ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಚಾರ್ಮಾಡಿ ಗ್ರಾಮ ಪಂಚಾಯತ್‌ನಲ್ಲಿ ಮಕ್ಕಳ ಗ್ರಾಮ ಸಭೆ

ಚಾರ್ಮಾಡಿ: ಚಾರ್ಮಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯಲ್ಲಿ ಜ.14 ರಂದು ಚಾರ್ಮಾಡಿ ಗ್ರಾಮ ಪಂಚಾಯತಿ ವತಿಯಿಂದ ಮಕ್ಕಳ ಗ್ರಾಮ ಸಭೆ ಯಶಸ್ವಿಯಾಗಿ ನಡೆಯಿತು. ಗ್ರಾಮ ಪಂಚಾಯತ್ ಅಧ್ಯಕ್ಷೆ ಶಾರದ ಅವರ ಮಾರ್ಗದರ್ಶನದಲ್ಲಿ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ ಅವರು ಸಭೆಯನ್ನು ನಿರ್ವಹಿಸಿದರು. ಪಂಚಾಯತ್ ಸದಸ್ಯ ಅಬ್ದುಲ್ ರಹಿಮಾನ್ ಉಪಸ್ಥಿತರಿದ್ದರು.

ಚಾರ್ಮಾಡಿ, ಅಣಿಯೂರು, ಕಕ್ಕಿಂಜೆ, ತೋಟತ್ತಾಡಿ, ಪೆರಿಯಡ್ಕ ಹಾಗೂ ಕಕ್ಕಿಂಜೆ ಸರಕಾರಿ ಪ್ರೌಢಶಾಲೆಗಳ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಸಭೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಮಕ್ಕಳ ಹಕ್ಕುಗಳು ಹಾಗೂ ಪೋಕ್ಸೋ ಕಾಯಿದೆ ಕುರಿತು ಮಂಗಳೂರಿನ ಸಂಪನ್ಮೂಲ ವ್ಯಕ್ತಿ ಶ್ರೀಮತಿ ಯಶೋದ ಅವರು ಮಾಹಿತಿ ನೀಡಿದರು. ಮಕ್ಕಳ ಸುರಕ್ಷತೆ, ಮಕ್ಕಳ ಹಕ್ಕುಗಳ ಕ್ಲಬ್, ಪಂಚಾಯತಿಯಿಂದ ಮಕ್ಕಳಿಗೆ ದೊರೆಯುವ ಸವಲತ್ತುಗಳು ಕುರಿತು ವಿವರಿಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳ ಅಹವಾಲುಗಳನ್ನು ಚರ್ಚಿಸಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಂದ ಸೂಕ್ತ ಸ್ಪಂದನೆ ದೊರಕುವಂತೆ ಸಂಪನ್ಮೂಲ ವ್ಯಕ್ತಿ ವಿನೋದ್ ನೆರವೇರಿಸಿದರು.

ಸಭೆಯಲ್ಲಿ ಮುಖ್ಯವಾಗಿ ಶಾಲಾ ಕಟ್ಟಡಗಳು ಹಾಗೂ ಮೈದಾನದೊಳಗಿನ ಅನಧಿಕೃತ ಅತಿಕ್ರಮಣ, ಕಂಪೌಂಡ್ ನಿರ್ಮಾಣ, ಶಾಲಾ ಸೌಂದರೀಕರಣ, ಬೀದಿನಾಯಿಗಳಿಂದ ರಕ್ಷಣೆ, ಮನೆಗಳಲ್ಲಿ ವಿದ್ಯುತ್ ಸೌಲಭ್ಯ ಇಲ್ಲದೆ ಓದಲು ಎದುರಾಗುವ ಸಮಸ್ಯೆ, ಶಾಲೆಗಳಿಗೆ ಕಸ ವಿಲೇವಾರಿ ವಾಹನ ಬಾರದಿರುವುದು, ಬ್ಯಾಂಡ್ ಸೆಟ್ ಹಾಗೂ ಸ್ಕೌಟ್ಸ್–ಗೈಡ್ಸ್ ಸಮವಸ್ತ್ರ ಒದಗಿಸುವುದು, ಶೌಚಾಲಯಕ್ಕೆ ಇನ್ಸಿನರೇಟರ್ ವ್ಯವಸ್ಥೆ, ರಸ್ತೆ ರಿಪೇರಿ, ಶಾಲೆಗೆ ಗೈರು ಹಾಜರಾಗುತ್ತಿರುವ ಮಕ್ಕಳ ಸಮಸ್ಯೆ, ಶಾಲಾ ಸಮೀಪದ ಅಂಗಡಿಗಳಲ್ಲಿ ಮಾದಕ ವಸ್ತು ಮಾರಾಟ ನಿಷೇಧಿಸುವ ಕುರಿತು ವಿದ್ಯಾರ್ಥಿಗಳು ತಮ್ಮ ದೂರುಗಳನ್ನು ಸಲ್ಲಿಸಿದರು.

