July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿ

ನಾವೂರು: ಡಾ| ವೀಣಾ ಬನ್ನಂಜೆಯವರ ಏಳನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆ: ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಭಾಗಿ

ನಾವೂರು: ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವದ ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ, ಡಾ| ವೀಣಾ ಬನ್ನಂಜೆ ರವರಿಂದ 7ನೇ ದಿನದ ಶ್ರೀ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯು ಜ.29ರಂದು ಜರುಗಿತು.

ಡಾ. ಪ್ರದೀಪ್ ನಾವೂರು ಮಾರ್ಗದರ್ಶನದಲ್ಲಿ ಎಲ್ಲಾ ಕಾರ್ಯಕ್ರಮಗಳು ಗೋಪಾಲಕೃಷ್ಣ ದೇವಸ್ಥಾನ ಟ್ರಸ್ಟ್ ಮೂಲಕ ನಡೆಯುತ್ತಿದ್ದು, ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ಉಪಾಧ್ಯಕ್ಷ ತನುಜಾ ಶೇಖರ್, ಪ್ರಧಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ, ಕಾರ್ಯದರ್ಶಿ ತಿಮ್ಮಪ್ಪ ಜಿ. ಗೋಳ್ತಾರ, ಕೋಶಾಧಿಕಾರಿ ಬಿ.ಉಮೇಶ್ ಪ್ರಭು ಹಡೀಲು, ಸದಸ್ಯರಾದ ಎ.ಬಿ. ಉಮೇಶ್ ಅತ್ಯಡ್ಕ, ಗಣೇಶ್ ಕೆ. ಕಣಾಲು, ಹರೀಶ್ ಕೆ ಕಾರಿಂಜ ನಾವೂರು, ರವಿರಾಜ ಜೈನ್ ಬಡೆಕ್ಕಾವುಗುತ್ತು, ತಣಿಯಪ್ಪ ನಲ್ಕೆ ಕಿರ್ನಡ್ಕ, ಗಣೇಶ್ ಗೌಡ ನೆಲ್ಲಿಪಲ್ಕೆ ಹಾಗೂ ಗ್ರಾಮಸ್ಥರು ಸಹಕಾರದೊಂದಿಗೆ ಮಕ್ಕಳು, ಪುರುಷರು ಮತ್ತು ಮಹಿಳೆಯರಿಂದ ದೇವಸ್ಥಾನದ ಸುತ್ತ ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಭಕ್ತರು ಸಾಮೂಹಿಕ ವಿಷ್ಣು ಸಹಸ್ರನಾಮ ಪಠಣ ಮಾಡಿದರು.

ಬಳಿಕ ಧರ್ಮಸ್ಥಳದ ಹೇಮಾವತಿ ವೀ. ಹೆಗ್ಗಡೆ ಮತ್ತು ಗಣ್ಯರಿಂದ ದೀಪ ಪ್ರಜ್ವಲನೆಗೊಂಡ ಬಳಿಕ ಡಾ| ವೀಣಾ ಬನ್ನಂಜೆರವರು ಏಳನೇ ದಿನದ ಕೃಷ್ಣ ಕಥಾಮೃತ ಪ್ರವಚನ ಮಾಲಿಕೆಯಲ್ಲಿ ಉಪನ್ಯಾಸ ನೀಡಿದರು. ಸೋನಿಯಾ ಯಶೋವರ್ಮ ಅವರು ಡಾ.ವೀಣಾ ಬನ್ನಂಜೆರವರನ್ನು ಗೌರವಿಸಿದರು.

