ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಆರ್ ಪಿಎಲ್ ತರಬೇತಿಯ ಕಿಟ್ ಮತ್ತು ಸರ್ಟಿಫಿಕೇಟ್ ವಿತರಣೆ

ಉಜಿರೆ ಗ್ರಾಮ ಪಂಚಾಯತ್ ನಲ್ಲಿ ಕೌಶಲ್ಯ ಭಾರತ್ ಯೋಜನೆ, ಕರ್ನಾಟಕ ರಾಜ್ಯ ಸರಕಾರದ ಅನುಷ್ಠಾನದಲ್ಲಿ ಕಟ್ಟಡ ಕಾರ್ಮಿಕ ಮಂಡಳಿ ಬೆಂಗಳೂರು ಆರ್ ಪಿಎಲ್ ತರಬೇತಿಯ ಕಿಟ್ ಮತ್ತು ಸರ್ಟಿಫಿಕೇಟ್ ವಿತರಣೆಯು ಉಜಿರೆ ಪಂಚಾಯತ್ ಅಧ್ಯಕ್ಷೆ ಉಷಾ ಕಿರಣ್ ಕಾರಂತ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

10 ದಿನದ ತರಬೇತಿಯನ್ನು ಪೂರೈಸಿದ ಉಜಿರೆ ಮತ್ತು ಕಲ್ಮಂಜ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಟ್ಟಡ ಕಾರ್ಮಿಕರಿಗೆ ಉಭಯ ಗ್ರಾಮದ ಪಂಚಾಯತ್ ಅಧ್ಯಕ್ಷರು ಕಿಟ್ ಸರ್ಟಿಫಿಕೇಟ್ ವಿತರಿಸಿ ಶುಭ ಹಾರೈಸಿದರು. ಉಜಿರೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರು ಸರಕಾರದ ಸವಲತ್ತುಗಳನ್ನು ಪಡೆದುಕೊಂಡು ಸಶಕ್ತರಾಗಬೇಕು ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಮುಂಡಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಕಾರ್ಯದರ್ಶಿ ಸರೋಜ, ಉಜಿರೆ ಗ್ರಾಮ ಪಂಚಾಯತ್ ನ ಸದಸ್ಯರು ಉಪಸ್ಥಿತರಿದ್ದರು.
ಸೃಷ್ಟಿ ಇನ್ಫೋಟೆಕ್ ಕುಂದಾಪುರ ಸಂಸ್ಥೆಯಿಂದ ಸಂಪನ್ಮೂಲ ವ್ಯಕ್ತಿ ವಿನುತ ರಜತ್ ಗೌಡ ಉಜಿರೆ ಕಾರ್ಮಿಕರಿಗೆ ತರಬೇತಿ ನೀಡಿದ್ದರು. ಕಲ್ಮಂಜ ಗ್ರಾಮದ ಕಟ್ಟಡ ಕಾರ್ಮಿಕರಾದ ಐತಪ್ಪ ನಲಿಕೆ ಪೂಜಾ, ಉಜಿರೆ ಗ್ರಾಮದ ಸಂದೀಪ್ 10 ದಿನದ ತರಬೇತಿಯ ಬಗ್ಗೆ ಅನಿಸಿಕೆ ವ್ಯಕ್ತ ಪಡಿಸಿದರು.
ಸಂಪನ್ಮೂಲ ವ್ಯಕ್ತಿ ಸ್ವಾಗತಿಸಿ, ಉಜಿರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿ ವಂದಿಸಿದರು.

Related posts

ಅಳದಂಗಡಿ ಸೊಸೈಟಿಯಿಂದ ಸಂಘ ಸಂಸ್ಥೆಗಳಿಗೆ ದೇಣಿಗೆ ಹಸ್ತಾಂತರ

Suddi Udaya

ಮಾಜಿ ಶಾಸಕ ಕೆ. ವಸಂತ ಬಂಗೇರ ರವರಿಗೆ ಅಂತಿಮ ನಮನ ಸಲ್ಲಿಸಿದ ಮಾಜಿ ಸಚಿವ ಅಭಯಚಂದ್ರ ಜೈನ್

Suddi Udaya

ಕಕ್ಕಿಂಜೆ: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವಿಸುತ್ತಿದ್ದ ವ್ಯಕ್ತಿ ಪೊಲೀಸರ ವಶ

Suddi Udaya

ಪೆರಾಲ್ದರಕಟ್ಟೆ ಮಸ್ಜಿದ್‌ನಲ್ಲಿ ಮಾದಕ ವ್ಯಸನ ಮತ್ತು ಮದುವೆ ಅನಾಚಾರ ಸಾಮಾಜಿಕ ಪಿಡುಗಿನ ವಿರುದ್ದ ಜಾಗೃತಿ ಸಭೆ

Suddi Udaya

ಉಜಿರೆ ಚಿದಾನಂದ ಗೌಡ ನಿಧನ

Suddi Udaya

ಗುರುವಾಯನಕೆರೆ ಶಕ್ತಿನಗರ ಜಂಕ್ಷನ್ ನಲ್ಲಿ ಸ್ಕೂಟರ್ ಗೆ ಲಾರಿ ಡಿಕ್ಕಿ : ಓರ್ವ ಮೃತ್ಯು,

Suddi Udaya
error: Content is protected !!