22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುಂಡೂರಿ: ಮಂಜಪ್ಪ ದೇವಾಡಿಗರಿಗೆ ನುಡಿನಮನ ಕಾರ್ಯಕ್ರಮ

ವೇಣೂರು: ಗುಂಡೂರಿಯ ತುಂಬೆದಲೆಕ್ಕಿ ಶ್ರೀ ಸತ್ಯನಾರಾಯಣ ಭಜನ ಮಂಡಳಿ ಸ್ಥಾಪಕ ಸದಸ್ಯರಾಗಿ, ಭಜಕ ಗುರುವಾಗಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ಮಂಜಪ್ಪ ದೇವಾಡಿಗ ಗೋಳಿದಡ್ಕ ಅವರು ಇತ್ತೀಚೆಗೆ ನಿಧನರಾಗಿದ್ದು, ಅವರಿಗೆ ಶ್ರದ್ದಾಂಜಲಿ ಹಾಗೂ ನುಡಿನಮನ ಕಾರ್ಯಕ್ರಮವು ತುಂಬೆದಲೆಕ್ಕಿ ಭಜನ ಮಂದಿರದ ಸಭಾಂಗಣದಲ್ಲಿ ಜ. 18ರಂದು ನಡೆಯಿತು.

ತುಂಬೆದಲೆಕ್ಕಿ ಭಜನ ಮಂದಿರದ ಗೌರವ ಸಲಹೆಗಾರರಾಗಿರುವ ಲಕ್ಷ್ಮೀನಾರಾಯಣ ಆಚಾರ್ಯ ಸಂಗಬೆಟ್ಟು ಅವರು ನುಡಿನಮನಗೈದು, ಮಂಜಪ್ಪ ದೇವಾಡಿಗರ ಗುಣಗಾನ ಮಾಡಿದರು. ಪ್ರಾಧ್ಯಾಪಕ ಗುಣಪ್ರಸಾದ್ ಕಾರಂದೂರು ಶ್ರದ್ಧಾಂಜಲಿ ಅರ್ಪಿಸಿ, ಸೌಮ್ಯ ಸ್ವಭಾವದ ಮಂಜಪ್ಪ ದೇವಾಡಿಗರು ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು. ಭಜನೆಯನ್ನೇ ಜೀವನವನ್ನಾಗಿಸಿದ ಅವರು ಮಕ್ಕಳಿಗೆ ಸ್ಪೂರ್ತಿದಾಯಕರಾಗಿದ್ದರು, ಅವರ ನಿಧನ ತುಂಬೆದಲೆಕ್ಕಿ ಭಜನ ಮಂಡಳಿಗೆ ತುಂಬಲಾಗದ ನಷ್ಟ ಎಂದರು.

ವೇಣೂರಿನ ಉದ್ಯಮಿ ಹಿರಿಯರಾದ ಕೆ. ಭಾಸ್ಕರ ಪೈ, ಕೆ. ವಿಜಯ ಗೌಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕರುಗಳಾದ ಶಾಲಿನಿ, ವೀಣಾ, ಭಜನ ಮಂದಿರದ ಅಧ್ಯಕ್ಷ ಪಿ. ರಮೇಶ್ ಪೂಜಾರಿ ಪಡ್ಡಾಯಿಮಜಲು, ಒಕ್ಕೂಟದ ಅಧ್ಯಕ್ಷ ಸದಾನಂದ ಪೂಜಾರಿ, ಲಿಂಗಪ್ಪ ದೇವಾಡಿಗ ಗೋಳಿದಡ್ಕ ಸೇರಿದಂತೆ ಮಂಜಪ್ಪ ದೇವಾಡಿಗರ ಕುಟುಂಬಿಕರು, ಹಿತೈಷಿಗಳು, ಭಜನ ಮಂಡಳಿ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಸಾರ್ವಜನಿಕರ ಪರವಾಗಿ ಜಯಂಶಕರ ಹೆಗ್ಡೆ ಅವರು ಗುಣಗಾನಗೈದರು. ಹರೀಶ್ ಕುಮಾರ್ ಪೊಕ್ಕಿ ಪ್ರಸ್ತಾವಣೆಗೈದು, ಸಭೆಯನ್ನು ನಿರ್ವಹಿಸಿದರು.

Related posts

ಡಾ. ರೋಹನ್ ದೀಕ್ಷಿತ್ ರೋಟರೀ ಕ್ಲಬ್ ಸದಸ್ಯರಾಗಿ ಪದಗ್ರಹಣ

Suddi Udaya

ಲಾಯಿಲ: ಶ್ರೀ ಮಹಮ್ಮಾಯಿ ಅಮ್ಮನವರ ಮಾರಿ ಪೂಜೋತ್ಸವ

Suddi Udaya

ಬೆಳಗಾವಿ ಅಧಿವೇಶನ: ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಬೆಳೆ ನಾಶ: ಶಾಶ್ವತ ಪರಿಹಾರ ಒದಗಿಸಿ-ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಕಾರ್ಕಳ ವಿಧಾನಸಭಾ ಕ್ಷೇತ್ರದ ಪಕ್ಷದ ಉಸ್ತುವಾರಿಯಾಗಿ ರಕ್ಷಿತ್ ಶಿವರಾಂ ನೇಮಕ

Suddi Udaya

ಬೆಳಾಲು ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಶ್ರೀ ಜ್ಞಾನ ವಿಕಾಸ ಮಹಿಳಾ ಕೇಂದ್ರದ ವಾರ್ಷಿಕೋತ್ಸವ

Suddi Udaya

ಮೇಲಂತಬೆಟ್ಟು ಗ್ರಾಮದ ನಾಗ ಬ್ರಹ್ಮ ಬದಿನಡೆ ಬಳಿಯ ಮನೆ ಹಾನಿ ಹಾಗೂ ಭೂಕುಸಿತ ಪ್ರದೇಶ , ಸವಣಾಲು ಗ್ರಾಮದ ಪಿಲಿಕಲ ರಸ್ತೆ ಭೂಕುಸಿತವಾದ ಪ್ರದೇಶಕ್ಕೆ ಕೇಂದ್ರ ಸರಕಾರದ Ndrf ಮತ್ತು ಜಿಎಸ್ಐ ತಂಡ ಭೇಟಿ

Suddi Udaya
error: Content is protected !!