30 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅಜ್ಮೀರ್ ಖಾಜಾ ಸಂಸ್ಮರಣೆ; ಸರ್ವಧರ್ಮೀಯ ಐದು ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಬೆಳ್ತಂಗಡಿ: ಅಜ್ಮೀರ್ ಖಾಜಾ ಅವರ ಉರೂಸ್ ಕಾರ್ಯಕ್ರಮ ಇಸ್ಲಾಮಿಕ್ ಮಾಸದ ‘ರಜಬ್’ ಈ ತಿಂಗಳಲ್ಲಿ ನಡೆದಿದ್ದು, ಖಾಜಾ ಅವರ ಸಂಸ್ಮರಣಾರ್ಥ ಉದ್ಯಮಿಯೊಬ್ಬರು ಐವರು ಸರ್ವಧರ್ಮೀಯ ಕುಟುಂಬಗಳಿಗೆ ಆಹಾರದ ಕಿಟ್ ಹಂಚುವ ಮೂಲಕ ಮಾದರಿಯಾಗಿದ್ದಾರೆ.

ಹಿರಿಯ ಪತ್ರಕರ್ತ ಅಚ್ಚು ಮುಂಡಾಜೆಯವರ ಸಹಕಾರದೊಂದಿಗೆ, ಯುವ ಉದ್ಯಮಿ ಹಾಗೂ ಸಾಮಾಜಿಕ ಸಂಘಟಕ, ಕೊಡುಗೈ ದಾನಿ ಹಾಜಿ ಶಮೀಮ್ ಯೂಸುಫ್ ಮದ್ದಡ್ಕ ಅವರೇ ಈ ಮಾದರಿ ಕಾರ್ಯ ಮಾಡಿದವರು.

ಎಳೆಯ ಮಗುವಿನ ಲಿವರ್ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿರುವ ಕಡಿರುದ್ಯಾವರದ ಹಿಂದೂ ಕುಟುಂಬವೊಂದಕ್ಕೆ, ಉಳಿದಂತೆ ವಿಕಲಚೇತನರಾಗಿ ಮಲಗಿದಲ್ಲೇ ಇರುವ ಬೆಳ್ತಂಗಡಿ ಸಂಜಯ ನಗರದ ಕುಟುಂಬವೊಂದಕ್ಕೆ, ಮೇಲಂತಬೆಟ್ಟು ಗ್ರಾಮದ ಇಬ್ಬರು ವಿಧವೆಯರು ಹಾಗೂ ಕೂಲಿ ಕೆಲಸಕ್ಕೆ ತೆರಳುತ್ತಿರುವ ಮುಸ್ಲಿಂ ಕುಟುಂಬಕ್ಕೆ ಶಮೀಮ್ ಅವರು ರೇಷನ್ ಕಿಟ್ ಹಸ್ತಾಂತರಿಸಿದರು.

Related posts

ಬೆಳ್ತಂಗಡಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್ , ತಾಲೂಕು ಸಮಿತಿಯ ಆಶ್ರಯದಲ್ಲಿ ವಾಲ್ಮೀಕಿ ಜಯಂತಿಯ ಪ್ರಯುಕ್ತ ‘ವಾಲ್ಮೀಕಿ ಜೀವನಾದರ್ಶ’ ಉಪನ್ಯಾಸ ಕಾರ್ಯಕ್ರಮ

Suddi Udaya

ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದಿಂದ ಆಟಿಡೊಂಜಿ ದಿನ

Suddi Udaya

ಫೆ. 2: ಧರ್ಮಸ್ಥಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಮೂರ್ತಿಗೆ ಪಾದಾಭಿಷೇಕ

Suddi Udaya

ಅಳದಂಗಡಿ ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷರಾಗಿ ಕಿರಣ್ ಶೆಟ್ಟಿ ಆಯ್ಕೆ

Suddi Udaya

ನಂದಿಬೆಟ್ಟ: ನಂದಿಕೇಶ್ವರ ಭಜನಾ ಮಂಡಳಿ ಸಮಿತಿ ರಚನೆ

Suddi Udaya

ವಾಣಿ ಆಂಗ್ಲ ಮಾಧ್ಯಮ ಪ್ರೌಢಶಾಲೆ: ವಿದ್ಯಾರ್ಥಿ ಮಂತ್ರಿಮಂಡಲ ರಚನೆ

Suddi Udaya
error: Content is protected !!