25.7 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿವರದಿ

ಫೆ.5-6: ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ

ಶಿಬಾಜೆ ಶ್ರೀಕ್ಷೇತ್ರ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಲೋಕಕಲ್ಯಾಣಾರ್ಥ ಶತಚಂಡಿಕಾಯಾಗ ಮತ್ತು ನವೀಕೃತ ರಾಜಾಂಗಣದ ಲೋಕಾರ್ಪಣೆ ಕಾರ್ಯಕ್ರಮ ಫೆ. 5 ಮತ್ತು 6 ರಂದು ಶ್ರೀಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ಶ್ರೀ ನಾಗೇಶ ತಂತ್ರಿಗಳ ಉಪಸ್ಥಿತಿಯಲ್ಲಿ ನಡೆಯಲಿದೆ.

ವೈದಿಕ ಕಾರ್ಯಕ್ರಮಗಳು: ಫೆ.05 ಬೆಳಿಗ್ಗೆ ವೇದಘೋಷಪೂರ್ವಕ ದೇವತಾ ಪ್ರಾರ್ಥನೆ, ಅವಿಘ್ನ ಗಣಪತಿ ಪೂಜೆ, ಪುಣ್ಯಾಹ ವಾಚನ, ಆಚಾರ್ಯಾದಿ ಋತ್ವಿಕ್‌ರಣ – ಮಧುಪರ್ಕ, ನವೀಕೃತ ರಾಜಾಂಗಣ ಉದ್ಘಾಟನೆ, ಭಜನಾ ಸೇವೆ ಆರಂಭ, ಶ್ರೀ ಕ್ಷೇತ್ರ ದೈವಗಳಿಗೆ ತಂಬಿಲ, ಶ್ರೀಸೂಕ್ತ ಪಾರಾಯಣ, ಅಥರ್ವ ಶೀರ್ಷ ಪಾರಾಯಣ, ಪ್ರಾಸಾದ ಶುದ್ಧಿ, ಸಗ್ರಹ ಅಷ್ಟೋತ್ತರಶತ ಮೋದಕ ಹೋಮ. ಯಾಗಶಾಲಾ ಚತುರ್ದ್ವಾರ ಪೂಜೆ, ಕಲಶಾರಾಧನೆ, ದೇವತಾ ಸ್ಥಾಪನೆ, ದೇವೀ ಸೂಕ್ತ ಪಾರಾಯಣ, ದುರ್ಗಾಸೂಕ್ತ ಪಾರಾಯಣ, ಚತುಃಷಷ್ಟಿ ಯೋಗಿನೀ ಪೂಜೆ, ಕ್ಷೇತ್ರದ ದೇವರಿಗೆ ಮಹಾಪೂಜೆ, ಮಂಗಳಾರತಿ, ಪ್ರಸಾದ ವಿನಿಯೋಗ.

ಸಂಜೆ ಅರಣಿ ಮಥನ, ಅಗ್ನಿಜನನ, ಕುಂಡ ಸಂಸ್ಕಾರ, ಅಗ್ನಿ ಪ್ರತಿಷ್ಠೆ, ವೇದ ಪಾರಾಯಣ, ಕಲಶಾರಾಧನೆ, ಅಷ್ಟಾವಧಾನ ಸೇವೆ, ಶ್ರೀಕ್ಷೇತ್ರದ ದೇವರಿಗೆ ರಂಗಪೂಜೆ, ರಾತ್ರಿ ಗಂಟೆ 8.00ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ.

ಫೆ.06 ರಂದು ಉಷಃಕಾಲ ಪೂಜೆ, ದುರ್ಗಾಯಂತ್ರಮಂಡಲ ಪೂಜೆ, ಪೂರ್ವಾಂಗ ಹೋಮ ಪ್ರಯೋಗ, ಚಂಡಿಕಾಹೋಮ, ತರ್ಪ ಬಲಿದಾನ. ಪೂರ್ಣಾಹುತಿ, ಸುವಾಸಿನೀ, ಕುಮಾರಿಕಾ, ದಂಪತಿ ಪೂಜೆ, ಕರ್ಮ ಸಮಾಪ್ತಿ, ಫಲಮಂತ್ರಾಕ್ಷತೆ, ಆಶೀರ್ವಚನ. ಶ್ರೀ ದೇವ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಲಿದೆ.

Related posts

ಹಿಮಾಲಯ ವುಡ್ ಬ್ಯಾಡ್ಜ್ ತರಬೇತಿಯಲ್ಲಿ ಅರ್ಹತೆ ಪಡೆದ ಮಡಂತ್ಯಾರು ಸೆಕ್ರೇಡ್ ಹಾರ್ಟ್ ಆಂ.ಮಾ. ಶಾಲೆಯ ಸ್ಕೌಟ್ ಮಾಸ್ಟರ್ ಚಿದಾನಂದ್

Suddi Udaya

ವಿ.ಆರ್.ಡಿ.ಎಫ್ ಜಾಲ್ಸುರು ಸಮಿತಿ ಸದಸ್ಯರ ಕೃಷಿ ಅಧ್ಯಯನ ಪ್ರವಾಸ: ಬೆಳ್ತಂಗಡಿಯ ಕಡಮ್ಮಾಜೆ ಫಾರ್ಮ್ ಗೆ ಭೇಟಿ

Suddi Udaya

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

Suddi Udaya

ಸುಲ್ಕೇರಿಮೊಗ್ರು ಹೊಸಮನೆ ನಿವಾಸಿ ನೀಲಮ್ಮ ನಿಧನ

Suddi Udaya

ಕಳೆದುಕೊಂಡಿದ್ದ ಚಿನ್ನವನ್ನು ಮರಳಿ ದಂಪತಿಗಳಿಗೆ ಹಸ್ತಾಂತರಿಸಿದ ಲಾಡ್ಜ್ ಮಾಲೀಕ

Suddi Udaya

ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಪಾಲೆತ್ತಡಿ ಗುತ್ತು ಜೀರ್ಣೋದ್ದಾರದ ಸಮಾಲೋಚನ ಸಭೆ

Suddi Udaya
error: Content is protected !!