22.6 C
ಪುತ್ತೂರು, ಬೆಳ್ತಂಗಡಿ
July 23, 2026
ಗ್ರಾಮಾಂತರ ಸುದ್ದಿತಾಲೂಕು ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಇತಿಹಾಸದಲ್ಲೇ ಸಾರ್ವಕಾಲಿಕ ದಾಖಲೆ ಬರೆದ ಕೊಕ್ಕಡದ ಬೃಹತ್ ರಕ್ತದಾನ ಶಿಬಿರ : 331 ಯೂನಿಟ್ಸ್ ರಕ್ತ ಸಂಗ್ರಹಣೆ

ಕೊಕ್ಕಡ: ಟೀಂ ಸುಹಾಸ್ ಶೆಟ್ಟಿ ಕೊಕ್ಕಡ ಇದರ ಆಶ್ರಯದಲ್ಲಿ, ನೈಮಿಷ ವೆಂಚರ್ಸ್, ಸೌತಡ್ಕ, ಇದರ ಪ್ರಾಯೋಜಕತ್ವದಲ್ಲಿ, ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್(ರಿ.) ಸೌತಡ್ಕ, ಸೇವಾಭಾರತಿ (ರಿ.), ಕನ್ಯಾಡಿ ||, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ, ಕೆ.ಎಂ.ಸಿ. ರಕ್ತ ನಿಧಿ ಮಂಗಳೂರು, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಸಹಭಾಗಿತ್ವದಲ್ಲಿ, ದಿ | ಸುಹಾಸ್ ಶೆಟ್ಟಿ ಬಜ್ಪೆ ಇವರ ಸ್ಮರಣಾರ್ಥ ಬೃಹತ್ ರಕ್ತದಾನ ಶಿಬಿರವು ಫೆ.1 ರಂದು ಕೊಕ್ಕಡದ ಶ್ರೀ ರಾಮ ಸೇವಾ ಮಂದಿರದಲ್ಲಿ ಜರಗಿತು.

