37.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಪಡಂಗಡಿ : ಕುಂಡದಬೆಟ್ಟು ಹಿಂದೂ ಸಂಗಮದ ಆಮಂತ್ರಣ ಪತ್ರಿಕೆ ಬಿಡುಗಡೆ

ಪಡಂಗಡಿ: ಕುಂಡದಬೆಟ್ಟು ಹಿಂದೂ ಸಂಗಮ ಆಯೋಜನಾ ಸಮಿತಿ ಪಡಂಗಡಿ ಮಂಡಲ ವತಿಯಿಂದ ನಡೆಯುವ ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಹಿರಿಯ ಸ್ವಯಂ ಸೇವಕ ಮಲ್ಲಿನಾಥ ರವರು ಜ.12ರಂದು ಬಿಡುಗಡೆಗೊಳಿಸಿ ಶುಭಹಾರೈಸಿದರು.

ಫೆ.1ರಂದು ಅಪರಾಹ್ನ ಗಂಟೆ 3.00 ಕ್ಕೆ ಹಿಂದೂ ಸಂಗಮ ಕಾರ್ಯಕ್ರಮವು ಮಂಜುಶ್ರೀ ಭಜನಾ ಮಂದಿರ ಕುಂಡದಬೆಟ್ಟು ಇಲ್ಲಿ ನಡೆಯಲಿದೆ. ಶೋಭಾಯಾತ್ರೆಯು ಗೋಳಿಯಂಗಡಿ ಎಸ್.ಡಿ.ಎಂ. ಐಟಿಐ ನಿಂದ ಮಂಜುಶ್ರೀ ಭಜನಾ ಮಂದಿರದವರೆಗೆ ನಡೆಯಲಿದೆ. ಸಭಾ ಕಾರ್ಯಕ್ರಮವನ್ನು ಧರ್ಮಸ್ಥಳ ಶ್ರೀ ರಾಮಕ್ಷೇತ್ರ ಮಹಾಸಂಸ್ಥಾನಮ್ ಜಗದ್ಗುರು ಪೀಠದ ಪೀಠಾಧೀಶರಾದ 1008 ಮಹಾಮಂಡಲೇಶ್ವರ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಭಾಧ್ಯಕ್ಷತೆಯನ್ನು ದ.ಕ.ಜಿಲ್ಲಾ ಪರವನ್ ಸಂಘ ಉಪಾಧ್ಯಕ್ಷ ಎಚ್. ಪದ್ಮ ಹಚ್ಚೇವುಪಲ್ಕೆ ವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಕೆ.ವೈ ಈಶ್ವರ ಭಟ್ , ಸೋಮನಾಥ ಕೆವೈ , ಶಿವಾನಂದ, ಸಂತೋಷ್ ಜೈನ್, ಪ್ರಕಾಶ ಪುರೋಹಿತ್, ಸಂತೋಷ್ ಜೈನ್ ಪಡಂಗಡಿ, ರತ್ನಾಕರ ಬರ್ಕರೆ, ಅನಿಲ್ ಹೆಗ್ಡೆ ಪಡಂಗಡಿ, ಮಂಡಲದ ಹಿಂದೂ ಸಂಘ ಸಮಿತಿ ಅಧ್ಯಕ್ಷ ಪ್ರಸನ್ನ ಹೆಬ್ಬಾರ್, ಆನಂದ ಎನ್, ರವಿ ಭಟ್, ರೋಹಿತ್ ಸಂಬಿಬೆಟ್ಟ, ದಿನಕರ ಕುಲಾಲ್, , ಶೀನ ಪೂಜಾರಿ, ಧರ್ಣಪ್ಪ , ಭರತ್ ರಾಜ್ ಆಮೈ, ನಿರಂಜನ ಪಾರೊಟ್ಟು ಉಪಸ್ಥಿತರಿದ್ದರು.

Related posts

ತೋಟತ್ತಾಡಿ: ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಪ್ರಥಮ ವರ್ಷದ ವರಮಹಾಲಕ್ಷ್ಮಿ ಪೂಜೆ

Suddi Udaya

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ: ಹಿರಿಯ ಮತ್ತು ಕಿರಿಯ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಪಿ.ಎಂ.ಶ್ರೀ ಸ.ಉ.ಪ್ರಾ.ಶಾಲೆ ಬಜಿರೆ

Suddi Udaya

ಎಕ್ಸೆಲ್ ಕಾಲೇಜಿನಲ್ಲಿ 78ನೇ ಸ್ವಾತಂತ್ರ್ಯೋತ್ಸವದ ಸಂಭ್ರಮ

Suddi Udaya

ಉಜಿರೆ ಎಸ್ ಡಿ ಎಂ ಪದವಿಪೂರ್ವ ಕಾಲೇಜಿನ ಕಬಡ್ಡಿ ಆಟಗಾರ ರಾಷ್ಟ್ರ ಮಟ್ಟದ ಪಂದ್ಯಾಟಕ್ಕೆ ಆಯ್ಕೆ

Suddi Udaya

ನಾಳ: ಶಿಥಿಲ ಗೊಂಡ ಅಂಗನವಾಡಿ ಕೇಂದ್ರಕ್ಕೆ ತಡೆ ಬೇಲಿ ಹಾಗೂ ನೂತನ ಕಟ್ಟಡ ರಚನೆಗೆ ಪೋಷಕರ ಆಗ್ರಹ

Suddi Udaya

ಪೆರಾಡಿ : ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದ ಮಹಿಳೆ ನೇಣು ಬಿಗಿದು ಆತ್ಮಹತ್ಯೆ

Suddi Udaya
error: Content is protected !!