ಆಯ್ಕೆಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸೌಭಾಗ್ಯ ವಿಕಲಚೇತನರ ಪತ್ತಿನ‌ ಸಹಕಾರಿ ಸಂಘದ ನಿರ್ದೇಶಕರಾಗಿ ಅಶ್ರಫ್ ಆಲಿಕುಂಞಿ ಆಯ್ಕೆ

ಬೆಳ್ತಂಗಡಿ: ರಾಜ್ಯ ಮಟ್ಟದಲ್ಲಿ ನೋಂದಾವಣೆಗೊಂಡಿರುವ ಸೌಭಾಗ್ಯ ವಿಕಲಚೇತನರ ಪತ್ತಿನ‌ ಸಹಕಾರಿ ಸಂಘ ಕಡಬ ಇದರ ನಿರ್ದೇಶಕರಾಗಿ ಹಿರಿಯ ಪತ್ರಕರ್ತ ಹಾಗೂ ಸಂಘಟಕ ಅಶ್ರಫ್ ಆಲಿಕುಂಞಿ ಮುಂಡಾಜೆ ಆಯ್ಕೆಯಾಗಿದ್ದಾರೆ.

ಸಂಘದ ಬೈಲಾದಲ್ಲಿ ನಮೂದಿಸಿದ 53/1 ರ ಪ್ರಕಾರ ಖಾಲಿಯಾದ ಹಿಂದುಳಿದ ವರ್ಗ ಸ್ಥಾನಕ್ಕೆ ನಿರ್ದೇಶಕರಾಗಿ ಆಯ್ಕೆ ಮಾಡಿದ ಬಗ್ಗೆ ಅಧಿಕೃತ ಆದೇಶ ಬಿಡುಗಡೆಗೊಂಡಿದೆ.‌ ಇದರ ಜೊತೆಗೆ ಬ್ಯಾಂಕಿನ ಬೆಳ್ತಂಗಡಿ ಶಾಖೆಯ ಎಲ್ಲಾ ವ್ಯವಹಾರವನ್ನೂ ನೋಡಿಕೊಳ್ಳುವಂತೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.

ಸೌಭಾಗ್ಯ ಸೊಸೈಟಿಯು ಕಡಬದಲ್ಲಿ‌ ಕೇಂದ್ರ ಕಚೇರಿ ಹೊಂದಿದ್ದು, ಸುಳ್ಯ, ಕೊಡಗಿನ ವಿರಾಜಪೇಟೆ ಹಾಗೂ ಕಳೆದ 11 ತಿಂಗಳಿನಿಂದ ಬೆಳ್ತಂಗಡಿಯಲ್ಲೂ ಶಾಖೆ ಹೊಂದಿ ತಾ.ಪಂ ಕಚೇರಿ‌ ಬಳಿ ಕಾರ್ಯನಿರ್ವಹಿಸುತ್ತಿದೆ.
ವಿಕಲ ಚೇತನರಿಗಾಗಿಯೇ ಇರುವ ಈ ಸಂಸ್ಥೆಯಲ್ಲಿ ಇತರರಿಗೂ ಹಣಕಾಸು ವ್ಯವಹಾರದ ಅವಕಾಶಗಳನ್ನು ಒದಗಿಸುತ್ತಿದೆ.

ಕಳೆದ 26 ವರ್ಷಗಳಿಂದ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಹಿರಿಯ ವರದಿಗಾರರಾಗಿ, ಜನಜಾಗೃತಿ ವೇದಿಕೆಯ ವ್ಯಸನಮುಕ್ತ ಅಭಿಯಾನದ ಸಂಪನ್ಮೂಲ ವ್ಯಕ್ತಿಯಾಗಿ, ಅತ್ಯುತ್ತಮ ಕಾರ್ಯಕ್ರಮ ಉದ್ಘೋಷಕರಾಗಿ, ವಾಗ್ಮಿಗಳಾಗಿ, ಸಂಘಟಕರಾಗಿ, ಸಮಾಜ ಸೇವಕರಾಗಿ ಗುರುತಿಸಿಕೊಂಡಿರುವ ಅಶ್ರಫ್ ಆಲಿಕುಂಞಿ ಮುಂಡಾಜೆ ಅವರು ಸರಕಾರದ ಪ್ರವಾಸೋದ್ಯಮ ಇಲಾಖೆಯಿಂದ ನೋಂದಾಯಿತಗೊಂಡಿರುವ “ತಮನ್ನಾ ಹೋಮ್ ಸ್ಟೇ” ಎಂಬ ಉದ್ಯಮವನ್ನೂ ಕೂಡ ಬೆಳ್ತಂಗಡಿ ನಗರದಲ್ಲಿ ನಡೆಸಿಕೊಂಡು‌ ಬರುತ್ತಿದ್ದಾರೆ.
ಸಾಮಾಜಿಕ ಸಂಘಟನೆಗಳಾದ ಯಂಗ್ ಚಾಲೆಂಜರ್ಸ್ ಕ್ರೀಡಾ ಸಂಘ, ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘ, ತಾ. ಕನ್ನಡ ಸಾಹಿತ್ಯ ಪರಿಷತ್ತು ಮೊದಲಾದ ಸಂಘಟನೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.

Related posts

ರಕ್ತೇಶ್ವರಿಪದವು ಭಜನಾ ಮಂಡಳಿ ವತಿಯಿಂದ ನಗರ ಭಜನೆಗೆ ಚಾಲನೆ

Suddi Udaya

ಕಕ್ಕಿಂಜೆ ಯುವಕ ಆಲ್ವಿನ್ ಸಿ. ಜೆ ಗೆ ಅಂತರರಾಷ್ಟ್ರೀಯ ಮಟ್ಟದ “ಯುವ ವಿಜ್ಞಾನಿ ಪ್ರಶಸ್ತಿ” ಗೌರವ

Suddi Udaya

ಡಿ.12ರಂದು ಬೆಳ್ತಂಗಡಿಯಲ್ಲಿ ವಿದ್ಯುತ್ ನಿಲುಗಡೆ

Suddi Udaya

ಬಿಜೆಪಿ ಚಾರ್ಮಾಡಿ ಶಕ್ತಿಕೇಂದ್ರದ ಬೂತ್ ಮಟ್ಟದ ಯುವ ಮೋರ್ಚಾ ಸಂಚಾಲಕರ ಆಯ್ಕೆ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

Suddi Udaya

ಸುಳ್ಯ ಶಾಸಕಿಯ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ : ಬೆಳ್ತಂಗಡಿ ಠಾಣೆಯಲ್ಲಿ ಬಿಜೆಪಿ ಎಸ್ಸಿ ಮೋರ್ಚಾದಿಂದ ದೂರು ದಾಖಲು

Suddi Udaya
error: Content is protected !!