ವೇಣೂರು: ಎಷ್ಟೋ ಗ್ರಾಮೀಣ ರಸ್ತೆಗಳು ದುರಸ್ತಿಗಾಗಿ ಕಾಯುತ್ತಿವೆ. ಕೆಲವನ್ನು ಪಂಚಾಯತ್‌ನ ಅನುದಾನದಿಂದ ದುರಸ್ತಿ ಕಾರ್ಯ ನಡೆದರೆ ಇನ್ನು ಕೆಲವು ರಸ್ತೆಗಳು ಅನುದಾನಗಳ ಕೊರತೆಯಿಂದ ಬಾಕಿಉಳಿದಿವೆ. ವೇಣೂರು ಗ್ರಾ.ಪಂ.ನ ಸದಸ್ಯರೊಬ್ಬರು ತಮ್ಮ ಸ್ವಂತ ಖರ್ಚಿನಿಂದಲೇ ಮಣ್ಣಿನ ರಸ್ತೆಯ ದುರಸ್ತಿ ಮಾಡಿಸಿ ಮಾದರಿಯಾಗಿದ್ದಾರೆ.
ಗ್ರಾಮಸ್ಥರ ಬೇಡಿಕೆಗೆ ಅನುಗುಣವಾಗಿ ಪಂಚಾಯತ್‌ನಲ್ಲಿ ಅನುದಾನಗಳು ದೊರೆಯುತ್ತಿಲ್ಲ. ಇದನ್ನು ಮನಗಂಡು ಪಂಚಾಯತ್ ಸದಸ್ಯರಾದ ಮೂಡುಕೋಡಿಯ ಸುಂದರ ಹೆಗ್ಡೆ ಬಿಇ ಅವರು ತಮ್ಮ ಸ್ವಂತ ಖರ್ಚಿನಿಂದ ಮೂಡುಕೋಡಿ-ಪುತ್ತಿಲಕಜೆ ರಸ್ತೆಯ ದುರಸ್ತಿ ಕಾರ್ಯ ನಡೆಸಿದ್ದು, ಇವರ ಈ ಕಾರ್ಯ ಗ್ರಾಮದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ವೇಣೂರು ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಸುಂದರ ಹೆಗ್ಡೆಯವರು ಧಾರ್ಮಿಕ, ಸಾಮಾಜಿಕ ಸೇವೆಯಲ್ಲೂ ಗುರುತಿಸಿಕೊಂಡಿದ್ದಾರೆ.











