July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ: ಸಾರಿ ಫೋಲ್ಡಿಂಗ್, ಬ್ರೈಡಲ್ ಮೇಕಪ್ ಹಾಗೂ ಸಾರಿ ಗೊಂಡೆ ತರಬೇತಿಯ ಸಮಾರೋಪ ಕಾರ್ಯಕ್ರಮ

ಬೆಳ್ತಂಗಡಿ: ನಮ್ಮಲ್ಲಿರುವ ಅಂತರ್ಯದ ಶಕ್ತಿ ಬೆಳಕಿಗೆ ತಂದು ಕೌಶಲ್ಯಗಳನ್ನು ಬೆಳೆಸಿಕೊಂಡರೆ ಅದು ಬದುಕಿಗೆ ಅಮೂಲ್ಯವಾದ ಆಸ್ತಿ ಎಂದು ಹೇಳಬಹುದು. ಮಹಿಳೆಯರು ಈ ನಿಟ್ಟಿನಲ್ಲಿ ಧೈರ್ಯದಿಂದ ಸ್ವ ಉದ್ಯೋಗ ಮಾಡುವ ವಿದ್ಯೆಯನ್ನು ಕರಗತ ಮಾಡಿಕೊಂಡಲ್ಲಿ ಆರ್ಥಿಕ ಸ್ವಾವಲಂಬನೆ ಹೊಂದಲು ಸಾಧ್ಯ. ಜ್ಞಾನವಿಕಾಸ ಕಾರ್ಯಕ್ರಮದ ಅಧ್ಯಕ್ಷರು ಮಾತೃಶ್ತೀ ಹೇಮಾವತಿ ವೀ. ಹೆಗ್ಗಡೆಯವರ ಆಶಯದಂತೆ ಮಹಿಳೆಯರು ಸ್ವಉದ್ಯೋಗದ ಮೂಲಕ ಆದಾಯ ಗಳಿಕೆ ಮಾಡಬೇಕು. ಇದರಿಂದ ಸಮಾಜದಲ್ಲಿ ಗುರುತಿಸಿಕೊಳ್ಳಬಹುದು ಆತ್ಮಸ್ಥೈರ್ಯ ಹೆಚ್ಚಿಸಿಕೊಳ್ಳಬಹುದು. ಅದಕ್ಕಾಗಿ ತರಬೇತಿ ಕೇಂದ್ರವು ಪ್ರತೀ ವರ್ಷ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಉಚಿತವಾಗಿ ತರಬೇತಿಯನ್ನು ಆಯೋಜಿಸುತ್ತಿದೆ. ಇದರ ಪ್ರಯೋಜನವನ್ನು ಪಡೆದುಕೊಂಡು ಎಲ್ಲರೂ ತಮ್ಮ ಬದುಕಿಗೆ ಒಂದು ಅರ್ಥವನ್ನು ಕಂಡುಕೊಳ್ಳಿ ಎಂದು ಯೋಜನೆಯ ನಿವೃತ್ತ ಪ್ರಾದೇಶಿಕ ನಿರ್ದೇಶಕ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಸಾರ್ವಜಿನಿಕ ಸಂಪರ್ಕಾಧಿಕಾರಿ ದುಗ್ಗೇ ಗೌಡ ಅಭಿಪ್ರಾಯಪಟ್ಟರು.

ಅವರು ಗ್ರಾಮೀಣ ಶ್ರೇಷ್ಠತಾ ಕೇಂದ್ರದಲ್ಲಿ ನಡೆದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು. ತರಬೇತಿ ಪಡಕೊಂಡ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಶುಭಹಾರೈಸಿದರು.
ಒಟ್ಟು 39 ಮಂದಿ ಶಿಬಿರಾರ್ಥಿಗಳು ಭಾಗವಹಿಸಿ ತರಬೇತಿಯ ಸದುಪಯೋಗ ಪಡೆದುಕೊಂಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಕು. ಹರ್ಷಿತಾ ಮೇಕಪ್ ಆರ್ಟಿಸ್ಟ್ ಹಾಗೂ ಸಾರಿ ಗೊಂಡೆ ಸಂಪನ್ಮೂಲ ವ್ಯಕ್ತಿ ಗುಣಶ್ರೀ ತರಗತಿ ನೀಡಿದ್ದಾರೆ. ತರಬೇತಿ ಸಂಯೋಜಕರು ಜಯಶ್ರೀ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಟೈಲರಿಂಗ್ ಶಿಕ್ಷಕಿ ಉಷಾ ಧನ್ಯವಾದ ನೀಡಿದರು.

Related posts

ಕನ್ಯಾಡಿ ಸೇವಾನಿಕೇತನಕ್ಕೆ ಬೈಂದೂರು ಶಾಸಕರ ಭೇಟಿ

Suddi Udaya

ಪಟ್ರಮೆ ವ್ಯಾಪ್ತಿಯಲ್ಲಿ ಶಾಸಕ ಹರೀಶ್ ಪೂಂಜರಿಂದ ಮನೆ ಮನೆಗೆ ಭೇಟಿ ನೀಡಿ ಚುನಾವಣಾ ಪ್ರಚಾರ

Suddi Udaya

ಧರ್ಮಾಧಿಕಾರಿ ಡಾ.ಹೆಗ್ಗಡೆಯವರಿಂದ ಎಂ.ಜಿ. ಶೆಟ್ಟಿಯವರ ನಿಧನಕ್ಕೆ ಸಂತಾಪ

Suddi Udaya

ಜಿ.ಪಂ. ಮಾಜಿ ಉಪಾಧ್ಯಕ್ಷ ಧರಣೇಂದ್ರ ಕುಮಾರ್‌ರ ಮಾತೃಶ್ರೀ ಸಿರಿಯಮ್ಮ ಹೊಸಂಗಡಿ ನಿಧನ

Suddi Udaya

ಉಜಿರೆಯಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya

ಮಚ್ಚಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳಿಂದ ಕಬಡ್ಡಿ ಮ್ಯಾಟ್ ಹಸ್ತಾಂತರ

Suddi Udaya
error: Content is protected !!