ಅಳದಂಗಡಿ: ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಮತ್ತು ಹೇಮಾವತಿ ವೀ. ಹೆಗ್ಗಡೆಯವರ ಆಶೀರ್ವಾದದೊಂದಿಗೆ ಜನಮಂಗಳ ಕಾರ್ಯಕ್ರಮದಡಿಯಲ್ಲಿ ಅಳದಂಗಡಿ ವಲಯದ ಶಿರ್ಲಾಲು ಬಿ, ಕಾರ್ಯಕ್ಷೇತ್ರದ ಪ್ರಕೃತಿ ತಂಡದ ಸದಸ್ಯೆ ಗುಲಾಬಿಯವರಿಗೆ ಮಂಜೂರಾದ ವಿಲ್ ಚೇರ್ ನ್ನು ವಲಯದ ಸ್ವಚ್ಛತಾ ಸೇನಾನಿಧಿ ನೀಲಯ್ಯ ಗೌಡರವರು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ವಲಯದ ಮೇಲ್ವಿಚಾರಕಿ ಯಶೋದ, ಶಿರ್ಲಾಲು ಬಿ ಒಕ್ಕೂಟದ ಅಧ್ಯಕ್ಷ ಪ್ರವೀಣ್ ಹಾಗೂ ಶಿರ್ಲಾಲು ಬಿ ಸೇವಾ ಪ್ರತಿನಿಧಿ ಹರಿಣಾಕ್ಷಿ ಹಾಗೂ ಶಿರ್ಲಾಲು ಎ ಸೇವಾಪ್ರತಿನಿಧಿ ಚಂದ್ರವತಿ ಉಪಸ್ಥಿತರಿದ್ದರು.











