23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಅರಸಿನಮಕ್ಕಿಯಲ್ಲಿ ಹಿಂದೂ ಸಂಗಮ

ಅರಸಿನಮಕ್ಕಿ : ಅನಾದಿ ಕಾಲದಿಂದಲೂ ಚಾಲ್ತಿಯಲ್ಲಿರುವ ಭಾರತದ ಸುಂದರವಾದ, ಮೌಲ್ಯಯುತ ಕೌಟುಂಬಿಕ ವ್ಯವಸ್ಥೆಯನ್ನು ಪಾಶ್ಚಿಮಾತ್ಯ ದೇಶಗಳು ಹಾಡಿ ಹೊಗಳುತ್ತಿವೆ. ಈ ವ್ಯವಸ್ಥೆಯನ್ನು ಉಳಿಸಿಕೊಂಡು ಹೋಗುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ ಎಂದು ಆರ್ ಎಸ್ ಎಸ್ ಕುಟುಂಬ ಪ್ರಬೋಧನ್ ವಿಭಾಗ ಸಂಯೋಜಕ್ ಗುರುರಾಜ್ ರಾವ್ ಕೋಟೇಶ್ವರ ಹೇಳಿದ್ದಾರೆ.

ಅವರು ಇಲ್ಲಿನ ಕೇಂದ್ರ ಮೈದಾನದಲ್ಲಿ ಜ. 25ರಂದು ನಡೆದ ಹತ್ಯಡ್ಕ, ಶಿಶಿಲ, ಶಿಬಾಜೆ, ರೆಖ್ಯ ಗ್ರಾಮ ಒಳಗೊಂಡ ಅರಸಿನಮಕ್ಕಿ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಬೌದ್ಧಿಕ್ ನೀಡಿದರು.


ಕುಟುಂಬ ಜೀವನದ ಬೇರುಗಳು ಶಿಥಿಲಗೊಂಡರೆ ಇಡೀ ಹಿಂದು ಸಮಾಜವೇ ಸೊರಗುತ್ತದೆ. ಅವಿಭಕ್ತ ಕುಟುಂಬ ನಮ್ಮ ಧರ್ಮದ ಶಕ್ತಿ. ಕುಟುಂಬದಲ್ಲಿ ಯಾರೂ ಬೇರೆ ಬೇರೆಯಾಗದೆ ಒಟ್ಟಿಗೆ ಜೀವನ ಸಾಗಿಸಬೇಕು. ಜೀವನ ಮೌಲ್ಯಗಳು, ನೈತಿಕತೆ, ಸಂಸ್ಕಾರವನ್ನು ಮಕ್ಕಳಲ್ಲಿ ಬೆಳೆಸಬೇಕು. ಹಣ ಸಂಪಾದನೆಯ ಭರದಲ್ಲಿ ಕುಟುಂಬ ಜೀವನದ ನೆಮ್ಮದಿಯನ್ನು ಕಳೆದುಕೊಳ್ಳಬಾರದು. ನಗರ ವ್ಯಾಮೋಹದಿಂದ ವಿಚ್ಛೇದನ ಪ್ರಕರಣಗಳು ಹೆಚ್ಚಾಗುತ್ತಿವೆ. ಇದು ಹಿಂದೂ ಧರ್ಮಕ್ಕೆ ಮಾರಕ ಎಂದು ಹೇಳಿದರು.

ಚೇತನಾ ಚಂದ್ರಶೇಖರ್ ಶಿಶಿಲ, ಉದ್ಯಮಿ ವಾಮನ ತಾಮನ್ ಕರ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ಸಂಯೋಜಕರಾದ ರಾಘವೇಂದ್ರ ನಾಯಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಶೋಕ ಪತ್ತಿಮಾರು, ಹಿಂದು ಸಂಗಮ ತಾಲೂಕು ಸಹ ಸಂಯೋಜಕ್ ದಿನೇಶ್ ಚಾರ್ಮಾಡಿ ಉಪಸ್ಥಿತರಿದ್ದರು.
ಹಿಂದು ಸಂಗಮ ತಾಲೂಕು ಸಮಿತಿ ಸದಸ್ಯ ವೃಷಾಂಕ್ ಖಾಡಿಲ್ಕರ್ ಸ್ವಾಗತಿಸಿ ಪ್ರಸ್ತಾವನೆಗೈದರು. ಗಣೇಶ್ ಕೆ. ಹೊಸ್ತೋಟ ವಂದಿಸಿದರು.

ಕಾರ್ಯಕ್ರಮಕ್ಕೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ ನೀಡಿ ಶುಭ ಹಾರೈಸಿದರು. ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿಯವರು ಪ್ರತಿ ಮನೆಗೆ ಒಂದರಂತೆ ಭಗವದ್ಗೀತೆ ಪುಸ್ತಕಗಳನ್ನು ಉಚಿತವಾಗಿ ನೀಡಿದರು. ಅರಸಿನಮಕ್ಕಿ ಮಂಡಲದ ಮಾತೆಯರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ತ್ಯಾಂಪಣ್ಣಶೆಟ್ಟಿಗಾ‌ರ್ ಮತ್ತು ರೇಣುಕಾ ಸುಧೀರ್ ಕಾರ್ಯಕ್ರಮ ನಿರೂಪಿಸಿದರು.
ಇದಕ್ಕೂ ಮೊದಲು ಸ್ನೇಹ ಸನ್ನಿಧಿಯಿಂದ ಕೇಂದ್ರ ಮೈದಾನವರೆಗೆ ವೈಭವದ ಶೋಭಯಾತ್ರೆ ನಡೆಯಿತು.

Related posts

ಶಿಶಿಲ ಅಡ್ಡಹಳ್ಳ ಎಂಬಲ್ಲಿ ರಸ್ತೆಗೆ ಅಡ್ಡವಾಗಿ ಬಿದ್ದ ಬೃಹತ್ ಗಾತ್ರದ ಮರ: ಶೌರ್ಯ ವಿಪತ್ತು ತಂಡದ ಸದಸ್ಯರಿಂದ ಮರ ತೆರವು

Suddi Udaya

ಧರ್ಮಸ್ಥಳ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರ ಅವಿರೋಧ ಆಯ್ಕೆ

Suddi Udaya

ಬೆಳ್ತಂಗಡಿ: ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಲಯ ಮಟ್ಟದ ಕಬಡ್ಡಿ ಪಂದ್ಯಾಟ

Suddi Udaya

ಹೊಸಪಟ್ಣ: ಶ್ರೀ ಸತ್ಯನಾರಾಯಣ ರಂಗ ಮಂದಿರದ ವಠಾರದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ಜು.5 ರಿಂದ ಬೆಳ್ತಂಗಡಿ ಆನ್ ಸಿಲ್ಕ್ಸ್ ನಲ್ಲಿ ಆಷಾಢ ಡಿಸ್ಕೌಂಟ್ ಸೇಲ್: ಪ್ರತಿ ಖರೀದಿಗೆ ಶೇ. 50 ರಷ್ಟು ರಿಯಾಯಿತಿ

Suddi Udaya

ಬೆಳ್ತಂಗಡಿ ಧರ್ಮಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಾಗಿ ಅಭಿಷಕ್ತರಾದ ಬಿಷಪ್ ಜೇಮ್ಸ್ ಪಟ್ಟೇರಿಲ್ ರವರನ್ನು ಅಭಿನಂದಿಸಿದ ಎಕ್ಸೆಲ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya
error: Content is protected !!