22.9 C
ಪುತ್ತೂರು, ಬೆಳ್ತಂಗಡಿ
March 7, 2026
ಅಭಿನಂದನೆ

ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಬೆಳ್ತಂಗಡಿ ಘಟಕ ಇದರ ಹತ್ತನೇ ವಾರ್ಷಿಕೋತ್ಸವ

ಬೆಳ್ತಂಗಡಿ :ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ) ಮಂಗಳೂರು ಬೆಳ್ತಂಗಡಿ ಘಟಕ ಇದರ ಹತ್ತನೇ ವಾರ್ಷಿಕೋತ್ಸವವು ಗೌರವಾಧ್ಯಕ್ಷರಾದ ಶಶಿಧರ ಶೆಟ್ಟಿ ಬರೋಡಾ ಇವರ ಅಧ್ಯಕ್ಷತೆಯಲ್ಲಿ ನಡೆಯಿತು

. ಮುಖ್ಯ ಅಭ್ಯಾಗತರಾಗಿ ಶಾಸಕರಾದ ಹರೀಶ್ ಪೂಂಜಾ, ಉಜಿರೆ ಜನಾರ್ದನ ದೇವಸ್ಥಾನದ ಆನುವಂಶಿಕ ಮೊಕ್ತೇಸರರಾದ ಶರತ್ ಕೃಷ್ಣ ಪಡ್ವೆಟ್ನಾಯ, ನಾಣ್ಯಪ್ಪ ಪೂಜಾರಿ, ದಿನಕರ ಶೆಟ್ಟಿ ಬರೋಡಾ, ಬಿ ಭುಜಬಲಿ ಧರ್ಮಸ್ಥಳ, ಸಂಚಾಲಕರು ಕಿರಣ್ ಕುಮಾರ್ ಶೆಟ್ಟಿ, ಕಾರ್ಯದರ್ಶಿ ಶಿತಿಕಂಠ ಭಟ್ ಉಜಿರೆ ಮತ್ತಿತರ ಗಣ್ಯರು ಹಾಗೂ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಪಾವಂಜೆ ಮೇಳದ ಹಿರಿಯ ಕಲಾವಿದ ರಾಧಾಕೃಷ್ಣ ನಾವಡ ಮಧೂರು ಇವರನ್ನು ಸಂಮಾನಿಸಲಾಯಿತು. ಪಟ್ಲ ಫೌಂಡೇಶನ್ ಟ್ರಸ್ಟಿಗೆ 20 ದೇಣಿಗೆ ನೀಡಿದ ಮಹಾದಾನಿಗಳನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು. ಶ್ರೀಮತಿ ಪೃಥ್ವಿ ಮತ್ತು ಮುರಳೀಕೃಷ್ಣ ನಿರೂಪಿಸಿದರು. ಘಟಕದ ಅಧ್ಯಕ್ಷರಾದ ಸುರೇಶ್ ಶೆಟ್ಟಿ ವಂದಿಸಿದರು. ಪಾವಂಜೆ ಮೇಳದವರಿಂದ ಬಪ್ಪನಾಡು ಕ್ಷೇತ್ರ ಮಹಾತ್ಮೆ ಯಕ್ಷಗಾನ ಬಯಲಾಟ ಜರುಗಿತು.

Related posts

ಫೆ.1: ಭೂಸೇನೆಯಲ್ಲಿ 22 ವರ್ಷ ದೇಶ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎ.ಸಿ.ಪಿ ಹವಾಲ್ದಾರ್ ದೇವಕುಮಾರ್ ಗೌಡರಿಗೆ ಹುಟ್ಟೂರಿನಲ್ಲಿ ಸ್ವಾಗತ ಅಭಿನಂದನಾ ಕಾರ್ಯಕ್ರಮ

Suddi Udaya

ಮೆಸ್ಕಾಂ ಅಧ್ಯಕ್ಷರಾದ ಕೆ. ಹರೀಶ್ ಕುಮಾರ್ ರಿಗೆ ಹೆಗ್ಗಡೆಯವರಿಂದ ಅಭಿನಂದನೆ

Suddi Udaya

ಸುಲ್ಕೆರಿ ಲಯನ್ಸ್ ಕ್ಲಬ್ ನ ನೂತನ ಪದಗ್ರಹಣ ಸಮಾರಂಭ

Suddi Udaya

ಪರ್ಸ್ ಹಿಂದಿರುಗಿಸಿ ಕೊಟ್ಟು ಮಾನವೀಯತೆ ಮೆರೆದ ಕೆಎಸ್.ಆರ್.ಟಿ.ಸಿ ಬಸ್ಸು ಸಿಬ್ಬಂದಿ

Suddi Udaya

ಕಾಶಿಪಟ್ಣ ಕೇಳ ದೈವ ಕೊಡಮಣಿತ್ತಾಯ ಬ್ರಹ್ಮ ಬೈದರ್ಕಳ ಗರಡಿಯ ವಾರ್ಷಿಕ ನೇಮೋತ್ಸವ ಸಮಾರಂಭದಲ್ಲಿ ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಸತೀಶ್ ಕೆ ಕಾಶಿಪಟ್ಣರವರಿಗೆ ಸನ್ಮಾನ

Suddi Udaya

ಬೆಳ್ತಂಗಡಿ ಸ.ಪ್ರ.ದ.ಕಾಲೇಜಿನಲ್ಲಿ 2005-08 ನೇ ಸಾಲಿನ ಬಿಎ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ,ಗುರುವಂದನೆ,ರಕ್ತದಾನ ಶಿಬಿರ

Suddi Udaya
error: Content is protected !!