಶ್ಲೀಲ ಪದ ಬಳಕೆ:ಮೂವರ ಮೇಲೆ ಅಪರಿಚಿತರಿಂದ ಹಲ್ಲೆ; ಪ್ರಕರಣ ದಾಖಲು

ಬೆಳ್ತಂಗಡಿ : ಬಸ್ಸಿನಲ್ಲಿ ಕುಟುಂಬದೊಂದಿಗೆ ಪ್ರಯಾಣಿಸುತ್ತಿದ್ದ ನಾವೂರು ಗ್ರಾಮದ ಮಹಿಳೆ ಮತ್ತು ಅವರಿಬ್ಬರು ಮಕ್ಕಳಿಗೆ ಅಪರಿಚಿತ ಯುವಕರಿಬ್ಬರು ಹಲ್ಲೆ ನಡೆಸಿದ ಘಟನೆ ಜ.10 ರಂದು ನಡೆದಿದೆ. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ನಾವೂರು ಗ್ರಾಮದ ನಿರಿಂದಿ ನಿವಾಸಿ ರಝಾಕ್ ಅವರ ಪತ್ನಿ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್(19) ಹಲ್ಲೆಗೊಳಗಾದವರು. ಈ ಪೈಕಿ ಮುಝಪರ್ ಅವರಿಗೆ ತಲೆಗೆ ಹೆಚ್ಚಿನ ಗಾಯವಾಗಿದೆ. ಅವರ ಜೊತೆಗೆ ಎಳೆಯ ಪ್ರಾಯದ ಇಬ್ಬರು ಮಕ್ಕಳೂ ಕೂಡ ಇದ್ದರು. ಅವರು ಈ‌ ಘಟನೆ ನೋಡಿ ಭಯಭೀತರಾಗಿದ್ದರು.

ಮಂಗಳೂರಿನ ಉಚ್ಚಿಲ ಎಂಬಲ್ಲಿ ರವಿವಾರ ನಡೆಯಬೇಕಿದ್ದ ಕುಟುಂಬದ ಕಾರ್ಯಕ್ರಮಕ್ಕೆ ಹೋಗುವ ಉದ್ದೇಶದಿಂದ ಬೆಂಗಳೂರಿನಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಮುಝಪರ್ ಅವರು ಕಳೆದ ಜ.9 ರಂದು ನಾವೂರು ಮನೆಗೆ ಆಗಮಿಸಿ ಜ.10 ರಂದು 3 ಗಂಟೆಗೆ ತಾಯಿ ಸಹೋದರ ಸಹಿತ ಕೆ‌ಎಸ್‌ಆರ್‌ಟಿಸಿ ಬಸ್ಸಿನಲ್ಲಿ ಮಂಗಳೂರಿಗ ಪ್ರಯಾಣ ಹೊರಟಿದ್ದರು. ಇವರ ಜೊತೆ ಜೊತೆಗೆ ಬೆಳ್ತಂಗಡಿಯಲ್ಲಿ ಬಸ್ಸೇರಿದ್ದ ಇಬ್ಬರು ಅಪರಿಚಿತ ವ್ಯಕ್ತಿಗಳು ಯಾವುದೋ ಅಮಲು ಸೇವಿಸಿದ್ದವರ ರೀತಿ ಕಾಣುತ್ತಿದ್ದವರು ಮಹಿಳೆಯರೂ ಇದ್ದ ಬಸ್ಸಿನಲ್ಲಿ ಜೋರಾದ ಶಬ್ಧದಲ್ಲಿ ಕೆಟ್ಟ ಭಾಷೆಯಲ್ಲಿ‌ ಮಾತನಾಡುತ್ತಿದ್ದರು. ಇದು ಇತರ ಪ್ರಯಾಣಿಕರಿಗೆ ಮತ್ತು ಮಹಿಳೆಯರಿಗೆ ಮುಜುಗರದ ಸನ್ನಿವೇಶ ನಿರ್ಮಿಸಿತ್ತು. ಅವರ ಈ ವರ್ತನೆಯನ್ನು‌ ಕಂಡು ಮುಝಫರ್ ಸಾರ್ವಜನಿಕವಾಗಿ ನೀವು ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಇಬ್ಬರು ಯುವಕರಿಗೆ ತಿಳಿಸಿದನ್ನೇ ನೆಪವಾಗಿಟ್ಟುಕೊಂಡು ಅಪರಿಚಿತರು ಇವರ ಮೇಲೆ ಹಲ್ಲೆ‌‌ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಆರಂಭದಲ್ಲಿ ಜಗಳ ಶುರು ಮಾಡಿದ ಯುವಕರ ವರ್ತನೆಯಿಂದ ಮುಝಫರ್ ಅವರ ತಾಯಿ ಕಂಡೆಕ್ಟರ್ ಬಳಿ ಬಸ್ಸು ನಿಲ್ಲಿಸುವಂತೆ ಕೇಳಿಕೊಂಡರು.ಮದ್ದಡ್ಕ‌ ಬಸ್ ನಿಲ್ದಾಣದ ಎದುರು ಹೋಗಿ‌ ಚಾಲಕ ಬಸ್ಸು‌ ನಿಲ್ಲಿಸಿದರು. ಈ ವೇಳೆ ಮುಝಪರ್ ಅವರ ತಾಯಿಯನ್ನು ದೂಡಿ, ಸಹೋದರರು ಇಬ್ಬರಿಗೂ ಹಲ್ಲೆ‌ನಡೆಸಿ ಇಬ್ಬರೂ ಯುವಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಘಟನೆಯಿಂದ ಗಾಯಗೊಂಡ ಆಸೀದಾ(38), ಪುತ್ರರಾದ ಮುಝಫರ್(20) ಮತ್ತು ಮುರ್ಷಿದ್(19) ಮೂವರು ಗುರುವಾಯನಕರೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಗೆ ಗಾಯಗೊಂಡ ಮುರುಫರ್ ದೂರಿನ ಮೇರೆಗೆ ಜ.10 ರಂದು ಪೊಲೀಸರು 74 115(2) 118(2) 352 r/w 3(5) BNS ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಚುರುಕುಗೊಳಿಸಿದ್ದಾರೆ.

