38.6 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ತುಮಕೂರಿನಲ್ಲಿ ಎಸ್.ಡಿ.ಎಂ ಕಾಲೇಜಿನ ಕಲಾಕೇಂದ್ರ ವಿದ್ಯಾರ್ಥಿಗಳಿಂದ ‘ ಎಸ್.ಡಿ.ಎಂ ಕಲಾ ವೈಭವ’ ಪ್ರದರ್ಶನ

ಉಜಿರೆ : ತುಮಕೂರು ಜಿಲ್ಲೆಯ ತಿಪಟೂರು ತಾಲ್ಲೂಕಿನ ಕೆರೆಗೋಡಿ – ರಂಗಾಪುರ ಸುಕ್ಷೇತ್ರದಲ್ಲಿ ಆಯೋಜಿಸಿದ್ದ ಶ್ರೀ ಗುರು ಸಪ್ತಾಹ ಧಾರ್ಮಿಕ ಸಮಾರಂಭ ಹಾಗೂ ಪರಮಪೂಜ್ಯ ಏಳನೆಯ ಶ್ರೀ ಗುರುಪರದೇಶಿಕೇಂದ್ರ ಮಹಾಸ್ವಾಮೀಜಿಯವರ ಪೀಠಾರೋಹಣದ ಸಮಾರಂಭದ ಅಂಗವಾಗಿ ಶ್ರೀ ಪರದೇಶಿಕೇಂದ್ರ ಪರಂಜ್ಯೋತಿ ವೇದಿಕೆಯಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ (ಸ್ವಾಯತ್ತ) ಕಾಲೇಜಿನ ಕಲಾಕೇಂದ್ರ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.

ಕಾರ್ಯಕ್ರಮದಲ್ಲಿ 150 ಕ್ಕೂ ಅಧಿಕ ವಿದ್ಯಾರ್ಥಿಗಳಿಂದ ಕಥಕ್, ಮೋಹಿನಿಯಾಟ್ಟಂ, ಭರತನಾಟ್ಯ, ಗುಜರಾತಿ ನೃತ್ಯ, ಯಕ್ಷಗಾನ, ಶಿವತಾಂಡವ, ಥೆಯ್ಯಂ, ಚಂಡೆನಾದ ಸೇರಿದಂತೆ ವಿವಿಧ ಬಗೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಸುಮಾರು ಎರಡು ಗಂಟೆಗಳ ಕಾಲ ಸಾಂಸ್ಕೃತಿಕ ಕಲಾ ವೈಭವವನ್ನು ಪ್ರದರ್ಶನ ಮಾಡಲಾಯಿತು.

ಈ ಹಿಂದೆ ಉಜಿರೆಯ ಎಸ್.ಡಿ.ಎಂ ಕಲಾವೈಭವವ ತಂಡವು ಕೇವಲ 2 ವರ್ಷಗಳಲ್ಲಿ ಧರ್ಮಸ್ಥಳ, ಶ್ರವಣಬೆಳಗೊಳ, ಉಡುಪಿ, ಮೂಡಬಿದ್ರೆ, ಕಾರ್ಕಳ, ಧಾರವಾಡ, ದಾವಣಗೆರೆ, ಮೈಸೂರು , ತುಮಕೂರು ಸೇರಿದಂತೆ ರಾಜ್ಯದಾದ್ಯಂತ ಸುಮಾರು 100 ಕ್ಕೂ ಹೆಚ್ಚಿನ ಸ್ಥಳಗಳಲ್ಲಿ ಪ್ರದರ್ಶನ ನೀಡಿ ಎಲ್ಲರ ಮನಗೆದ್ದಿದೆ.

