ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಸ್ವಂತ ಖರ್ಚಿನಲ್ಲಿ ಸಾರ್ವಜನಿಕ ರಸ್ತೆಯ ದುರಸ್ತಿ; ವೇಣೂರು ಗ್ರಾ.ಪಂ. ಸದಸ್ಯರ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ

ವೇಣೂರು: ಎಷ್ಟೋ ಗ್ರಾಮೀಣ ರಸ್ತೆಗಳು ದುರಸ್ತಿಗಾಗಿ ಕಾಯುತ್ತಿವೆ. ಕೆಲವನ್ನು ಪಂಚಾಯತ್‌ನ ಅನುದಾನದಿಂದ ದುರಸ್ತಿ ಕಾರ್ಯ ನಡೆದರೆ ಇನ್ನು ಕೆಲವು ರಸ್ತೆಗಳು ಅನುದಾನಗಳ ಕೊರತೆಯಿಂದ ಬಾಕಿಉಳಿದಿವೆ. ವೇಣೂರು ಗ್ರಾ.ಪಂ.ನ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಿಂದಲೇ ಮಣ್ಣಿನ ರಸ್ತೆಯ ದುರಸ್ತಿ ಮಾಡಿಸಿ ಮಾದರಿಯಾಗಿದ್ದಾರೆ.

ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಪಂಚಾಯತ್‌ನಲ್ಲಿ ಅನುದಾನಗಳು ದೊರೆಯುತ್ತಿಲ್ಲ. ಇದನ್ನು ಮನಗಂಡು ಪಂಚಾಯತ್ ಸದಸ್ಯರಾದ ಮೂಡುಕೋಡಿಯ ಸುಂದರ ಹೆಗ್ಡೆ ಬಿಇ ಅವರು ತಮ್ಮ ಸ್ವಂತ ಖರ್ಚಿನಿಂದ ಮೂಡುಕೋಡಿ-ಪುತ್ತಿಲಕಜೆ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದು, ಇವರ ಈ ಕಾರ್ಯ ಗ್ರಾಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆಯವರು ಧಾರ್ಮಿಕ, ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ.

Related posts

ಬೆಳ್ತಂಗಡಿ ಡಿ.ಕೆ.ಆರ್.ಡಿ.ಎಸ್ ವತಿಯಿಂದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸ್ನೇಹಕೂಟ

Suddi Udaya

ಬಳಂಜ ಬದಿನಡೆ ಕ್ಷೇತ್ರದಲ್ಲಿಪ್ರಶ್ನಾ ಚಿಂತನೆ

Suddi Udaya

ಬಿಜೆಪಿ ಮಹಿಳಾ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ರಾಷ್ಟ್ರಮಟ್ಟದ ವೆಯ್ಟ್ ಲಿಫ್ಟರ್ ತೇಜಸ್ವಿನಿ ಪೂಜಾರಿಯವರಿಗೆ ಸನ್ಮಾನ

Suddi Udaya

ಪುಂಜಾಲಕಟ್ಟೆ ಸ್ಪಂದನ ಆಟೋ ಚಾಲಕ ಮಾಲಕರ ಸಂಘದ ವಾರ್ಷಿಕ ಮಹಾಸಭೆ: ಪದಾಧಿಕಾರಿಗಳ ಆಯ್ಕೆ

Suddi Udaya

ರಾಜ್ಯ ಮಟ್ಟದ ಸ್ಪೆಲ್ ಬಿ ಸ್ಪರ್ಧೆ: ಸ್ಟಾರ್ ಲೈನ್ ಆಂ.ಮಾ. ಶಾಲೆ ರಝಾ ವಿದ್ಯಾರ್ಥಿ ಮೊಹಮ್ಮದ್ ಫಾಝಿಲ್ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

ಗೆಜ್ಜೆಗಿರಿ ಕ್ಷೇತ್ರ ಅಭಿವೃದ್ಧಿಗೆ ಜೆ.ಪಿ. ಸುಧಾಕರ್ ಅವರಿಂದ ಸಕಾರಾತ್ಮಕ ಸ್ಪಂದನೆ

Suddi Udaya
error: Content is protected !!