38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬಾರ್ಯ ಕ್ಷೇತ್ರದಲ್ಲಿ ಡಾ. ಯೋಗಿಂದ್ರ ಭಟ್ಟರಿಗೆ ಅಭಿನಂದನೆ

ಬೆಳ್ತಂಗಡಿ: ಅಮೆರಿಕಾದ ಫ್ಲೋರಿಡಾದ ಯೋಗ ಯುನಿವರ್ಸಿಟಿಯಿಂದ ಉಪವಾಸ ಮತ್ತು ಆಧ್ಯಾತ್ಮಿಕ ಪ್ರಗತಿ ಎಂಬ ವಿಷಯದ ಮೇಲೆ ಮಹಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದ ಬಂಟ್ವಾಳ ತಾಲೂಕಿನ ಉಳಿ ಗ್ರಾಮದ ಡಾ.ಯೋಗಿಂದ್ರ ಭಟ್ ಇವರಿಗೆ ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದ ವಠಾರದಲ್ಲಿ ಇಂಜಿನಿಯರ್ ಯಜ್ಞೇಶ್ ಪುತ್ತಿಲ ನೇತೃತ್ವದಲ್ಲಿ ಅಭಿನಂದನಾ ಸಮಾರಂಭವು ಜರಗಿತು.

ದೇವಳದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ಅಧ್ಯಕ್ಷತೆ ವಹಿಸಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಅಧ್ಯಕ್ಷ ಭಾಗವತ ಪಟ್ಲ ಸತೀಶ್ ಶೆಟ್ಟಿ ಅಭಿನಂದನಾ ನುಡಿಗಳನ್ನಾಡಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜ, ಪುರುಷೋತ್ತಮ ಭಂಡಾರಿ ಮಂಗಳೂರು ಸುದೇಶ್ ರೈ ಮಂಗಳೂರು, ಅರ್ಚಕರಾದ ಗುರುಪ್ರಸಾದ್ ನೂರಿತ್ತಾಯ, ಸೂರ್ಯನಾರಾಯಣ ಕುದ್ದಣ್ಣಾಯ, ಸೇಸಪ್ಪ ಸಾಲಿಯನ್, ಕುಶಾಲಪ್ಪ ಗೌಡ, ವಿಠಲದಾಸ ಕಲ್ಲೂರಾಯ,ಸುಬ್ರಹ್ಮಣ್ಯ ಬಾರಿತ್ತಾಯ, ದಾಮೋದರ ನಾಯಕ್, ಮನೋಹರ ಶೆಟ್ಟಿ ಮತ್ತು ಯೋಗೇಂದ್ರ ಭಟ್ಟರ ಅಭಿಮಾನಿ ಬಳಗದವರು ಹಾಗೂ ಆಡಳಿತ ಸೇವಾ ಟ್ರಸ್ಟಿನ ಪದಾಧಿಕಾರಿಗಳು ಉಪಸ್ಥಿತರಿದ್ದರು

ಆಮಂತ್ರಣ ಪತ್ರಿಕೆ ಬಿಡುಗಡೆ
ಈ ಸಂದರ್ಭದಲ್ಲಿ ಫೆಬ್ರವರಿ 6,7ರಂದು ಜರಗಲಿರುವ ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೆಯ ಆಮಂತ್ರಣ ಪತ್ರಿಕೆಯನ್ನು ಡಾ. ಯೋಗಿಂದ್ರ ಭಟ್ ಬಿಡುಗಡೆಗೊಳಿಸಿದರು.
ಕುಮಾರಿ ಪುಷ್ಪ ಪ್ರಸನ್ನ ಪ್ರಾರ್ಥಿಸಿದರು. ರಾಜೇಶ್ ರೈ ಹೆನ್ನಡ್ಕ ಸ್ವಾಗತಿಸಿ ಪ್ರವೀಣ್ ಎಂ ಬಾರ್ಯ ವಂದಿಸಿದರು. ದಿನೇಶ್ ಮತ್ತು ಸಂದೇಶ್ ಆಗ್ಫಲ ಕಾರ್ಯಕ್ರಮ ನಿರೂಪಿಸಿದರು.

Related posts

ಸುದ್ದಿ ಉದಯ ಫಲಶ್ರುತಿ: ಮದ್ದಡ್ಕ ಪೇಟೆಯಲ್ಲಿ ಸರ್ವಿಸ್ ವಯಾರು ತೆರವುಗೊಳಿಸಿದ ಮೆಸ್ಕಾಂ ಇಲಾಖೆ

Suddi Udaya

ಬೆಳ್ತಂಗಡಿಯ ‘ಆಲ್ಫಾ ಕೋಟ್’ ನಿವಾಸಿ ಮೇರಿ ಮಾಡ್ತಾ ನಿಧನ

Suddi Udaya

ಮಾಲಾಡಿ ಗ್ರಾ.ಪಂ. ವ್ಯಾಪ್ತಿಯ ಶಕ್ತಿನಗರದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ಕುರಿತು ಐಇಸಿ ಕಾರ್ಯಕ್ರಮ

Suddi Udaya

ಉಜಿರೆ: ರಾಷ್ಟ್ರೀಯ ಸೇವಾ ಯೋಜನೆ ಗೀತೆಗಳ ಗಾಯನ ಕಾರ್ಯಾಗಾರ

Suddi Udaya

ಕೊಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ: ವರದಿ ಸಾಲಿನಲ್ಲಿ ರೂ 137.95 ಕೋಟಿ ವ್ಯವಹಾರ, ರೂ. 53.26 ಲಕ್ಷ ನಿವ್ವಳ ಲಾಭ, ಸದಸ್ಯರಿಗೆ ಶೇ 9.50 ಡಿವಿಡೆಂಟ್

Suddi Udaya

ಉಜಿರೆ ಶ್ರೀ ಧ.ಮಂ. ಅನುದಾನಿತ ಸೆಕೆಂಡರಿ ಶಾಲೆಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆ

Suddi Udaya
error: Content is protected !!