ಗ್ರಾಮಾಂತರ ಸುದ್ದಿತಾಲೂಕು ಸುದ್ದಿವರದಿ

ವೇಣೂರು: ರಾಷ್ಟ್ರ ಸೇವಿಕಾ ಸಮಿತಿಗೆ 90ರ ಸಂಭ್ರಮ: ಗಣವೇಷಧಾರಿ ಸೇವಿಕೆಯರಿಂದ ಪಥ ಸಂಚಲನ

ವೇಣೂರು: ರಾಷ್ಟ್ರ ಸೇವಿಕಾ ಸಮಿತಿಗೆ 90ರ ಸಂಭ್ರಮ ಹಿನ್ನೆಲೆಯಲ್ಲಿ ಗಣವೇಷಧಾರಿ ಸೇವಿಕೆಯರಿಂದ ಜ.17ರಂದು ವೇಣೂರು ಶ್ರೀ ರಾಮ ಭಜನಾ ಮಂದಿರದಿಂದ ಪಥ ಸಂಚಲನ ಹೊರಟು ವೇಣೂರು ಶ್ರೀ ಮಹಾವೀರ ನಗರದ ಭರತೇಶ ಸಭಾ ಭವನದ ವರೆಗೆ ಜರುಗಿತು.

ಬಳಿಕ ಭರತೇಶ ಸಭಾ ಭವನದಲ್ಲಿ ಜರುಗಿದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವೇಣೂರು ವಿದ್ಯೋದಯ ಆಂಗ್ಲ ಮಾಧ್ಯಮ ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರು ಶೀಲಾ ಎಸ್. ಹೆಗ್ಡೆ ವಹಿಸಿದ್ದರು. ಜಿಲ್ಲಾ ಬೌದ್ದಿಕ್ ಪ್ರಮುಖ್ ಪ್ರತಿಭಾ ರವರು ಬೌದ್ದಿಕ್ ನ್ನು ನೆರವೇರಿಸಿದರು. ವೇದಿಕೆಯಲ್ಲಿ ಪುತ್ತೂರು ಜಿಲ್ಲಾ ಸಂಚಾಲಿಕ ಸವಿತಾ ಭಟ್ ಉಪಸ್ಥಿತರಿದ್ದರು. ಪಥ ಸಂಚಲನದಲ್ಲಿ ಸುಮಾರು 500 ಗಣವೇಷಧಾರಿಗಳು ಭಾಗವಹಿಸಿದರು.

ಈ ಸಂದರ್ಭದಲ್ಲಿ ಸುಳ್ಯದ ಶಾಸಕಿ ಭಾಗೀರತಿ ಮುರುಳ್ಯ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಸಂಘ ಚಾಲಕ ವಿನಯಚಂದ್ರ, ಪ್ರಕಾಶ್ ಪುರೋಹಿತ್ ವೇಣೂರು, ಪುತ್ತೂರು ಜಿಲ್ಲಾ ಸಂಚಾಲಕಿ ಪೂರ್ಣಿಮಾ, ಅಧಿಕಾರಿ ವರ್ಗ ಪ್ರಾಂತ ಸಹ ಬೌದ್ಧಿಕ್ ಪ್ರಮುಖ್ ಮೀನಾಕ್ಷಿ, ಪ್ರಾಂತ ಶಾರೀರಿಕ್ ಪ್ರಮುಖ್ ಶಿಲ್ಪಾ, ವಿಭಾಗ ಕಾರ್ಯವಾಹಿಕ ಗಿರಿಜಾ ಭಟ್, ವಿಭಾಗ ಸಹ ಕಾರ್ಯವಾಹಿಕ ಕಲ್ಪನಾ, ಉಡುಪಿ ಜಿಲ್ಲಾ ಕಾರ್ಯವಾಹಿಕ ಶಶಿಕಲಾ ಮಣಿಯಾನಿ, ಮಂಗಳೂರು ವಿಭಾಗ ಶಾರೀರಿಕ ಪ್ರಮುಖ್ ರಾಜಲಕ್ಷ್ಮಿ, ವಿಭಾಗ ಸಹ ಶಾರೀರಿಕ ಪ್ರಮುಖ್ ಚಿತ್ರಾಕ್ಷಿ, ಮಂಗಳೂರು ಗ್ರಾಮಾಂತರ ಜಿಲ್ಲಾ ಕಾರ್ಯವಾಹಿಕ ಸುಷ್ಮಾ, ಸಂಘದ ಹಿತೈಷಿಗಳು ಉಪಸ್ಥಿತರಿದ್ದರು.ಜಿಲ್ಲಾ ಕಾರ್ಯವಾಹಿಕಾ ವೇದಾವತಿ ಜನಾರ್ಧನ ಸ್ವಾಗತಿಸಿದರು. ವೇಣೂರು ತಾಲೂಕು ಕಾರ್ಯವಾಹಿಕ ರೋಹಿಣಿ ವಂದಿಸಿದರು.

Related posts

ಭಾರೀ ಗಾಳಿ ಮಳೆ: ಇಂದಬೆಟ್ಟುವಿನಲ್ಲಿ ಮನೆಗೆ ಮರ ಬಿದ್ದು ಹಾನಿ: ವಿದ್ಯುತ್ ಕಂಬ ಹಾಗೂ ರಬ್ಬರ್ ಗಿಡಗಳು ಧರಾಶಾಹಿ

Suddi Udaya

ಮೇಲಂತಬೆಟ್ಟು: ಅಣ್ಣು ಪೂಜಾರಿ ಅಡ್ಕದಬೈಲ್ ನಿಧನ

Suddi Udaya

ಶ್ರೀ ಧ.ಮಂ.ಅ.ಹಿ ಪ್ರಾ. ಶಾಲಾ ಪ್ರಾರಂಭೋತ್ಸವ

Suddi Udaya

ಕಕ್ಕಿಂಜೆ: ಬೀಟಿಗೆ ಹಯಾತುಲ್ ಇಸ್ಲಾಂ ಮದರಸದ ವಾರ್ಷಿಕ ಮಹಾಸಭೆ: ಸಮಿತಿ ರಚನೆ

Suddi Udaya

ಬೆಳ್ತಂಗಡಿ: ಸಂತ ತೆರೇಸಾ ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ ಮಾಹಿತಿ ಕಾರ್ಯಗಾರ

Suddi Udaya

ಗ್ರಾಮ ಆಡಳಿತ ಅಧಿಕಾರಿಗಳ ಅನಿರ್ಧಿಷ್ಟಾವಧಿ ರಾಜ್ಯವ್ಯಾಪಿ 2ನೇ ಹಂತದ ಮುಷ್ಕರ : ಬೆಳ್ತಂಗಡಿಯಲ್ಲೂ ಆಡಳಿತ ಸೌಧದ ಎದುರು ಧರಣಿ- ಕಂದಾಯ ಸೇವೆಯಲ್ಲಿ ವ್ಯತ್ಯಯ

Suddi Udaya
error: Content is protected !!