ದಿ. ಸುಹಾಸ್ ಶೆಟ್ಟಿಯವರ ತಂದೆ ಮತ್ತು ತಾಯಿ ಸುಲೋಚನ ಎಂ. ಶೆಟ್ಟಿ ಮತ್ತು ಮೋಹನ್ ಶೆಟ್ಟಿ ರವರು ಉದ್ಘಾಟಿಸಿ, ಶುಭಹಾರೈಸಿದರು. ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಧಾರ್ಮಿಕ ಮುಖಂಡ ಡಿ. ಕಿರಣ್‌ ಚಂದ್ರ ಪುಷ್ಪಗಿರಿ, ಸೌತಡ್ಕ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೃಷ್ಣ ಭಟ್ ಹಿತ್ತಿಲು, ಕೊಕ್ಕಡ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷರು ಹಾಗೂ SCDCC BANK ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕನ್ಯಾಡಿ ಸೇವಾಭಾರತಿ ಸಂಸ್ಥಾಪಕ ಕೆ. ವಿನಾಯಕ ರಾವ್, ಸೌತಡ್ಕ ನೈಮಿಷ ವೆಂಚರ್ಸ್ ಉದ್ಯಮಿ ಬಾಲಕೃಷ್ಣ ನೈಮಿಷ, , ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ (ರಿ.), ಸಂಸ್ಥಾಪಕ ಲೋಕೇಶ್ ಕೋಡಿಕೆರೆ, ಪಾರಿಜಾತ ಹೋಟೆಲ್ ಮಾಲಕರು ಹಾಗೂ ಸೇವಾಭಾರತಿ ಕನ್ಯಾಡಿ ಆರೋಗ್ಯಮ್ ನ ಸಂಚಾಲಕ ಅಖಿಲೇಶ್ ಶೆಟ್ಟಿ ನೇತ್ರಾವತಿ, ಟೀಮ್ ಕಳವಾರಿನ ಸದಸ್ಯ ಸಚಿನ್ ಒಡ್ಡೂರು, ಬಜರಂಗದಳ ಕಾಟಿಪಳ್ಳ ಸುರತ್ಕಲ್ ನ ಸದಸ್ಯರು, ಡಾ. ವಾಣಿಕ KMC ಆಸ್ಪತ್ರೆ, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ರೋ| ಡಾ. ರಾಮಕೃಷ್ಣ ರಾವ್, KSTA ಕರ್ನಾಟಕ ಸ್ಟೇಟ್ ಟೈಲರ್ಸ್ ಎಸೋಸಿಯೇಷನ್ ಉಜಿರೆಯ ವೇದಾವತಿ ಜನಾರ್ಧನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಧಾರ್ಮಿಕ ಮುಖಂಡ ಕಿರಣ್ ಚಂದ್ರ ಪುಷ್ಪಗಿರಿ ಇವರು ಎಲ್ಲಾ ರಕ್ತದಾನಿಗಳಿಗೂ ಶ್ರೀ ಮಧ್ಭಗವತ್ ಗೀತಾ ಪುಸ್ತಕವನ್ನು ನೀಡಿ ಶುಭ ಹಾರೈಸಿದರು. ಸುಮಾರು 54 ಬಾರಿ ರಕ್ತದಾನ ಮಾಡಿದಂತಹ ಹಿರಿಯ ಭಜಕರಾದ ಪುರುಷೋತ್ತಮ ಮಡ್ಯಲಗುಂಡಿ ಇವರನ್ನು ಗಣ್ಯರ ಸಮ್ಮುಖದಲ್ಲಿ ಗುರುತಿಸಿ, ಗೌರವಿಸಲಾಯಿತು. ಶಿಬಿರದ ಯಶಸ್ಸಿಗೆ ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ (ರಿ.) ಸೌತಡ್ಕ, ಸೇವಾ ಭಾರತಿ (ರಿ.) ಕನ್ಯಾಡಿ ॥, ಶ್ರೀರಾಮ ಸೇವಾ ಮಂದಿರ ಕೊಕ್ಕಡ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಕೊಕ್ಕಡ, ಉಜಿರೆ ಹವ್ಯಕ ವಲಯ ಉಪ್ಪಿನಂಗಡಿ ಮಂಡಲ, ಯುವ ಕೇಸರಿ ಕಾವು ಕೌಕ್ರಡಿ, ಸಿದ್ಧಿವಿನಾಯಕ ಸೇವಾ ಸಮಿತಿ ಗೋಳಿತೊಟ್ಟು, ಯುವಶಕ್ತಿ ಫ್ರೆಂಡ್ ಮುಂಡೂರುಪಳಿಕೆ, ಹಿಂದೂ ಜಾಗರಣ ವೇದಿಕೆ ಶಿಶಿಲ, ಟೀಂ ಸಿಂಧೂರ ನೆಲ್ಯಾಡಿ, ಅಶ್ವಥ ಗೆಳೆಯರ ಬಳಗ ಹೊಸಮಜಲು, ನೆಲ್ಯಾಡಿ, ಶಿವಶಕ್ತಿ ಫ್ರೆಂಡ್ಸ್ ಕಳೆಂಜ, ವೀರ ಕೇಸರಿ ಅನಾರು, ಶಕ್ತಿ ಆಟೋ ಚಾಲಕ ಮಾಲಕರ ಸಂಘ, ಕೊಕ್ಕಡ, ವಿಶ್ವ ಹಿಂದೂ ಪರಿಷದ್ ಬಜರಂಗದಳ ಶಿವಾಗ್ನಿ ಶಾಖೆ, ಕಳವಾರು, S.VT. ಸ್ಪೋರ್ಟ್ಸ್ ಕ್ಲಬ್ ಪಟ್ರಮೆ, ವಿಶ್ವ ಹಿಂದೂ ಪರಿಷದ್ ಬಜರಂಗದಳ ರೆಖ್ಯ, ಫ್ರೆಂಡ್ಸ್ ಧರ್ಮಸ್ಥಳ, ಶ್ರದ್ಧಾ ಗೆಳೆಯರ ಬಳಗ ಉಪ್ಪಾರಪಳಿಕೆ, ಟೀಂ ಪುಷ್ಪಗಿರಿ, ಬೆಳ್ತಂಗಡಿ, ನವಶಕ್ತಿ ಆಟೋ ಚಾಲಕ ಮಾಲಕರ ಸಂಘ ಅರಸಿನಮಕ್ಕಿ, ಸ್ವಾಮಿ ಕೊರಗಜ್ಜ ಸೇವಾ ಟ್ರಸ್ಟ್ ಪಟ್ಲಡ್ಕ, ನಿಸರ್ಗ ಯುವಜನೇತರ ಮಂಡಲ (ರಿ.) ಬರೆಂಗಾಯ ನಿಡ್ಲೆ, ಫ್ರೆಂಡ್ಸ್ ಸುರತ್ಕಲ್ ತುಳುನಾಡ ಬಿರುವೆರ್ ರಿ., ಬಿಜೆಪಿ ಯುವಮೋರ್ಚ ಬೆಳ್ತಂಗಡಿ ಮಂಡಲ, ಅಶ್ವಸಿರಿ ಗೆಳೆಯರ ಬಳಗ ಪಾಂಡಿಬೆಟ್ಟು, ಕೊಣಾಲು, ಜೈ ಶ್ರೀ ರಾಮ್ ಫ್ರೆಂಡ್ಸ್ ಪಾರ್ಪಿಕಲ್ಲು ಸಹಕರಿಸಿದ್ದಾರೆ ಟೀಮ್ ಸುಹಾಸ್ ಶೆಟ್ಟಿ ಸದಸ್ಯ ರುಕ್ಮಯ್ಯ ಮಡಿವಾಳ ಪ್ರಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು, ಶ್ರೀ ಕೇಶವ ಹಳ್ಳಿಂಗೇರಿ ನಿರೂಪಿಸಿ, ಬಾಲಕೃಷ್ಣ ನೈಮಿಷ ಕಾರ್ಯಕ್ರಮದ ಬಗ್ಗೆ ಶುಭನುಡಿಗಳನ್ನಾಡಿ ಧನ್ಯವಾದವಿತ್ತರು. ಶಿಬಿರದಲ್ಲಿ ಒಟ್ಟು 331 ಯೂನಿಟ್ ರಕ್ತ ಸಂಗ್ರಹಣೆಯಾಯಿತು.

