ಉಜಿರೆ: ಉಜಿರೆಯ ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆ, ಸಿ.ಬಿ.ಎಸ್.ಇ.ಯ ಗೈಡ್ ಕ್ಯಾಪ್ಟನ್ ಶ್ರೀಮತಿ ಉಷಾ. ಕೆ ಇವರು ಗೈಡ್ಸ್ ವಿಭಾಗದ ಉನ್ನತ ಹಂತದ ತರಬೇತಿಯಾದ ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ರಾಷ್ಟ್ರೀಯ ತರಬೇತಿ ಕೇಂದ್ರ, ಪಚ್ಮಾರಿ ವತಿಯಿಂದ ನೀಡಲಾಗುವ ಪ್ರಮಾಣಪತ್ರ ಹಾಗು ಪಾರ್ಚ್‌ಮೆಂಟ್‌ಗೆ ಭಾಜನರಾಗಿದ್ದಾರೆ.
ಇವರು, ಸೆ. 24 ರಿಂದ 30 ರ ವರೆಗೆ ದೊಡ್ಡಬಳ್ಳಾಪುರದ ಆನಿಬೆಸೆಂಟ್ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ತರಬೇತಿ ಕೇಂದ್ರದಲ್ಲಿ,ಗೈಡ್ ವಿಭಾಗದ ರಾಜ್ಯ ತರಬೇತಿ ಆಯುಕ್ತರಾದ ಶ್ರೀಮತಿ ಶ್ಯಾಮಲಾ. ಕೆ. ವಿ ಇವರ ಶಿಬಿರ ನಾಯಕತ್ವದಲ್ಲಿ ತರಬೇತಿಯನ್ನು ಪಡೆದಿದ್ದರು.
ಶಾಲೆಯ ಪ್ರಾಂಶುಪಾಲರಾದ ಮನಮೋಹನ್ ನಾಯ್ಕ್ ಕೆ.ಜಿ ಹಾಗೂ ಶಿಕ್ಷಕ ವೃಂದದಿಂದ ಶುಭಹಾರೈಸಿದರು.











