22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಕಿನ್ಯಮ್ಮ ಸಭಾಭವನದ ಉದ್ದಿಮೆ ಪರವಾನಿಗೆ ರದ್ದುಗೊಳಿಸಿದ ಪಟ್ಟಣ ಪಂಚಾಯತ್

ಬೆಳ್ತಂಗಡಿ : ಸರಕಾರದ ಜಾಮೀನಿನಲ್ಲಿ ಸಭಾಭವನ ನಿರ್ಮಾಣ ಮಾಡಿರುವ ಕಾರಣದಿಂದ ಪಟ್ಟಣ ಪಂಚಾಯತ್ ಅಧಿಕಾರಿಗಳು
ಬೆಳ್ತಂಗಡಿ ಕೆಲ್ಲಗುತ್ತು ಕಿನ್ಯಮ್ಮ ಸಭಾಭವನದ ಉದ್ದಿಮೆ ಪರವಾನಿಗೆಯನ್ನು ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಪ್ರಥಮ ದರ್ಜೆ ಕಾಲೇಜು ರಸ್ತೆಯ, ಜೈನ್ ಪೇಟೆಯಲ್ಲಿರುವ ಸ.ನಂ 64/14 ರಲ್ಲಿ 4.31 ಎಕ್ರೆ ಸರಕಾರಿ ಜಾಮೀನಿನಲ್ಲಿ ಕೆಲ್ಲಗುತ್ತು ಕಿನ್ಯಮ್ಮ ಯಾನೆ ಗುಣಾವತಿ ಅಮ್ಮ ಸಭಾಭವನ ನಿರ್ಮಾಣ ಮಾಡಿರುವ ಬಗ್ಗೆ ಹರಿಪ್ರಸಾದ್ ಎಂಬವರು ನೀಡಿದ ದೂರಿನ ಮೇರೆಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಸೂಕ್ತ ದಾಖಲೆಗಳ ಬಗ್ಗೆ ಕೆ.ಜಯವರ್ಮ ರಾಜ ಬಲ್ಲಾಳ್ ಎಂಬವರಿಗೆ ನೋಟಿಸ್ ಜಾರಿ ಮಾಡಿದ್ದರು.‌

ಈ ಬಗ್ಗೆ ಸಭಾಭವನದ ಪಹಣಿ ಪತ್ರವನ್ನು ಪಟ್ಟಣ ಪಂಚಾಯತ್ ಗೆ ನೀಡಿದಾಗ ಅದರಲ್ಲಿ ಸಭಾಭವನ ಸರಕಾರ ಎಂದು ನಮೂದು ಮಾಡಿರುವುದು ಕಂಡು ಬಂದಿದೆ. ಇದರಿಂದ ಸಭಾಭವನಕ್ಕೆ ನೀಡಿದ ಉದ್ದಿಮೆ ಪರವಾನಿಗೆಯನ್ನು ಜ.29 ರಂದು ಪಟ್ಟಣ ಪಂಚಾಯತ್ ರದ್ದು ಪಡಿಸಿದೆ.
ಮುಂದೆ ಈ ಕಿನ್ಯಮ್ಮ ಸಭಾಭವನದ ಕಟ್ಟಡದಲ್ಲಿ ಯಾವುದೇ ಕಾರ್ಯಕ್ರಮಗಳನ್ನು ನಡೆಸದಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ನೋಟಿಸ್ ನಲ್ಲಿ ಸೂಚನೆ ನೀಡಿದೆ.

Related posts

ಡಾ. ಡಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬದ ಪ್ರಯುಕ್ತ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸ್ವಯಂಸೇವಕರಿಂದ ಶುಭಾಶಯ

Suddi Udaya

ಬಸ್ಸು ಮತ್ತು ಬೈಕ್ ನಡುವೆ ರಸ್ತೆ ಅಪಘಾತ: ಬೈಕ್ ಸವಾರ ಬೆಳ್ತಂಗಡಿ ಹೂವಿನ ವ್ಯಾಪಾರಿ ಶಿವರಾಮ್ ಗಂಭೀರ ಗಾಯ

Suddi Udaya

ಇಂದಬೆಟ್ಟು : ಜಾನುವಾರುಗಳಿಗೆ ಚರ್ಮಗಂಟು ರೋಗದ ವಿರುದ್ಧ ಲಸಿಕಾ ಅಭಿಯಾನ

Suddi Udaya

ಬೆಳ್ತಂಗಡಿ: ತಲೆಮಲೆರಿಸಿಕೊಂಡಿದ್ದ ವಾರೆಂಟ್ ಆರೋಪಿ ಸತೀಶ್ ದ್ರಾವಿಡ ಪೊಲೀಸ್ ವಶಕ್ಕೆ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆ ಶೇ 90.58 ಫಲಿತಾಂಶ

Suddi Udaya

ಗುರುವಾಯನಕೆರೆ ಯರ್ಡೂರು ರಾಮನಗರದ ಮನೆಯೊಂದಕ್ಕೆಹಾಡುಹಗಲೇ ನುಗ್ಗಿದ ಕಳ್ಳರು: ರೂ.15 ಸಾವಿರ ನಗದು, 50 ಸಾವಿರ ಮೌಲ್ಯದ ಚಿನ್ನದ ಸರ ಕಳವು

Suddi Udaya
error: Content is protected !!