September 6, 2026
ತಾಲೂಕು ಸುದ್ದಿ

ಧರ್ಮಸ್ಥಳ: ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ ಗಣರಾಜ್ಯೋತ್ಸವ ಆಚರಣೆ – ಭಾರತ ವಿಶ್ವಗುರುವಾಗಬೇಕು : ಎಚ್.ಎನ್. ಚಂದ್ರಶೇಖರ್

ಧರ್ಮಸ್ಥಳ: ಇಲ್ಲಿಯ ಶಾಂತಿವನ ಯೋಗ ಮತ್ತು ಪ್ರಕೃತಿ ಚಿಕಿತ್ಸಾಲಯದಲ್ಲಿ 77ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಶಾಂತಿವನದ ಮುಖ್ಯ ವೈದ್ಯಾಧಿಕಾರಿ ಡಾ. ಶಿವಪ್ರಸಾದ್ ಶೆಟ್ಟಿ ಪ್ರಾಸ್ತಾವಿಕ ನುಡಿಗಳ ಮೂಲಕ ಸ್ವಾಗತಿಸಿದರು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಭಾರತೀಯ ಜನತಾ ಪಕ್ಷದ ಕರ್ನಾಟಕ ರಾಜ್ಯದ ವಕ್ತಾರರಾದ ತುಮಕೂರಿನ ಎಚ್.ಎನ್. ಚಂದ್ರಶೇಖರ್ ರವರು “ಪ್ರತಿಯೊಬ್ಬ ಭಾರತೀಯನ ಮನಸ್ಥಿತಿ ಬದಲಾಗಬೇಕು. ಆಗ ಮಾತ್ರ ಭಾರತ ವಿಶ್ವಗುರುವಾಗಲು ಸಾಧ್ಯ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಜಗನ್ನಾಥ್, ಶಾಂತಿವನದ ಮುಖ್ಯ ವೈದ್ಯಾಧಿಕಾರಿಡಾ. ಶಿವಪ್ರಸಾದ್ ಶೆಟ್ಟಿ, ಯೋಗ ಮತ್ತು ನೈತಿಕ ಶಿಕ್ಷಣದ ನಿರ್ದೇಶಕ ಡಾ. ಶಶಿಕಾಂತ್ ಜೈನ್, ವ್ಯವಸ್ಥಾಪಕರಾದ ಸ್ವಸ್ತಿಕ್, ವೈದ್ಯಾಧಿಕಾರಿಗಳು, ಶಾಂತಿವನದ ಸಾಧಕರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Related posts

ಶ್ರೀ ಕಾಳಿಕಾಂಬ ಯಕ್ಷ ಕಲಾ ಟ್ರಸ್ಟ್ ವತಿಯಿಂದ ತಾಳಮದ್ದಳೆ ಮತ್ತು ಕಲಾವಿದರಿಗೆ ನುಡಿ ನಮನ

Suddi Udaya

ಬೆಳ್ತಂಗಡಿ ರಾಜಕೇಸರಿ ಟ್ರಸ್ಟ್ ವತಿಯಿಂದ ಮುಗುಳಿ ಸ.ಹಿ.ಪ್ರಾ. ಶಾಲೆಯಲ್ಲಿ ಸ್ವಚ್ಛಾಲಯ ಅಭಿಯಾನ

Suddi Udaya

ಬಳಂಜ ಶ್ರೀ ಗಣೇಶೋತ್ಸವ ಪೂರ್ವಭಾವಿ ಸಭೆ, ವಿವಿಧ ಸಮಿತಿಗಳ‌ ರಚನೆ

Suddi Udaya

ಬಳಂಜ:ಬೋಂಟ್ರೊಟ್ಟುಗುತ್ತು ದೈವಗಳ ಪುನರ್ ಪ್ರತಿಷ್ಠಾ ಕಲಶಾಭಿಷೇಕ ಮತ್ತು ನೇಮೋತ್ಸವ ‌‌

Suddi Udaya

ಬೆಳ್ತಂಗಡಿ: ರಶ್ಮಿ ಕನ್ಸ್ಟ್ರಕ್ಷನ್ ಮಾಲಕ ಡಿ. ಆ‌ರ್. ರಾಜು ಪೂಜಾರಿ ಹೃದಯಾಘಾತದಿಂದ ನಿಧನ

Suddi Udaya

ಭಾರತೀಯ ಮಜ್ದೂರ್ ಸಂಘ ಕೊಕ್ಕಡ ವಲಯ ರಾಷ್ಟ್ರೀಯ ಕಾರ್ಮಿಕ ದಿನಾಚರಣೆ

Suddi Udaya
error: Content is protected !!