September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಓಡಿಲ್ನಾಳ ಸ ಉ. ಪ್ರಾ ಶಾಲೆಯ ಎಸ್‌ ಡಿ ಎಂ ಸಿ ರಚನೆ, ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಪುನರಾಯ್ಕೆ

ಓಡಿಲ್ನಾಳ ; ಸ ಉ. ಪ್ರಾ ಶಾಲೆ ಓಡಿಲ್ನಾಳದಲ್ಲಿ ನೂತನ ಎಸ್ ಡಿ ಎಂ ಸಿ ಸಮಿತಿ ರಚನಾ ಕಾರ್ಯಕ್ರಮ ನಡೆಯಿತು.
ಕುವೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ಆಯ್ಕೆಯಾದ ಸದಸ್ಯರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಶಿಕ್ಷಣ ಸಂಯೋಜಕರಾದ ಸಿದ್ದಲಿಂಗ ಸ್ವಾಮಿ ಅತಿಥಿಗಳಾಗಿ ಭಾಗವಹಿಸಿ ಇಲಾಖಾ ಮಾಹಿತಿಯನ್ನು ನೀಡಿದರು.

ವೇದಿಕೆಯಲ್ಲಿ ಪಂಚಾಯತ್ ಪ್ರತಿನಿಧಿ ಶ್ರೀಮತಿ ಆನಂದಿ ಹಾಗೂ ಮುಖ್ಯ ಶಿಕ್ಷಕಿ ಶ್ರೀಮತಿ ಉಷಾ.ಪಿ ಉಪಸ್ಥಿತರಿದ್ದರು.
ನೂತನ ಎಸ್‌ ಡಿ ಎಂ ಸಿ ಅಧ್ಯಕ್ಷರಾಗಿ ಸಂತೋಷ್ ಶೆಟ್ಟಿ ಮದ್ದಡ್ಕ ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ನಸೀಮಾ ಪುನರಾಯ್ಕೆಯಾದರು.

ಸದಸ್ಯರಾಗಿ ಮಹಮ್ಮದ್ ರಫೀಕ್, ಸತೀಶ್ ದೇವಾಡಿಗ , ವೆಂಕಪ್ಪಗೌಡ, ರಾಜೇಶ್ ಆಚಾರ್ಯ, ಸುರೇಶ್ ನಾಯ್ಕ, ಶಿವಪ್ರಸಾದ್ ಆಚಾರ್ಯ ಮತ್ತು ಝರೀನಾ, ಫಾತಿಮಾ, ಫರೀದಾ, ವಸಂತಿ, ಉಷಾ , ಮುಮ್ತಾಜ್ , ಕಸ್ತೂರಿ ಪ್ರಭು , ಶೋಭಾ, ಆಶಾ ಆಯ್ಕೆಯಾದರು.
ಶಿಕ್ಷಕಿ ನಯನಾ. ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಶೌಫ ಮರಿಯಂ ರಾಜಶ್ರೀ, ಆಪ್ತಿ ಪ್ರಾರ್ಥನೆ ಗೈದರು. ದೈಹಿಕ ಶಿಕ್ಷಣ ಶಿಕ್ಷಕ ಜಯರಾಜ ಜೈನ್ ಧನ್ಯವಾದ ಕೋರಿದರು. ಸಹ ಶಿಕ್ಷಕ ವೃಂದದವರು ಮತ್ತು ಅಡಿಗೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಕಳೆಂಜ: ಕೊತ್ತೋಡಿ ನಿವಾಸಿ ಸುಂದರ ಗೌಡ ನಿಧನ

Suddi Udaya

ತೋಟತ್ತಾಡಿ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ ನಡೆಯುವ ಶ್ರೀ ಅಯ್ಯಪ್ಪ ಸ್ವಾಮಿ ದೀಪೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಜೂ.18-23: ಉಜಿರೆಯಲ್ಲಿ ಬೆಂಗಳೂರು ಜೀವನ ಕಲೆ ಪ್ರತಿಷ್ಠಾನ ಸಂಸ್ಥೆ ವತಿಯಿಂದ ‘ಆನಂದೋತ್ಸವ ಶಿಬಿರ’

Suddi Udaya

ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದಿಂದ ಶ್ರೀ ಮಹಾಭಾರತ ಸರಣಿ ತಾಳಮದ್ದಳೆ, ಸನ್ಮಾನ

Suddi Udaya

ಕೊಕ್ಕಡ ವಿಶ್ವ ಹಿಂದೂ ಪರಿಷದ್ , ಕೊಕ್ಕಡ ಶ್ರೀ ರಾಮ ಸೇವಾ ಟ್ರಸ್ಟ್, ಆಶ್ರಯದಲ್ಲಿ ಶ್ರೀ ವರಮಹಾಲಕ್ಷ್ಮೀ ಪೂಜೆ

Suddi Udaya

ಮಂಜೊಟ್ಟಿ: ಸ್ಟಾರ್ ಲೈನ್ ಆಂ.ಮಾ. ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ

Suddi Udaya
error: Content is protected !!