ಪ್ರವಚನ ಮಾಲಿಕೆಯಲ್ಲಿ ವಿಧಾನ ಪರಿಷತ್‌ ಸದಸ್ಯ ಕೆ. ಪ್ರತಾಪ್ ಸಿಂಹ ನಾಯಕ್, ಆರ್.ಎಸ್.ಎಸ್ ಹಿರಿಯ ಮುಂದಾಳು ಕಜಂಪಾಡಿ ಸುಬ್ರಹ್ಮಣ್ಯ ಭಟ್, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸತೀಶ್ಚಂದ್ರ ಸುರ್ಯ ಗುತ್ತು, ಪೂರನ್ ವರ್ಮ, ಬೆನಕ ಆಸ್ಪತ್ರೆಯ ಡಾ. ಗೋಪಾಲಕೃಷ್ಣ ಭಟ್, ಸಂತೋಷ್ ಕುಮಾರ್ ಕಾಪಿನಡ್ಕ, ಉಜಿರೆ ರಬ್ಬ‌ರ್ ಸೊಸೈಟಿ ರಾಜು ಶೆಟ್ಟಿ, ಧಾರ್ಮಿಕ ಪರಿಷತ್ ಸದಸ್ಯ ಯೋಗೀಶ್ ಕುಮಾರ್ ನಡಕ್ಕರ, ಡಾ. ಶಶಿಧರ್ ಡೋಂಗ್ರೆ, ಉಜಿರೆ ಜನಾರ್ಧನ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ದಶಮಾನೋತ್ಸವ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಟ್ರಸ್ಟ್ ಉಪಾಧ್ಯಕ್ಷ ತನುಜಾ ಶೇಖರ್, ಪ್ರ. ಸಂಚಾಲಕ ಮೋಹನ್ ಬಂಗೇರ ಕಾರಿಂಜ, ದಶಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ, ಸೂರ್ಯನಾರಾಯಣ ರಾವ್, ಕಾರ್ಯಾಧ್ಯಕ್ಷೆ ಸೋನಿಯಾ ಯಶೋವರ್ಮ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಸೇವಾ ಟ್ರಸ್ಟ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೊರ್ತಾಜೆ, ಟ್ರಸ್ಟ್ ಪ್ರದಾನ ಕಾರ್ಯದರ್ಶಿ ಧರ್ಣಪ್ಪ ಮೂಲ್ಯ ಕಾಯರ್ದಡಿ, ಕಾರ್ಯದರ್ಶಿ ತಿಮ್ಮಪ್ಪ ಜಿ ಗೋಳ್ತಾರ, ಕೋಶಾಧಿಕಾರಿ ಬಿ ಉಮೇಶ್ ಪ್ರಭು ಹಡೀಲು, ಬೆನಕ ಹಾಸ್ಪಿಟಲ್ ಉಜಿರೆ ಡಾ. ಭಾರತಿ ಗೋಪಾಲಕೃಷ್ಣ, ಸುದ್ದಿ ಉದಯ ಮುಖ್ಯಸ್ಥ ಸಂತೋಷ್ ಪಿ. ಕೋಟ್ಯಾನ್, ಚಿದಾನಂದ ಇಡ್ಯಾ, ಉಜಿರೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್, ಒಕ್ಕಲಿಗ ಸಂಘದ ಶ್ರೀನಾಥ್ ಕೆ ಎಂ, ಸದಸ್ಯರಾದ ಎ.ಬಿ ಉಮೇಶ್ ಅತ್ಯಡ್ಕ, ಹರೀಶ್ ಕೆ ಕಾರಿಂಜ, ತನಿಯಪ್ಪ ನಲ್ಕೆ ಕಿರ್ನಡ್ಕ, ಎನ್ ಗಣೇಶ್ ಗೌಡ ನೆಲ್ಲಿಪಲ್ಕೆ, ಪ್ರದೀಪ ಗೌಡ ನಗಾಜೆ, ಗಣೇಶ್ ಗೌಡ ನಾವೂರು, ವಾರ್ಷಿಕ ಜಾತ್ರೋತ್ಸವ ಸಮಿತಿಯ ಪದಾಧಿಕಾರಿಗಳು, ದಶಮಾನೋತ್ಸವ ಸಮಿತಿ ಪದಾಧಿಕಾರಿಗಳು, ಬೈಲುವಾರು ಸಮಿತಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ಸರ್ವ ಸಮಿತಿಗಳು, ಊರ ಪರವೂರ ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು.

ವಾರ್ಷಿಕ ಜಾತ್ರೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ.ಸ್ವಾಗತಿಸಿ, ವಂದಿಸಿದರು.

Related posts

ವಲಯ ಮಟ್ಟದ ಬಂಟರ ಕ್ರೀಡಾಕೂಟ: ಪ್ರಜನ್ ಶೆಟ್ಟಿ ಮುಂಡಾಜೆ ಪ್ರಥಮ

Suddi Udaya

ಸುಲ್ಕೇರಿ ಭಗವಾನ್ ಶ್ರೀ ನೇಮಿನಾಥ ಸ್ವಾಮೀ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ಗೇರುಕಟ್ಟೆ ಪರಪ್ಪು ಎಸ್.ಎಸ್.ಎಫ್ ಯೂನಿಟ್ ನ ಸದಸ್ಯರು ಸಾಹಿತ್ಯೋತ್ಸವದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

Suddi Udaya

90ನೇ ವರ್ಷದ ಹುಟ್ಟುಹಬ್ಬ ಆಚರಿಸುತ್ತಿರುವ ಡಾ| ಮೋಹನ ದಾಸ್ ರವರಿಗೆ ಸೌತಡ್ಕ ಕ್ಷೇತ್ರದಿಂದ ಗೌರವಾರ್ಪಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ (ಶ್ರೀ ದುರ್ಗಾದೇವಿ) ದೇವಸ್ಥಾನಕ್ಕೆ ಶ್ರೀ ಮಜ್ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ಭೇಟಿ: ಚಂಡಿಕಾ ಹೋಮ, ಪ್ರಸನ್ನಪೂಜೆ, ಪಾದಪೂಜೆ

Suddi Udaya

ಶ್ರೀ ಕೃಷ್ಣ ಆಸ್ಪತ್ರೆ,ಕಕ್ಕಿಂಜೆ ಸಹಸಂಸ್ಥೆ ಹೊಯ್ಸಳ ಹೆಲ್ತ್ ಕೇರ್, ಮೂಡಿಗೆರೆ ಹಾಗೂ ರೋಟರಿ ಕ್ಲಬ್, ಮೂಡಿಗೆರೆ ಸಂಯುಕ್ತ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ

Suddi Udaya
error: Content is protected !!