32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಮಡಂತ್ಯಾರು ಮಂಡಲ ವತಿಯಿಂದ ಹಿಂದೂ ಸಂಗಮ; ಭವ್ಯ ಶೋಭಾಯಾತ್ರೆ

ಮಡಂತ್ಯಾರು: ಬೆಳ್ತಂಗಡಿ ತಾಲೂಕು ಹಿಂದೂ ಸಂಗಮ ನಿರ್ವಹಣಾ ತಂಡ ಮಡಂತ್ಯಾರು ಮಂಡಲ ಮಚ್ಚಿನ, ಪಾರೆಂಕಿ, ಕುಕ್ಕಳ, ಮಾಲಾಡಿ ಹಾಗೂ ಸೋಣಂದೂರು ಗ್ರಾಮಗಳನ್ನು ಒಳಗೊಂಡ ಹಿಂದೂ ಸಂಗಮ ಜ.25 ರಂದು ಬಸವನಗುಡಿ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಿತು.

ಮಡಂತ್ಯಾರು ಗಣಪತಿ ಮಂಟಪದಿಂದ ಪಂಚಕಟ್ಟೆ ಶ್ರೀ ಬಸವೇಶ್ವರ ದೇವಸ್ಥಾನ ತನಕ ನಡೆದ ಭವ್ಯಶೋಭಾಯಾತ್ರೆಗೆ ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ಪ್ರಧಾನ ಅರ್ಚಕ ಶ್ರೀಧರ ಭಟ್ ಪೇಜಾವರ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಶೋಭಾಯತ್ರೆಯಲ್ಲಿ ಸಾವಿರಕ್ಕೂ ಮಿಕ್ಕಿ ಜನರು ಹಿಂದುತ್ವದ ಜಯ ಘೋಷ ಮೊಳಗಿಸಿದರು. ದೇಶಿಯ ಗೋವಿನ ಪೂಜೆ, ಭಾರತ ಮಾತೆಗೆ ಪುಷ್ಪ ಅರ್ಚನೆ, ಭಜನೆ, ಸಮಾಜದ ವಿವಿಧ ಸಾಧಕರ ಗುರುತಿಸುವಿಕೆ, ಅಯೋಧ್ಯೆ ಕರಸೇವಕರ, ತುರ್ತ ಪರಿಸ್ಥಿತಿಯಲ್ಲಿ ಜೈಲಿಗೆ ಹೋದವರ ಗುರುತಿಸುವಿಕೆ, ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪಂಚಕಟ್ಟೆ ಬಸವೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರಾದ ಪ್ರಶಾಂತ್ ಎಂ.ಪುಂಜಾಲಕಟ್ಟೆ ಅಧ್ಯಕ್ಷತೆ ವಹಿಸಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮಂಗಳೂರು ವಿಭಾಗದ ಸಹ ಕಾರ್ಯವಾಹಕ ಸುಧೀರ್ ಸಿದ್ಧಾಪುರ ಜೀ ಹಿಂದೂ ಸಂಗಮದ ಸಂದೇಶ ಸಾರಿದರು. ನಡುಬೊಟ್ಟು ರೌದ್ರನಾಥೇಶ್ವರ ದೇವಸ್ಥಾನದ ಧರ್ಮದರ್ಶಿ ಡಾ.ರವಿ ನಡುಬೊಟ್ಟು, ಬಳ್ಳಮಂಜ ಅನಂತೇಶ್ವರ ದೇವಸ್ಥಾನದ ಅನುವಂಶಿಕ ಆಡಳಿತ ಮೋಕ್ತೇಸರಾದ ಹರ್ಷ ಸಂಪಿಗೆತ್ತಾಯ, ಪಾರೆಂಕಿ ಶ್ರೀ ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪುನೀತ್ ಕುಮಾರ್, ಮಾಣೂರು ಶ್ರೀ ಶಾಸ್ತರ ಸಹ ಪರಿವಾರ ಕ್ಷೇತ್ರದ ಅಧ್ಯಕ್ಷ ಹೊನ್ನಪ್ಪ ಕುಲಾಲ್, ಮಂಡತ್ಯಾರು ರಾಘವೇಂದ್ರ ಮಠದ ಆಡಳಿತ ಮೋಕ್ತೆಸರಾದ ಸ್ವರ್ಣಲತಾ ಹೆಗ್ಡೆ, ನಾವುಂಡ ಶ್ರೀ ನಾಗಬ್ರಹ್ಮ ಕ್ಷೇತ್ರದ ಆಡಳಿತ ಮೋಕ್ತೆಸರಾದ ವಿದ್ಯಾಧರ ಜೈನ್, ಪಾಲಡ್ಕ ಕೊರಗಜ್ಜ ಕ್ಷೇತ್ರ ಅಧ್ಯಕ್ಷ ಯಶೋಧರ ಮರಕ್ಕಡ, ಹಿಂದೂ ಸಂಗಮದ ತಾಲೂಕು ಆಯೋಜನಾ ಸಮಿತಿ ಅಧ್ಯಕ್ಷ ಅಜಿತ್ ಜಿ.ಶೆಟ್ಟಿ, ಕಾರ್ಯದರ್ಶಿ ವಸಂತ ಮರಕಡ, ಸಂಯೋಜಕ ಅನಿಲ್ ಕುಮಾರ್ ಯು., ಉಪಾಧ್ಯಕ್ಷ ವಸಂತ ಮಜಲು, ಮಡಂತ್ಯಾರು ಮಂಡಲ ಸಂಯೋಜಕ
ಶ್ರೀಕಾಂತ್ ಶೆಟ್ಟಿ ಉಪಸ್ಥಿತರಿದ್ದರು. ತಾಲೂಕು ಆಯೋಜಾನ ಸಮಿತಿ ಜೊತೆ ಕಾರ್ಯದರ್ಶಿ ವೀರೇಂದ್ರ ಕುಮಾರ್
ಸ್ವಾಗತಿಸಿ, ಯಶವಂತ ಶೆಟ್ಟಿ ಮೂಡಯೂರು ವಂದಿಸಿದರು.

Related posts

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧ ನಮನ ಕಾರ್ಯಕ್ರಮ

Suddi Udaya

ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ

Suddi Udaya

ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ವಿವಾದಾತ್ಮಕ ಹೇಳಿಕೆ ಮತ್ತು ಅಧಿಕಾರಿಗಳಿಗೆ ಬೆದರಿಕೆ ವಿರುದ್ಧ ಬೆಳ್ತಂಗಡಿಯಲ್ಲಿ ಎಸ್‌ಡಿಪಿಐ ಪ್ರತಿಭಟನೆ

Suddi Udaya

ವೇಣೂರು ಸರ್ಕಾರಿ ಪ್ರೌಢಶಾಲೆಗೆ ಯುವ ಬೆಂಗಳೂರು ಟ್ರಸ್ಟ್ ವತಿಯಿಂದ ಇಂಟರ್ ಆಕ್ಟಿವ್ ಸ್ಮಾರ್ಟ್ ಬೋರ್ಡ್ ಕೊಡುಗೆ, ಉದ್ಘಾಟನೆ

Suddi Udaya

ಮಾಲಾಡಿ ಬಿ ಎಂ ಆಟೋ ಚಾಲಕ ಮಾಲಕರ ಸಂಘ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಕಾಂಗ್ರೆಸ್ ನ ಸಕ್ರೀಯ ಕಾರ್ಯಕರ್ತೆ ಸಾವಿತ್ರಿ ಬಿಜೆಪಿ ಸೇರ್ಪಡೆ

Suddi Udaya
error: Content is protected !!