25.5 C
ಪುತ್ತೂರು, ಬೆಳ್ತಂಗಡಿ
June 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಡಾ| ವೀಣಾ ಬನ್ನಂಜೆ ರವರಿಂದ ನಾಲ್ಕನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವವು ಜ.23ರಂದು ಪ್ರಾರಂಭಗೊಂಡು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ ನಾಲ್ಕನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯು ಜ. 26ರಂದು ಜರುಗಿತು.

ಸಂಜೆ ಮೋಹನ ಬಂಗೇರ ರವರು ನೀಡಿದ ಸಲಹೆ ಸೂಚನೆಯ ನಂತರ ಮಕ್ಕಳು, ಪುರುಷರು ಮತ್ತು ಮಹಿಳೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣವು ನಡೆಯಿತು. ನಂತರ ನಿವೃತ್ತ ಪ್ರಾಚಾರ್ಯ ಗಣಪತಿ ಭಟ್ ಕುಳಮರ್ವ ಪ್ರಾಸ್ತಾವಿಕ ಮಾತನಾಡಿದರು.

ಗಣ್ಯರಿಂದ ದೀಪ ಪ್ರಜ್ವಲನೆಗೊಂಡ ಬಳಿಕ ಡಾ| ವೀಣಾ ಬನ್ನಂಜೆರವರು ತನ್ನ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ತನ್ನ 11ನೇ ವಯಸ್ಸಿನಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದ ಶ್ರೀ ಕೃಷ್ಣನು ಎರಡು ತಿಂಗಳಲ್ಲಿ 64 ವಿದ್ಯೆಗಳನ್ನು ಕಲಿತಿದ್ದ. ಹಿಂದೆ ಗುರುಕುಲದಲ್ಲಿ 12 ವರ್ಷ ಕಾಲ ಬದುಕುವ ಶಿಕ್ಷಣ ಕಲಿಸಲಾಗುತ್ತಿತ್ತು. ಕೃಷ್ಣ ರಾಜಕಾರಣಿಯಲ್ಲ ಧರ್ಮಕಾರಣಿಯಾಗಿದ್ದ. ಕೃಷ್ಣ ಜ್ಞಾನಿಗಳಲ್ಲಿ ಮಹಾಜ್ಞಾನಿ ಆಗಿದ್ದ ಎಂದ ಅವರು ಕೃಷ್ಣನ ಬಗೆಗಿನ ಹಲವು ವಿಚಾರಗಳನ್ನು ಎರಡು ಗಂಟೆಗಳ ಕಾಲ ನಿರರ್ಗಳವಾಗಿ ತಿಳಿಯಪಡಿಸಿದರು.

ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಧನ್ಯವಾದವಿತ್ತರು. ನಂತರ ಶ್ರೀ ದೇವರಿಗೆ ರಂಗ ಪೂಜೆ ಪ್ರಸಾದ ವಿತರಣೆ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.

ಈ ಸಂದರ್ಭದಲ್ಲಿ ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷ ಪೂರಣ್ ವರ್ಮ, ಸೋನಿಯಾ ವರ್ಮ, ಶ್ರೀ ಗೋಪಾಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲಿಯಾನ್ ಮೊರ್ತಾಜೆ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಲ| ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನಲ್ಕೆ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

Related posts

ಮುಂಡ್ರುಪಾಡಿ ವಸಂತಿರವರ ಮನೆಯ ಮೇಲೆ ಬಿದ್ದ ಮರ: ಧರ್ಮಸ್ಥಳ ಘಟಕದ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ತೆರವು ಕಾರ್ಯ

Suddi Udaya

ಪಟ್ರಮೆ ದಡಂತಮಲೆ ಅರಣ್ಯದಲ್ಲಿ ಅಕ್ರಮವಾಗಿ ಕಡವೆ ಭೇಟೆ – ಕೊವಿ ಸಹಿತ ಮೂವರನ್ನು ವಶಕ್ಕೆ ಪಡೆದ ಉಪ್ಪಿನಂಗಡಿ ಅರಣ್ಯ ಇಲಾಖೆ

Suddi Udaya

ಕರಿಮಣೇಲು ಶ್ರೀ ಕ್ಷೇತ್ರ ದೇಲಂಪುರಿ ಶ್ರೀ ಮಹಾದೇವ ಮಹಾಗಣಪತಿ ದೇವಸ್ಥಾನ: ನವೀಕರಣಗೊಂಡ ಸಭಾಭವನ ಹಾಗೂ ಹೊಸದಾಗಿ ನಿರ್ಮಿಸಿದ ಪಾಕ ಶಾಲೆ, ಭೋಜನ ಶಾಲೆಯ ಲೋಕಾರ್ಪಣೆ

Suddi Udaya

ಮಚ್ಚಿನ: ಮನೆಯಲ್ಲಿ ಯಾರು ಇಲ್ಲದ ವೇಳೆ ಕಳ್ಳತನ

Suddi Udaya

ರಾಜ್ಯ ಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ವಿದ್ಯಾರ್ಥಿ ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಬದ್ಯಾರು ಶ್ರೀ ಲೋಕನಾಥೇಶ್ವರ ಭಜನಾ ಮಂಡಳಿ ಪದಾಧಿಕಾರಿಗಳ ಆಯ್ಕೆ

Suddi Udaya
error: Content is protected !!