September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಧರ್ಮಸ್ಥಳ ಎಸ್ ಡಿ ಎಮ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ ನಿಂದ ರಸ್ತೆ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ , ವಿದ್ಯಾರ್ಥಿಗಳಿಂದ ರಸ್ತೆ ಸಪ್ತಾಹ ದ ಅಂಗವಾಗಿ , ವೇಗ ನಿಯಂತ್ರಣ, ಅಪಘಾತ ತಡೆಗಟ್ಟುವಿಕೆ ,ರಸ್ತೆ ಸುರಕ್ಷತೆಯ ಮಾಹಿತಿ ಕಾರ್ಯಗಾರವು ನಡೆಯಿತು.

ವಾಹನ ಚಲಾಯಿಸಲು ವಯಸ್ಸಿನ ಮಿತಿ, ಹಾಗೂ ಯಾವೆಲ್ಲ ದಾಖಲೆಗಳನ್ನು ವಾಹನ ಸವಾರರು ಹೊಂದಿರಬೇಕು. ಎಂಬುದರ ಬಗ್ಗೆ ಧರ್ಮಸ್ಥಳ ಪೋಲಿಸ್ ಠಾಣೆಯ ಎಎಸ್ಐ ಬಾಲಕೃಷ್ಣ ಮಾಹಿತಿ ನೀಡಿದರು. ಅಲ್ಲದೆ ಧರ್ಮಸ್ಥಳ ಪೇಟೆಯಲ್ಲಿ ಜಾಥದ ಮೂಲಕ ಘೋಷಣೆಗಳೊಂದಿಗೆ ಸಂಚರಿಸುತ್ತ ನಾಗರಿಕರಿಗೆ ಜಾಗೃತಿ ಮೂಡಿಸಿದರು. ಬಳಿಕ ಧರ್ಮಸ್ಥಳ ಪೊಲೀಸ್ ಠಾಣೆಗೆ ಭೇಟಿ ನೀಡಿ ಅಲ್ಲಿ ವಿದ್ಯಾರ್ಥಿಗಳಿಗೆ ಪೊಲೀಸ್ ಹಾಗೂ ಸಾಮಾನ್ಯ ಜನರ ನಡುವಿನ ಸಂಬಂಧ ಹೇಗಿರಬೇಕು ಯಾವ ಯಾವ ಸಂದರ್ಭಗಳಲ್ಲಿ ಪೊಲೀಸರನ್ನು ಸಂಪರ್ಕಿಸಬಹುದು ಬಂದಿಖಾನೆ ಹೇಗಿರುತ್ತದೆ ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಲಾಯಿತು.

ಶಾಲಾ ಪರಿಮಳ ಎಂ ವಿ ಇವರ ಮಾರ್ಗದರ್ಶನದಲ್ಲಿ ಮೂಡಿ ಬಂದ ಕಾರ್ಯಕ್ರಮದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯ ಕಾನ್ಸ್ಟೇಬಲ್ ಉಷಾ, ಜಗದೀಶ್, ಶಿವಕುಮಾರ್ ಭಾರತ್ ಸ್ಕೌಟ್ ಮತ್ತು ಗೈಡ್ ಇದರ ಗೈಡ್ ವಿದ್ಯಾರ್ಥಿನಿ ಕು| ಆರಾಧ್ಯ ಪಿ.ಜೋಶಿ ಕಾರ್ಯಕ್ರಮ ನಿರ್ವಹಿಸಿ ಶಿಕ್ಷಕಿ ಶ್ರೀಮತಿ ರಮ ರಾಜೇಶ್ ಸ್ವಾಗತಿಸಿ , ಸ್ಕೌಟ್ ಮಾಸ್ಟರ್ ಶ್ರೀಮತಿ ಆಶಾ ಕುಮಾರಿ ವಂದಿಸಿದರು. ಸ್ಕೌಟ್ಸ್ ಮಾಸ್ಟರ್ಗಳಾದ ಶ್ರೀಮತಿ ಜ್ಯೋತಿ ಲಕ್ಷ್ಮಿ ಹಾಗೂ ಶ್ರೀಮತಿ ಶಶಿಕಲಾ, ಗೈಡ್ ಕ್ಯಾಪ್ಟನ್ ಗಳಾದ ಶ್ರೀಮತಿ ಗೀತಾ ಶ್ರೀಮತಿ ಶಿಭಾ ಹಾಗೂ ಶ್ರೀಮತಿ ದೀಕ್ಷಾ ಅವರ ಸಹಕರಿಸಿದರು. ಈ ಸಂದರ್ಭದಲ್ಲಿ ಸ್ಕೌಟ್ ಗೈಡ್ ವಿದ್ಯಾರ್ಥಿಗಳು ಉಪಸ್ಥಿತರಿದ್ದು ಸಂಪೂರ್ಣ ಸಹಕಾರವನ್ನು ನೀಡಿದರು.

Related posts

ಗುಂಡೂರಿ: ಮುದ್ದಾಡಿ ನಿವಾಸಿ ಪುರಲ್ಲ ನಿಧನ

Suddi Udaya

ಕರಾಯ ಮೂರ್ತೆದಾರ ಸೇವಾ ಸಹಕಾರಿ ಸಂಘದ ನೂತನ ಕಟ್ಟಡದ ಶಿಲಾನ್ಯಾಸ

Suddi Udaya

ಮಂಗಳೂರು ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಗುರುವಾಯನಕೆರೆಯಲ್ಲಿ ನೂತನ ಶಾಖೆ ಉದ್ಘಾಟನೆ

Suddi Udaya

ಬಿಯರ್ ಬಾಟಲಿಯಿಂದ ಇರಿದು ಚಿಕ್ಕಪ್ಪನನ್ನೇ ಕೊಲೆಗೈದ ಯುವಕ

Suddi Udaya

ಕಾಪು-ಉಪರಡ್ಕ ದೈವಗಳ ವಾರ್ಷಿಕ ಜಾತ್ರೆಗೆ ಚಾಲನೆ

Suddi Udaya

ಬೆಳ್ತಂಗಡಿ ಪ್ರಥಮ‌‌ ದರ್ಜೆ ಕಾಲೇಜಿನಲ್ಲಿ “ವಿಶ್ವ ತಂಬಾಕು ವಿರೋಧಿ ದಿನಾಚರಣೆ”- “ಸ್ವಾಸ್ಥ್ಯ ಸಂಕಲ್ಪ” ಕಾರ್ಯಕ್ರಮ

Suddi Udaya
error: Content is protected !!