23.5 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಇಂಡಿಯನ್ ರೆಡ್‌ಕ್ರಾಸ್ ಮಂಗಳೂರು ಸಹಯೋಗದಲ್ಲಿ ರಕ್ತದಾನ ಶಿಬಿರ ಜ.30 ರಂದು ನಡೆಯಿತು.

ರಕ್ತದಾನ ಶಿಬಿರವನ್ನು ಹೈದರಾಬಾದಿನ ಹಿರಿಯ ರೇಡಿಯಾಲಿಜಿಸ್ಟ್ ಡಾ| ಇಂದಿರಾ ಉದ್ಘಾಟಿಸಿ ಮಾತನಾಡುತ್ತಾ, ಯಾವುದೇ ಸ್ವಾರ್ಥವಿಲ್ಲದೆ, ತಾನು ಯಾರಿಗೆ ರಕ್ತದಾನ ಮಾಡುತ್ತಿದ್ದೇನೆ ಎಂಬ ಮಾಹಿತಿ ಕೂಡ ಕೇಳದೆ, ಇನ್ನೊಬ್ಬರ ಜೀವ ಉಳಿಸಬಲ್ಲ ಉದ್ದೇಶದಿಂದ ಮಾಡುವ ರಕ್ತದಾನ ದಾನಗಳಲ್ಲಿಯೇ ಶ್ರೇಷ್ಠದಾನ. ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ಪ್ರತಿಯೊಂದು ಕಾರ್ಯಗಳು ಜನರಿಗೆ ಉಪಯುಕ್ತವಾಗಿರುತ್ತದೆ ಎಂಬುದರಲ್ಲಿ ಯಾವ ಸಂಶಯವಿಲ್ಲ. ಇದಕ್ಕೆ ಇಲ್ಲಿ ನೀಡುತ್ತಿರುವ ಉಚಿತ ಹೈಟೆಕ್ ಡಯಾಲಿಸಿಸ್ ಸೇವೆಯೇ ಸಾಕ್ಷಿ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ. ಜನಾರ್ದನ್ ಇವರು ಮಾತನಾಡುತ್ತಾ, ಪೂಜ್ಯ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಆಶೀರ್ವಾದಲ್ಲಿ ಹರ್ಷೇಂದ್ರ ಕುಮಾರ್ ಮತ್ತು ಸುಪ್ರಿಯಾ ಹರ್ಷೇಂದ್ರ ಕುಮಾರ ಇವರ ಮಾರ್ಗದರ್ಶನದಲ್ಲಿ ಅತ್ಯಂತ ಅವಶ್ಯವಾಗಿರುವ ರಕ್ತದಾನ ಶಿಬಿರವನ್ನು ಪ್ರತಿ ತಿಂಗಳು ನಮ್ಮ ಆಸ್ಪತ್ರೆಯ ವತಿಯಿಂದ ನಡೆಸುತ್ತಿದ್ದೇವೆ. ರಕ್ತದಾನದ ಬಗ್ಗೆ ಜನರಿಗೆ ಮಾಹಿತಿಯ ಕೊರತೆ ಇದೆ. ಈ ನಿಟ್ಟಿನಲ್ಲಿ ರಕ್ತದಾನದ ಜಾಗೃತಿಯ ಅವಶ್ಯಕತೆ ಇದೆ ಎಂದರು.

ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ| ದೇವೇಂದ್ರ ಕುಮಾರ್. ಪಿ ರಕ್ತದಾನದ ಮಹತ್ವ ವಿವರಿಸುತ್ತಾ ಜೀವ ಉಳಿಸಬಲ್ಲ ರಕ್ತದಾನ ಮಾಡಿದಾಗ ಆತ ದೇವರಿಗೆ ಸಮಾನಾಗುತ್ತಾನೆ ಎಂದರು.
ಮತ್ತೋರ್ವ ಮುಖ್ಯ ಅತಿಥಿ ಹೈದಾರಾಬಾದಿನ ಹಿರಿಯ ಶಿಕ್ಷಣ ತಜ್ಞರಾದ ಪ್ರಫುಲ್ ಮಾತನಾಡಿ ರಕ್ತದಾನಕ್ಕೆ ಬೇಕಾಗಿರುವುದು ಮಾನವೀಯತೆ, ತ್ಯಾಗ ಮನೋಭಾವ ಮತ್ತು ಒಳ್ಳೆಯ ಹೃದಯ. ಧರ್ಮಸ್ಥಳದ ಸಂಸ್ಥೆಗಳು ಸೇವೆಗೆ ಹೆಸರುವಾಸಿಯಾಗಿದೆ. ರಕ್ತದಾನ ಕೂಡ ಒಂದು ಶ್ರೇಷ್ಠ ಸೇವೆಯಾಗಿದೆ ಎಂದರು.