Related posts

ಪ್ರವೀಣ್ ನೆಟ್ಟಾರ್ ಕೊಲೆ ಪ್ರಕರಣ: ಪಡಂಗಡಿ ನೌಷದ್ ನಿವಾಸದ ಮೇಲೆ ಎನ್.ಐ.ಎ ದಾಳಿ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆಯಲ್ಲಿ ಅದಿತಿ ಮುಗೆರೋಡಿ ತೇರ್ಗಡೆ

Suddi Udaya

ಬರ್ಕಜೆ ಶ್ರೀ ದುರ್ಗಾಪರಮೇಶ್ವರಿ ಮತ್ತು ನವಗುಳಿಗ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ: ರಂಗ ಮಂಟಪ ಲೋಕಾರ್ಪಣೆ, ನವದುರ್ಗೆಯರ ಮೂರ್ತಿ ಪ್ರತಿಷ್ಠೆ, ದೇವರ ಪ್ರಭಾವಳಿ ಸಮರ್ಪಣೆ: ಇಂದು (ಫೆ.5) ನವ ಗುಳಿಗಗಳ ವಿಶೇಷ ಗಗ್ಗರ ಸೇವೆ

Suddi Udaya

ಬೆಳ್ತಂಗಡಿಯಲ್ಲಿ ಪ್ರಥಮವಾಗಿ ‘ಮೋದಿ ಮತ್ತೊಮ್ಮೆ’ ಗೋಡೆ ಬರಹ ಕಾರ್ಯಕ್ರಮಕ್ಕೆ ಚಾಲನೆ

Suddi Udaya

ಜಪಾನ್ ದೇಶದಲ್ಲಿ ನಡೆಯುವ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಕಾರ್ಯಕ್ರಮ SAKURA ಗೆ ಮೂಡುಬಿದಿರೆಯ ಎಕ್ಸಲೆಂಟ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಆಯ್ಕೆ

Suddi Udaya

ಜೇಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನದಲ್ಲಿ ನೇಜಿ ನಾಟಿ ಕಾರ್ಯಕ್ರಮ

Suddi Udaya
error: Content is protected !!