ಉಜಿರೆ: ಉಜಿರೆಯ ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾದ ರೆವರೆಂಡ್ ಡಾ. ವಿಜಯ್ ಲೋಬೊ ಅವರು ತಂಜಾವೂರಿನ ಪ್ರಿಸ್ಟ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡಿದ್ದಾರೆ.
ತಂಜಾವೂರಿನ ಪ್ರಿಸ್ಟ್ ವಿಶ್ವವಿದ್ಯಾಲಯದಲ್ಲಿ ಡಾ. ಬಕ್ರುದೀನ್ ಅಲಿ ಅಹ್ಮದ್ ಅವರ ಗೌರವಾನ್ವಿತ ಮಾರ್ಗದರ್ಶನದಲ್ಲಿ “ದಿ ಪೊಟೆನ್ಷಿಯಲ್ ಎಫೆಕ್ಟ್ ಆಫ್ ಥಿಯಾಫ್ಲಾವಿನ್ ಅಂಡ್ ಇಟ್ಸ್ ಡೆರಿವೇಟಿವ್ಸ್ ಆನ್ ಓರಲ್ ಕ್ಯಾನ್ಸರ್ ಇನ್ ವಿಟ್ರೊ ಅಂಡ್ ಇನ್ ವಿವೋ ಸ್ಟಡೀಸ್” ಎಂಬ ಶೀರ್ಷಿಕೆಯಡಿಯಲ್ಲಿ ಮಂಡಿಸಿದ ಡಾಕ್ಟರೇಟ್ ಪ್ರಬಂಧವನ್ನು ಅವರು ಯಶಸ್ವಿಯಾಗಿ ಸಮರ್ಥಿಸಿಕೊಂಡಿದ್ದು, ಈ ಹಿನ್ನೆಲೆಯಲ್ಲಿ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗಿದೆ.
ಈ ಶೈಕ್ಷಣಿಕ ಸಾಧನೆ ಡಾ. ವಿಜಯ್ ಲೋಬೊ ಅವರ ಕಠಿಣ ಸಂಶೋಧನಾ ಪರಿಶ್ರಮ, ಅಚಲ ಸಮರ್ಪಣೆ ಹಾಗೂ ಬಾಯಿಯ ಕ್ಯಾನ್ಸರ್ ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಪ್ರತಿಬಿಂಬಿಸುತ್ತದೆ. ಅನುಗ್ರಹ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರಾಗಿ ಅಲ್ಪಾವಧಿಯಲ್ಲೇ ಹಲವು ಶೈಕ್ಷಣಿಕ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣ ಕ್ರಾಂತಿಯನ್ನು ಮೂಡಿಸಿದ್ದಾರೆ.
ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸದಾ ಶ್ರಮಿಸುತ್ತಿರುವ ಡಾ. ವಿಜಯ್ ಲೋಬೊ ಅವರು ತಂಜಾವೂರಿನ ಪ್ರಿಸ್ಟ್ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುವುದು ಸಂಸ್ಥೆಗೂ ಉಜಿರೆ ಪ್ರದೇಶಕ್ಕೂ ಹೆಮ್ಮೆಯ ವಿಷಯವಾಗಿದೆ.