ಪೆಥಲಾಜಿಸ್ಟ್ ಡಾ| ಮೇಘಾ ಮಾತನಾಡಿ ದಿನನಿತ್ಯ ಸಾವಿರಾರು ಮಂದಿಗೆ ರಕ್ತದ ಅವಶ್ಯಕತೆ ಇರುತ್ತದೆ. ಆದರೆ ರಕ್ತದಾನ ಮಾಡುವವರ ಸಂಖ್ಯೆ ಕೇವಲ 1 ರಿಂದ 2 ಶೇಕಡಾ ಮಾತ್ರ. ರಕ್ತದಾನ ಮಾಡುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಣದಲ್ಲಿರುತ್ತದೆ ಎಂದರು.


ಇಂಡಿಯನ್ ರೆಡ್‌ಕ್ರಾಸ್ ಬ್ಲಡ್ ಬ್ಯಾಂಕಿನ ಟೆಕ್ನಿಕಲ್ ಸೂಪರ್‌ವೈಸರ್ ಮರಿಯ ಆರತಿ ಮಾತನಾಡಿ, ಯಾರೆಲ್ಲ ರಕ್ತದಾನ ಮಾಡಬಹುದು ಎಂದು ವಿವರಿಸುತ್ತಾ, ಹೆಚ್‌ಐವಿ, ಹೆಪಟೈಟೀಸ್ ಮೊದಲಾದ ಸೋಂಕು ಇಲ್ಲದವರು, 12.5 ಹಿಮೋಗ್ಲೋಬಿನ್ ಮಟ್ಟ ಇರುವವರು ರಕ್ತದಾನ ಮಾಡಬಹುದು. ಉಜಿರೆ ಎಸ್.ಡಿ.ಎಂ ಆಸ್ಪತ್ರೆಯು ರಕ್ತದಾನ ಶಿಬಿರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದು, ಈ ಆಸ್ಪತ್ರೆಯ ಸಹಕಾರದಲ್ಲಿ ಹಲವಾರು ರಕ್ತದಾನ ಶಿಬರವನ್ನು ನಡೆಸಲಾಗುತ್ತದೆ ಎಂದರು.
ಸ್ಟೋರ್ ಇನ್‌ಚಾರ್ಜ್ ಜಗನ್ನಾಥ ಎಂ. ಕಾರ್ಯಕ್ರಮ ನಿರೂಪಿಸಿದರು. ಲ್ಯಾಬ್ ಇನ್‌ಚಾರ್ಜ್ ಮೀನಾಕ್ಷಿ ಸಹಕರಿಸಿದರು.

Related posts

ಮಲವಂತಿಗೆ: ಚಾರಣಕ್ಕೆ ತೆರಳಿದ್ದ ಎಂಬಿಬಿಎಸ್ ಪದವೀಧರ ಯುವಕ ಹೃದಯಾಘಾತದಿಂದ ಸಾವು

Suddi Udaya

ಬೆಳ್ತಂಗಡಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಪ್ರಖಂಡ ಮತ್ತು ಘಟಕ ಸಮಿತಿಗಳ ಸಮಾಲೋಚನಾ ಬೈಠಕ್

Suddi Udaya

ಸುಲ್ಕೇರಿ ಭಗವಾನ್ ಶ್ರೀ ನೇಮಿನಾಥ ಸ್ವಾಮೀ ಬಸದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಭೇಟಿ

Suddi Udaya

ನ.16-17: ಉಜಿರೆಯಲ್ಲಿ ಇಂಟರಾಕ್ಟ್ ಜಿಲ್ಲಾ ಸಮ್ಮೇಳನ – ಯೂತ್ ಕಾರ್ನಿವಾಲ್: ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಭಾಗಿ

Suddi Udaya

ಸಿರಿ ಸಂಸ್ಥೆಯಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ಹಾಗೂ ಸಿರಿ ಕ್ಲಬ್ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

Suddi Udaya

ಕಡಿರುದ್ಯಾವರ: ಕಾನರ್ಪ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Suddi Udaya
error: Content is protected !!