July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ. 19 ರಿಂದ ಸಂಜೆ ಕ್ಲಿನಿಕ್ ಪ್ರಾರಂಭ

ಉಜಿರೆ: ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರ ಬೇಡಿಕೆಯ ಮೇರೆಗೆ, ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಶುಭಾಶೀರ್ವಾದದಲ್ಲಿ ಡಿ. ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ್ ಇವರ ಮಾರ್ಗದರ್ಶನದಲ್ಲಿ ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜ.19 ರಿಂದ ಸಂಜೆ ಕ್ಲಿನಿಕ್ ಪ್ರಾರಂಭಗೊಳ್ಳಲಿದೆ.


ಉದ್ಯೋಗಿಗಳು, ವಿದ್ಯಾರ್ಥಿಗಳು ಹಾಗೂ ಕೆಲವೊಂದು ಜನರಿಗೆ ಹಗಲು ಹೊತ್ತಿನಲ್ಲಿ ತಮ್ಮ ಕೆಲಸದ ಒತ್ತಡದಿಂದ ವೈದ್ಯರನ್ನು ಭೇಟಿ ಆಗಲು ಸಾಧ್ಯವಾಗುವುದಿಲ್ಲ. ಈ ಉದ್ದೇಶದಿಂದ ಉಜಿರೆಯ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಜೆ ಕ್ಲಿನಿಕ್ ಪ್ರಾರಂಭಿಸಿ ಸೋಮವಾರದಿಂದ ಶನಿವಾರದವರೆಗೆ ಸಂಜೆ 5ರಿಂದ 7ರವರೆಗೆ ತಜ್ಞ ವೈದ್ಯರಿಂದ ವೈದ್ಯಕೀಯ ಸೇವೆ ನೀಡಲು ಉದ್ದೇಶಿಸಲಾಗಿದೆ. ಇದರಿಂದ ಉದ್ಯೋಗಸ್ಥರಿಗೆ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಅವರು ತಿಳಿಸಿದ್ದಾರೆ.


ಕಿವಿ-ಮೂಗು-ಗಂಟಲು ತಜ್ಞರು ಮಂಗಳವಾರ ಮತ್ತು ಶುಕ್ರವಾರ, ಶಸ್ತçಚಿಕಿತ್ಸಾ ತಜ್ಞರು ಸೋಮವಾರ ಹಾಗೂ ಗುರುವಾರ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರು ಬುಧವಾರ ಮತ್ತು ಶನಿವಾರ, ನೇತ್ರ ಚಿಕಿತ್ಸಾ ತಜ್ಞರು ಮಂಗಳವಾರ, ಮೂಳೆ ಶಸ್ತçಚಿಕಿತ್ಸಾ ತಜ್ಞರು ಸೋಮವಾರ ಹಾಗೂ ಗುರುವಾರ, ಮಕ್ಕಳರೋಗ ತಜ್ಞರು ಬುಧವಾರ ಮತ್ತು ಶನಿವಾರ ಚರ್ಮರೋಗ ತಜ್ಞರು ಮಂಗಳವಾರ ಮತ್ತು ಶುಕ್ರವಾರ ಸಂಜೆ ಕ್ಲಿನಿಕ್‌ನಲ್ಲಿ ಲಭ್ಯವಿರುತ್ತಾರೆ. ಉಳಿದಂತೆ ದಿನದ 24 ಗಂಟೆಯೂ ಎಂದಿನಂತೆ ಈ ಆಸ್ಪತ್ರೆಯಲ್ಲಿ ವೈದ್ಯಕೀಯ ಸೇವೆ ಲಭ್ಯವಿರಲಿದೆ.


