ತೆಂಕಕಾರಂದೂರು: ಹಿಂದೂ ಸಂಗಮ ಆಯೋಜನಾ ಸಮಿತಿ ನೇತೃತ್ವದಲ್ಲಿ ಬಳಂಜ ಮಂಡಲ ವತಿಯಿಂದ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಜನಜಾಗೃತಿ ವೇದಿಕೆಯ ಸ್ಥಾಪಕಾದ್ಯಕ್ಷ ಕೆ.ವಸಂತ ಸಾಲಿಯಾನ್ ಅವರು ಜ 11 ರಂದು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಜ.25 ರಂದು ಮಧ್ಯಾಹ್ನ 2.30 ಕ್ಕೆ ಹಿಂದೂ ಸಂಗಮ ಕಾರ್ಯಕ್ರಮ ನಡೆಯಲಿದೆ. ಹಿಂದೂ ಸಂಗಮ ಶೋಭಾಯಾತ್ರೆಯು ಗುಂಡೇರಿಯಿಂದ ಶ್ರೀ ವಿಷ್ಣುಮೂರ್ತಿ ದೇವಸ್ಥಾನದವರೆಗೆ ಸಾಗಿ ಬರಲಿದೆ.ನಂತರ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಉದ್ಯಮಿ ಶೀತಲ್ ಜೈನ್ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಸಮಿತಿ ಉಪಾಧ್ಯಕ್ಷರಾದ ನಿತ್ಯಾನಂದ ಶೆಟ್ಟಿ ನೊಚ್ಚ, ಬಳಂಜ ಮಂಡಲ ನಿರ್ವಹಣಾ ಸಮಿತಿ ಸಂಚಾಲಕ ರಾಕೇಶ್ ಹೆಗ್ಡೆ, ಪ್ರಮುಖರಾದ ಸಂತೋಷ್ ಕುಮಾರ್ ಕಾಪಿನಡ್ಕ, ಸದಾನಂದ ಪೂಜಾರಿ ಉಂಗಿಲಬೈಲು, ಸುಧೀರ್ ಆರ್ ಸುವರ್ಣ, ನವೀನ್ ಕೆ ಸಾಮಾನಿ, ಶ್ರೀನಿವಾಸ್ ರೈ ಕಾರಂದೂರು, ರಾಘವೇಂದ್ರ ಭಟ್ ಬಳಂಜ, ಪ್ರಶಾಂತ್ ಶೆಟ್ಟಿ ಕರಂಬಾರು, ರಮೇಶ್ ಬಜನೋಡಿ, ವಿದ್ಯಾನಂದ ಕಟ್ಟೆ , ಲೀಲಾವತಿ ಕಟ್ಟೆ, ಪ್ರಕಾಶ್ ಆಚಾರ್ಯ, ರಕ್ಷಿತ್ ಕರಂಬಾರು, ಸೋಮನಾಥ ಶಿರ್ಲಾಲು ಹಾಗೂ ಇತರರು ಉಪಸ್ಥಿತರಿದ್ದರು.











