25.8 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲದಲ್ಲಿ ಎಸ್.ಎಂ.ಇ.ಗ್ರೂಪ್ಸ್ ನ ಸಹ ಸಂಸ್ಥೆ “ಯುನಿಕ್ ಎಂಟರ್‌ಪ್ರೈಸಸ್” ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ಲಾಯಿಲದಲ್ಲಿರುವ ನೂರೂಲ್‌ಹುದಾ ಕಟ್ಟಡದಲ್ಲಿ ಎಸ್.ಎಂ.ಇ.ಗ್ರೂಪ್ಸ್ ನೂತನವಾಗಿ ಆರಂಭಿಸಿದ ಸಹ ಸಂಸ್ಥೆ “ಯುನಿಕ್ ಎಂಟರ್‌ಪ್ರೈಸಸ್” ಕಂಪ್ಯೂಟರ್ಸ್, ವಾಟರ್ ಪ್ಯೂರಿಫಯರ್, ‌ಸೆಕ್ಯೂರಿಟಿ ಸಿಸ್ಟಮ್ ಜ.15ರಂದು ಶುಭಾರಂಭಗೊಂಡಿತು.

ಸಹ ಸಂಸ್ಥೆಯ ಉದ್ಘಾಟನೆಯನ್ನು ಲಾಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಜಯಂತಿ ಎಂ.ಕೆ, ಉದ್ಘಾಟಿಸಿದರು. ಶ್ರೀಮತಿ ಮತ್ತು ಪ್ರೇಮ ರಾಜಪ್ಪ ಗೌಡ, ಶ್ರೀಮತಿ ಮತ್ತು ಶ್ರೀ ಜಯಲಕ್ಷ್ಮಿ ರಾಜಣ್ಣ ಬೆಂಗಳೂರು ಇವರು ದೀಪ ಪ್ರಜ್ವಲನೆಗೊಳಿಸಿದರು.

ನಾಳ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕ್ಷೇತ್ರದ ಪ್ರಧಾನ ಅರ್ಚಕ ವೇದಮೂರ್ತಿ ರಾಘವೇಂದ್ರ ಅಸ್ರಣ್ಣರು ಆಗಮಿಸಿ ನೂತನ ಸಂಸ್ಥೆಗೆ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾದ ಲಾಯಿಲ ನೂರುಲ್ ಹುದಾ ಮಸೀದಿಯ ಧರ್ಮಗುರು ಉಬೈದುಲ್ಲಾ ಸಖಾಫಿ ಮುಈನಿ ಎಂ.ಎ, ಫಾ| ಪೌಲ್ ಒಸಿಡಿ, ಕಾರ್ಮೆಲ್ ಸದನ ಲಾಯಿಲ, ಲಾಯಿಲ ನೂರುಲ್ ಹುದಾ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ಹನೀಫ್, ಬೆಳ್ಳಾರೆ
ಸ್ನೇಹ ಇಲೆಕ್ಟಿಕಲ್ಸ್ ಮಾಲಕ ಹೊನ್ನಪ್ಪ, ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ಎಚ್. ಕೃಷ್ಣಯ್ಯ ಇಡ್ಯಾ, ಬೆಳ್ತಂಗಡಿ ಜೆಸಿಐ ಅಧ್ಯಕ್ಷ
ಜಿತೇಶ್ ಕುಮಾರ್ ಭಾಗವಹಿಸಿದರು.

ಈ ಸಂದರ್ಭದಲ್ಲಿ ಲಾಯಿಲ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅರವಿಂದ, ಗಣೇಶ್, ನಿವೃತ್ತ ಶಿಕ್ಷಕ ಸುರೇಶ್, ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ರವರ ಮನೆಯವರು, ಬಂಧು ಮಿತ್ರರು ಉಪಸ್ಥಿತರಿದ್ದರು.

ಎಸ್.ಎಂ.ಎಸ್ ಗ್ರೂಪ್ಸ್ ನ ವ್ಯವಸ್ಥಾಪಕ ನಿರ್ದೇಶಕ ಅವಿನಾಶ್ ಎ.ಆರ್. ರವರು ಬಂದಂತಹ ಅತಿಥಿ ಗಣ್ಯರನ್ನು ಸ್ವಾಗತಿಸಿ ಸತ್ಕರಿಸಿದರು.

Related posts

ಕುವೆಟ್ಟು: ಜಲಾಯನ ವ್ಯಾಪ್ತಿಯ ಸ್ವ ಸಹಾಯ ಸಂಘದ ಮಹಿಳೆಯರಿಗೆ ಆಹಾರ ಉತ್ಪನ್ನ ತಯಾರಿಕೆ ಮತ್ತು ಸಿಹಿ ತಿಂಡಿ ತಯಾರಿ ಬಗ್ಗೆ ತರಬೇತಿ

Suddi Udaya

ಬೆಳ್ತಂಗಡಿ ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಕಲ್ಲೇರಿ: ಅಡಿಕೆ ಬೆಳೆ ಮತ್ತು ಕಾಳುಮೆಣಸು ಬೆಳೆಗಳ ಆಧುನಿಕ ಬೇಸಾಯ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮ

Suddi Udaya

ಬಳಂಜ ಸ.ಉ. ಪ್ರಾಥಮಿಕ ಮತ್ತು ಪ್ರೌಢ ಶಾಲೆಯಲ್ಲಿ ಮಕ್ಕಳ ಮೆಟ್ರಿಕ್ ಮೇಳ

Suddi Udaya

ಬೆಳ್ತಂಗಡಿಯಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಅಹವಾಲು ಸ್ವೀಕಾರ

Suddi Udaya

4ನೇ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್: ಉಜಿರೆ ತಂಡಕ್ಕೆ ಹಲವು ಪ್ರಶಸ್ತಿ

Suddi Udaya
error: Content is protected !!