ವಿದ್ಯಾರ್ಥಿಗಳಿಗೆ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ಉಜಿರೆಯ ಸೋನಿಯಾ ಯಶೋವರ್ಮ, ಐಟಿ ಮತ್ತು ಹಾಸ್ಟೆಲ್ ಆಡಳಿತ ವಿಭಾಗದ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪೂರನ್ ವರ್ಮ, ಪ್ರಾಂಶುಪಾಲ ಪ್ರೊ ವಿಶ್ವನಾಥ್ ಪಿ ಮಾರ್ಗದರ್ಶನ ನೀಡಿದ್ದು, ಯಶವಂತ್ ಡ್ರಾಮ, ಚೈತ್ರ ನೃತ್ಯ ಹಾಗು ಅರುಣ್ ಯಕ್ಷಗಾನ ತರಬೇತಿಯನ್ನು ನೀಡಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ವಿದ್ಯಾರ್ಥಿ ಅರ್ಚಿತ್ ಜೈನ್ ಸಂಸೆ ನಿರೂಪಿಸಿ, ಎಸ್.ಡಿ.ಎಂ ಕಲಾಕೇಂದ್ರದ ಸಂಯೋಜಕ ತೃಪ್ತ ಕುಮಾರ್ ಜೈನ್ ಕಾರ್ಯಕ್ರಮವನ್ನು ಸಂಯೋಜಿಸಿದರು.

100 ವಿದ್ಯಾರ್ಥಿಗಳಿಂದ ಸಂಪೂರ್ಣ ರಾಮಾಯಣ :

ಕಾರ್ಯಕ್ರಮದಲ್ಲಿ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹಾಗು ಉಜಿರೆಯ ಸೋನಿಯಾ ಯಶೋವರ್ಮರವರ ಮಾರ್ಗದರ್ಶನದಲ್ಲಿ ವಿರಚಿತವಾದ ಶ್ರೀ ರಾಮಾಯಣ ದರ್ಶನಂ ಎಂಬ ನೃತ್ಯ ರೂಪಕ ಅತೀ ಹೆಚ್ಚಿನ ಪ್ರಶಂಸೆಗೆ ಪಾತ್ರವಾಗಿ , ಕೇವಲ 25 ನಿಮಿಷಗಳಲ್ಲಿ 100 ಜನ ವಿದ್ಯಾರ್ಥಿಗಳಿಂದ ಸಂಪೂರ್ಣ ರಾಮಯಣವನ್ನು ಇಂಡೋನೇಷ್ಯಾದ ಬಾಲಿ, ಶ್ರೀಲಂಕಾದ ಕ್ಯಾಂಡಿಯನ್, ರಷ್ಯಾದ ಕಳಿಂಕ, ಸ್ಪೈನ್ ದೇಶದ ಫ್ಲೆಮೆಂಕೋ ಸೇರಿದಂತೆ ವಿವಿಧ ನೃತ ಪ್ರಕಾರಗಳಲ್ಲಿ ಪ್ರಸ್ತುತ ಪಡಿಸಲಾಯಿತು.

Related posts

ಮೇಲಂತಬೆಟ್ಟು: ಪಕ್ಕಿದಕಲದಲ್ಲಿ ರಸ್ತೆಗೆ ಬಿದ್ದ ಮರ: ಸ್ಥಳೀಯರಿಂದ ತೆರವು ಕಾರ್ಯ

Suddi Udaya

ಬೆಳ್ತಂಗಡಿ: ಶ್ರೀ ಧ. ಮಂ. ಆಂ.ಮಾ. ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Suddi Udaya

ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಪಾಲ್ಗೊಂಡ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯ ವಿದ್ಯಾರ್ಥಿ ಸಾತ್ವಿಕ್ ಭಟ್ ಗೆ ಸನ್ಮಾನ

Suddi Udaya

ರವಿ ಕಕ್ಕೆಪದವು ರವರಿಗೆ ತೆರೆಮರೆಯ ನಾಯಕ ಪುರಸ್ಕಾರ

Suddi Udaya

ಬೆಳ್ತಂಗಡಿ ಲಯನ್ಸ್ ಕ್ಲಬ್ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ದೇವದಾಸ್ ಶೆಟ್ಟಿ, ಕಾರ್ಯದರ್ಶಿ ಕಿರಣ್‌ ಕುಮಾರ್ ಶೆಟ್ಟಿ, ಕೋಶಾಧಿಕಾರಿ ಅಮಿತಾನಂದ ಹೆಗ್ಡೆ

Suddi Udaya

ಭಾರೀ ಗಾಳಿ ಮಳೆ: ಇಂದಬೆಟ್ಟುವಿನಲ್ಲಿ ಮನೆಗೆ ಮರ ಬಿದ್ದು ಹಾನಿ: ವಿದ್ಯುತ್ ಕಂಬ ಹಾಗೂ ರಬ್ಬರ್ ಗಿಡಗಳು ಧರಾಶಾಹಿ

Suddi Udaya
error: Content is protected !!