ಕೆಲವು ಸಮಸ್ಯೆಗಳಿಗೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ತಕ್ಷಣ ಸ್ಪಂದಿಸಿದ್ದು, ಉಳಿದ ಬೇಡಿಕೆಗಳಿಗೆ ಹಂತಹಂತವಾಗಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ವಿವಿಧ ಅಂಗನವಾಡಿ ಕೇಂದ್ರಗಳ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯ ಶಾಲಾ ನಾಯಕಿ ಕುಮಾರಿ ನಿಕಿತ ಅಧ್ಯಕ್ಷೀಯ ಭಾಷಣ ಮಾಡಿದರು. ಸರಕಾರಿ ಪ್ರೌಢಶಾಲೆ ಕಕ್ಕಿಂಜೆಯ ಮುಖ್ಯ ಶಿಕ್ಷಕರಾದ ಶಂಭು ಶಂಕರ್ ವಂದಿಸಿದರು. ಸಭೆಯ ಯಶಸ್ಸಿಗೆ ಗ್ರಂಥ ಪಾಲಕಿ ಶ್ರೀಮತಿ ಜ್ಯೋತಿ, ಲೆಕ್ಕ ಪರಿಶೋಧಕರಾದ ಸಂಜೀವ, ಗ್ರಾಮ ಪಂಚಾಯತಿ ಸಿಬ್ಬಂದಿ ವರ್ಗ ಹಾಗೂ ಶಿಕ್ಷಕರು ಸಹಕರಿಸಿದರು.

Related posts

ಮಂಗಳೂರು ಸಿಸಿಆರ್ ಬಿ ಘಟಕದಲ್ಲಿ ಸೇವೆ ಸಲ್ಲಿಸುತ್ತಿದ್ದ ಭೋಜಾರ ಪುರಂದರ ಗೌಡರವರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ

Suddi Udaya

ಬೆಳ್ತಂಗಡಿ: ಜೆಪಿ ಅಟ್ಯಾಕ್ರ್ಸ್ ಪ್ರಾಯೋಜಕತ್ವದಲ್ಲಿ ತಾಲೂಕು ಮಟ್ಟದ ಅಂಡರ್ ಆರ್ಮ್ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Suddi Udaya

ಎಲ್.ಸಿ ಆರ್ ಇಂಡಿಯನ್ ವಿದ್ಯಾಸಂಸ್ಥೆಯಲ್ಲಿ ಮಾದಕ ವ್ಯಸನ ಮುಕ್ತ ಜಾಗೃತಿ ಕಾರ್ಯಕ್ರಮ

Suddi Udaya

ಉಜಿರೆ:ಎಸ್ ಡಿ ಎಮ್ ನಲ್ಲಿ ನೆನಪಿನಂಗಳ ಕಾರ್ಯಕ್ರಮ

Suddi Udaya

ಮುಂಡಾಜೆಯ ತೇಜಲ್ ಕೆ. ಆರ್ ರವರು ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ

Suddi Udaya

ಉಜಿರೆಯಲ್ಲಿ ಗೌತಮ್ ಬಿ.ಆರ್ ಮಾಲಕತ್ವದ ಹೋಟೆಲ್ ನ್ಯೂ ಸಪ್ನಾ ಶುಭಾರಂಭ

Suddi Udaya
error: Content is protected !!