32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು: ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

ವೇಣೂರು: ಹಿಂದೂ ಸಮಾಜದಲ್ಲಿ ಶಾಂತಿ, ಸಾಮರಸ್ಯ, ಏಕತೆ, ಸಾಂಸ್ಕೃತಿಕ ಜಾಗೃತಿಯನ್ನು ಬಲಪಡಿಸುವ ಉದ್ದೇಶದಿಂದ ರಾಷ್ಟ್ರದಾದ್ಯಂತ ಹಿಂದೂ ಸಂಗಮ ಕಾರ್ಯಕ್ರಮ ನಡೆಯುತ್ತಿದೆ. ಹಿಂದೂ ಸಂಗಮ ಆಯೋಜನ ಸಮಿತಿ ವೇಣೂರು ತಾಲೂಕು, ವೇಣೂರು ಮಂಡಲದ ಸಂಯೋಜನೆಯಲ್ಲಿ ಜ.31 ರಂದು ಸಂಜೆ 3 ಗಂಟೆಗೆ ವೇಣೂರು ಶ್ರೀರಾಮ ಭಜನಾ ಮಂದಿರದಿಂದ ಶ್ರೀಮಹಾಲಿಂಗೇಶ್ವರ ದೇವಸ್ಥಾನದವರೆಗೆ ಬೃಹತ್ ಶೋಭಾಯಾತ್ರೆಯೊಂದಿಗೆ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಹಿಂದೂ ಸಂಗಮದ ಸಭಾ ಕಾರ್ಯಕ್ರಮ ನಡೆಯಲಿದೆ.


ಹಿಂದೂ ಸಂಗಮ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಮಹಾಲಿಂಗೇಶ್ವರ ದೇವರ ಸನ್ನಿಧಾನದಲ್ಲಿ ಪೂಜೆ ಪ್ರಾರ್ಥನೆ ಸಲ್ಲಿಸಿ ವೇಣೂರು ಹಿಂದೂ ಸಂಗಮದ ಸಂಚಾಲಕ ಪುರುಷೋತ್ತಮ ರಾವ್ ಬಿಡುಗಡೆ ಮಾಡಿದರು. ಹಿಂದೂ ಸಂಗಮ ಕಾರ್ಯಕ್ರಮದ ಅಧ್ಯಕ್ಷ ಶ್ರವಣ್ ಕೆ. ಮಿತ್ತೋಟ್ಟು ಕರಿಮಣೇಲು, ವೇಣೂರು ತಾಲೂಕು ಹಿಂದೂ ಸಂಗಮ ಆಯೋಜನ ಸಮಿತಿಯ ಪ್ರಧಾನ ಕಾರ್ಯದರ್ಶಿ ವಿಜಯ ಗೌಡ ವೇಣೂರು, ಗ್ರಾಮ ಪಂಚಾಯಿತಿನ ಮಾಜಿ ಅಧ್ಯಕ್ಷರಾದ ನೇಮಯ್ಯ ಕುಲಾಲ್, ಪಂಚಾಯತ್ ಸದಸ್ಯ ಉಮೇಶ ನಡ್ತಿಕಲ್ಲು, ಶ್ರೀನಿಧಿ ಶಾಮಿಯಾನದ ಮಾಲಕರಾದ ಜಗದೀಶ ಭಟ್, ಉದ್ಯಮಿ ರಾಜೇಶ ಕೊಪ್ಪದಬಾಕಿಮಾರು, ಕಾಶೀನಾಥ ಹೆಗ್ಡೆ ಬಜಿರೆ, ಪ್ರವೀಣ ಕುಮಾರ್ LIC, ರಾಮದಾಸ ನಾಯಕ್ ಕರಿಮಣೇಲು, ನಿರ್ಮಲ್ ಪೈ ವೇಣೂರು, ದಯಾನಂದ ಭಂಡಾರಿ ಕರಿಮಣೇಲು, ಜಯರಾಮ ಆಚಾರ್ಯ ಕಾಂಜರಕಟ್ಟೆ, ಹರೀಶ ಕಾಂಜರಕಟ್ಟೆ, ಸೋಮನಾಥ ಕೆ.ವಿ, ಉಮೇಶ ವೇಣೂರು, ದಿನೇಶ ವೇಣೂರು, ಸಂಯೋಜಕ ಪ್ರಕಾಶ ಪುರೋಹಿತ್ ವೇಣೂರು ಮೊದಲಾದವರು ಉಪಸ್ಥಿತರಿದ್ದರು.

Related posts

ಶಿರ್ಲಾಲು ಸ. ಉ. ಪ್ರಾ. ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣೆ

Suddi Udaya

ಕನ್ಯಾಡಿ: ನಾರ್ಯ ನಿವಾಸಿ ಸೀತಮ್ಮ ನಿಧನ

Suddi Udaya

ಬಂದಾರು ಗ್ರಾ.ಪಂ. ನ ದ್ವಿತೀಯ ಸುತ್ತಿನ ಗ್ರಾಮ ಸಭೆ

Suddi Udaya

ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಅಡ್ಡಲಾಗಿ ನಿಂತ ಖಾಸಗಿ ವರುಣ್ ಬಸ್ ನ ಸಿಬ್ಬಂದಿಗೆ ತರಾಟೆ ತೆಗೆದುಕೊಂಡ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಯಾಣಿಕರು

Suddi Udaya

ಶುಚಿ-ರುಚಿಯಾದ ಊಟೋಪಚಾರಗಳಿಗೆ ಹೆಸರುವಾಸಿಯಾದ ಶ್ರೀದೇವಿ ಹೋಟೆಲ್ ಬೆಳ್ತಂಗಡಿಯಲ್ಲಿ ಶುಭಾರಂಭ

Suddi Udaya

ಕಡಿರುದ್ಯಾವರ ದ. ಕ. ಜಿ. ಪಂ ಹಿ. ಪ್ರಾ ಶಾಲೆಯಲ್ಲಿ ಎಸ್.ಡಿ.ಎಮ್.ಸಿ, ಪೋಷಕರ ಸಭೆ ಹಾಗೂ ಶಾಲಾ ಮಕ್ಕಳ ಸಂತೆ ಕಾರ್ಯಕ್ರಮ

Suddi Udaya
error: Content is protected !!