Related posts

ಅಳದಂಗಡಿಯಲ್ಲಿ ಸರಕಾರಿ ಸೌಲಭ್ಯ ವಂಚಿತರಾದ ವೃದ್ಧ ಮಹಿಳೆ: ಗ್ರಾ.ಪಂ ಅಧಿಕಾರಿಗಳು ಭೇಟಿ ನೀಡಿ ಮೂಲ ಸೌಕರ್ಯ ಒದಗಿಸುವ ಭರವಸೆ : ” ಸುದ್ದಿ ಉದಯ” ಸ್ಪೆಷಲ್ ರಿಪೋರ್ಟ್ ಇಫೇಕ್ಟ್

Suddi Udaya

ಕೊಜಪ್ಪಾಡಿ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಸೌತಡ್ಕ ಶ್ರೀ ಮಹಾಗಣಪತಿ ಕ್ಷೇತ್ರಕ್ಕೆ ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ

Suddi Udaya

ಪ್ಲಾಸ್ಟಿಕ್ ಏಜೆಂಟಿಗೆ ಧರ್ಮಸ್ಥಳ ಗ್ರಾಮ ಪಂಚಾಯಿತಿನಿಂದ ದಂಡ

Suddi Udaya

ಪಾಲಡ್ಕ ಹಾಲು ಉತ್ಪಾದಕರ ಸಹಕಾರ ಸಂಘ: ಅಧ್ಯಕ್ಷರಾಗಿ ಧರ್ಣಪ್ಪ ಕುಲಾಲ್, ಉಪಾಧ್ಯಕ್ಷರಾಗಿ ಹರೀಶ್ ಗೌಡ ಆಯ್ಕೆ

Suddi Udaya

ಬೆಳ್ತಂಗಡಿ ಕೋಟಕ್ ಲೈಫ್ 2ನೇ ವರ್ಷಕ್ಕೆ ಪಾದಾರ್ಪಣೆ

Suddi Udaya
error: Content is protected !!