ತಮಗೆ ಬೇಕಾದ ದಿನಗಳಲ್ಲಿ, ತಮಗೆ ಬೇಕಾದ ತಜ್ಞ ವೈದ್ಯರ ನೇಮಕಾತಿಯನ್ನು ದೂರವಾಣಿ 08256-295611/615 ಅಥವಾ 7760397878 ಸಂಖ್ಯೆಗೆ ಕರೆ ಮಾಡುವ ಮೂಲಕ ನಿಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಸಂಜೆ ಕ್ಲಿನಿಕ್‌ನಲ್ಲಿ ನಗದು ಪಾವತಿಸುವ ರೋಗಿಗಳಿಗೆ ವೈದ್ಯರ ಸಮಾಲೋಚನೆ ಶುಲ್ಕ ರೂ. ೨೫೦ ಹಾಗೂ ಸಂಪೂರ್ಣ ಸುರಕ್ಷಾ ಮತ್ತು ಕೆ.ಕೆ.ಎಸ್.ವೈ ಹೊಂದಿರುವವರಿಗೆ ವೈದ್ಯರ ಸಮಾಲೋಚನೆ ಶುಲ್ಕದಲ್ಲಿ ರೂ. ೧೦೦ ಹೆಚ್ಚುವರಿ ಶುಲ್ಕ ಇರಲಿದೆ. ಪ್ರಯೋಗಾಲಯ, ರೇಡಿಯಾಲಜಿ, ಪ್ರೊಸಿಜರ್ ಮತ್ತು ಒಳರೋಗಿ ಸೇವೆಗಳಿಗೆ ಸಂಪೂರ್ಣ ಸುರಕ್ಷಾ ಮತ್ತು ಕೆ.ಕೆ.ಎಸ್.ವೈ ಯೋಜನೆಗಳು ಅನ್ವಯಿಸುತ್ತದೆ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

Related posts

ಮಂಗಳೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಎಂಎಲ್ಸಿ ಹರೀಶ್ ಕುಮಾರ್ ಪಿಕ್ಸ್

Suddi Udaya

ಕಳಿಯ : ಎರುಕಡಪ್ಪು ಅಂಗನವಾಡಿ ಕೇಂದ್ರದಲ್ಲಿ ಮಾವಿನಕಾಯಿಯನ್ನು ಹೋಲುವ ಕೋಳಿ ಮೊಟ್ಟೆ

Suddi Udaya

ಕೊಲ್ಲಿ: ನೋಣಯ್ಯ ದೇವಾಡಿಗ ನಿಧನ

Suddi Udaya

ಬೆಳ್ತಂಗಡಿ ಬಿಜೆಪಿ ಮಂಡಲ ಹಾಗೂ ಮಹಿಳಾ ಮೋರ್ಚಾದ ಕಾರ್ಯಗಾರದ ಜೊತೆಯಲ್ಲಿ ಆಟಿಡೊಂಜಿ ದಿನ ಹಾಗೂ ಪೋಷನ್ ಪಕ್ವಾಡ್ ಕಾರ್ಯಕ್ರಮ,

Suddi Udaya

ಬೆಳ್ತಂಗಡಿ ತುಳುನಾಡು ಕೋಳಿ ಒಕ್ಕೂಟ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಕೇಂದ್ರ ಸಮಿತಿ ರಚನೆ: ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಉಚ್ಚೂರು, ಪ್ರ.ಕಾರ್ಯದರ್ಶಿಯಾಗಿ ಅಶ್ವಿನ್ ಕುಮಾರ್ ಬಳಂಜ, ಕೋಶಾಧಿಕಾರಿಯಾಗಿ ಕೇಶವ ಕೊಯ್ಯೂರು

Suddi Udaya

ಉಜಿರೆ ಶ್ರೀ ದುರ್ಗಾ ಟೆಕ್ಸ್ ಟೈಲ್ಸ್ ನಲ್ಲಿ ಯುಗಾದಿ ಹಾಗೂ ರಂಝಾನ್ ಹಬ್ಬದ ಪ್ರಯುಕ್ತ ವಿಶೇಷ ಆಫರ್: ಪ್ರತಿ ಖರೀದಿ ಮೇಲೆ ಶಾಪಿಂಗ್ ವೊಚರ್

Suddi Udaya
error: Content is protected !!