30.8 C
ಪುತ್ತೂರು, ಬೆಳ್ತಂಗಡಿ
September 15, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪೊಲೀಸ್ಪ್ರಮುಖ ಸುದ್ದಿವರದಿ

ಇಳಂತಿಲ: ದರೋಡೆ ಪ್ರಕರಣದಲ್ಲಿ ಆರೋಪಿಗಳಿಗೆ ಶಿಕ್ಷೆ ಪ್ರಕಟ

ಇಳಂತಿಲ: ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಇಳಂತಿಲ ಎಂಬಲ್ಲಿ, ದಿನಾಂಕ: 20.03.2023 ರಂದು ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ, ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಅ.ಕ್ರ 34/2023 ಕಲಂ 392,216(A)IPC ಮತ್ತು 196,115r/w 190(2) IMV ACT ರಂತೆ ಪ್ರಕರಣ ದಾಖಲಾಗಿದ್ದು, ಸದ್ರಿ ಪ್ರಕರಣದ ತನಿಖೆ ನಡೆಸಿದ ಅಂದಿನ ವೃತ್ತ ನಿರೀಕ್ಷಕರಾಗಿದ್ದ ರವಿ ಬಿ.ಎಸ್ ರವರು ಅಗತ್ಯ ಸಾಕ್ಷಿಗಳನ್ನು ಕಲೆ ಹಾಕಿ, ಆರೋಪಿಗಳಾದ ಬೆಳ್ತಂಗಡಿ ಇಳಂತಿಲ ನಿವಾಸಿ ರಾಜೀಮ್ ಹಾಗೂ ಕೊಕ್ಕಡ ನಿವಾಸಿ ಮುಸ್ತಫಾ ಎಂಬವರುಗಳ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿರುತ್ತಾರೆ.

ಸದ್ರಿ ಪ್ರಕರಣದ ವಿಚಾರಣೆ ನಡೆಸಿದ ಮಾನ್ಯ ಪಿ ಎಸ್ ಸಿ ಜೆ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಮನು ಬಿ.ಕೆ ರವರು, ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಇಬ್ಬರು ಆರೋಪಿಗಳಿಗೂ ಕಲಂ 392,216(A)IPC ಮತ್ತು 196,115r/w 190(2) IMV ACT ಅಡಿಯಲ್ಲಿ ತಲಾ 10000 ರೂಪಾಯಿ ದಂಡ ಮತ್ತು 3 ವರ್ಷ ಸಾದಾ ಕಾರಾಗೃಹ ಶಿಕ್ಷೆ ನೀಡಿ ಅದೇಶಿಸಿರುತ್ತದೆ. ಸಹಾಯಕ ಸರ್ಕಾರಿ ಅಭಿಯೋಜಕರಾದ ದಿವ್ಯರಾಜ ಹೆಗ್ಡೆರವರು ಸಮರ್ಥವಾಗಿ ವಾದಮಂಡಿಸಿರುತ್ತಾರೆ.

Related posts

ಬೆಳ್ತಂಗಡಿ: ಅಂಬ್ಯೂಲೆನ್ಸ್ ಚಾಲಕನ ಮೇಲೆ ಹಲ್ಲೆ

Suddi Udaya

ಪೀತಾಂಬರ ಹೇರಾಜೆಯವರ ಮನೆಯಲ್ಲಿ ರೋಟರಿ ಕ್ಲಬ್ ಕುಟುಂಬೋತ್ಸವ

Suddi Udaya

ಎಂಡೋಸಲ್ಫಾನ್ ಕೇಂದ್ರಕ್ಕೆ ಶುದ್ಧ ಕುಡಿಯುವ ನೀರಿನ ಯಂತ್ರ ಹಸ್ತಾಂತರ

Suddi Udaya

ಆಕಾಂಕ್ಷ ಸಾವು ಪ್ರಕರಣಕ್ಕೆ ಹೊಸ ತಿರುವು; ಪೊಲೀಸರಿಂದ ಮೋಸದ ಆರೋಪ: ಇನ್ನೂ ನಡೆಯದ ಮರಣೋತ್ತರ ಪರೀಕ್ಷೆ

Suddi Udaya

ಮಚ್ಚಿನ : ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳ ಪೋಷಕರ ಸಭೆ

Suddi Udaya

ಅಜಿತ್ ಪೂಜಾರಿ ಕನ್ಯಾಡಿ ರಚಿಸಿರುವ ‘ಬಂದೆನು ಶಾಲೆಗೆ ಓಡೋಡಿ’ ಹಾಡು ಬಿಡುಗಡೆ

Suddi Udaya
error: Content is protected !!