September 25, 2026
ತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆ ಬ್ರಹ್ಮಕಲಶೋತ್ಸವ ಬೆಂಗಳೂರು ಸಮಿತಿ ಸಭೆ

ಬೆಳ್ತಂಗಡಿ: ಮಾ.3ರಿಂದ 11ರ ತನಕ ಜರಗಲಿರುವ ಉಜಿರೆ ಶ್ರೀ ಜನಾರ್ಧನ ದೇವಸ್ಥಾನದ ಬ್ರಹ್ಮಕಲಶೋತ್ಸವದ ಬೆಂಗಳೂರು ಸಮಿತಿಯ ಸಭೆ ಫೆ.1 ರಂದು ಬಸವನಗುಡಿಯ ಎಸ್ ಡಿಎಂ ಕಲಾ ಕಲ್ಯಾಣ ಮಂಟಪದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳದ ಸುರೇಂದ್ರ ಕುಮಾರ್ ಮಾತನಾಡಿ ಉಜಿರೆ ಮತ್ತು ಧರ್ಮಸ್ಥಳಕ್ಕೆ ದೈವ- ದೇವರ ಸಹಿತ ಹೆಚ್ಚಿನ ಸಂಬಂಧವಿದ್ದು ಸದಾ ಪರಸ್ಪರ ಸಹಕಾರ ನೀಡುವುದು ಸಂಪ್ರದಾಯವೂ ಆಗಿದೆ. ಬೆಂಗಳೂರಿನ ಸಮಿತಿಯಿಂದಲೂ ಬ್ರಹ್ಮಕಲಶೋತ್ಸವ ಸಂದರ್ಭ ಹೆಚ್ಚಿನ ಸಹಕಾರದ ಅಗತ್ಯವಿದೆ. ಬೆಂಗಳೂರಿನಲ್ಲಿರುವ ನಮ್ಮ ತಾಲೂಕಿನ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಮೂಲಕ ದೇವರ ಸೇವೆ ಮಾಡಲು ಇದೊಂದು ಅಪೂರ್ವ ಅವಕಾಶವಾಗಿದೆ ಎಂದರು.

ಪ್ರಾಸ್ತವಿಕವಾಗಿ ಮಾತನಾಡಿದ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ ಕಾರ್ಯಕ್ರಮದ ರೂಪು ರೇಷೆಗಳನ್ನು ಪ್ರಸ್ತುತಪಡಿಸಿ ಸಹಕಾರವನ್ನು ಕೋರಿದರು.
ಎಂ ಎಲ್ ಸಿ ಪ್ರತಾಪ ಸಿಂಹ ನಾಯಕ್, ವಿಜಯ ಗೋಪುರ ಸಮಿತಿ ಅಧ್ಯಕ್ಷ ಶಶಿಧರ ಶೆಟ್ಟಿ, ಬೆಂಗಳೂರು ಸಮಿತಿ ಸಂಚಾಲಕ ಮಂಜುನಾಥ ಕನ್ಯಾಡಿ, ಉದ್ಯಮಿ ತ್ರಿವಿಕ್ರಮ ಸಫಲ್ಯ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಭರತ್ ಕುಮಾರ್, ಕಾರ್ಯದರ್ಶಿ ರವೀಂದ್ರ ಶೆಟ್ಟಿ ಬಳಂಜ, ಸಂಚಾಲಕ ಮೋಹನ್ ಶೆಟ್ಟಿಗಾರ್,ಅಜಯ್ ಶೆಟ್ಟಿ, ಪ್ರಶಾಂತ ಜೈನ್, ಚೇತನ್ ಸಾಲಿಯಾನ್, ರಾಮಣ್ಣ ಗೌಡ, ವಿಶ್ವನಾಥ ರಸರಾಗ, ಶರತ್ ಕುಮಾರ್ ಮಂಚಿಬೆಟ್ಟು,ಪ್ರಕಾಶ್ ಕುದ್ದಣ್ಣಾಯ, ಶಿವಪ್ರಸಾದ ಸುರ್ಯ, ಕಚೇರಿ ಪ್ರಬಂಧಕ ರಾಜ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

ಸಂಧ್ಯಾ ಶ್ಯಾಮ್ ಆಚಾರ್ಯ ಸ್ವಾಗತಿಸಿದರು. ವೆಂಕಟರಮಣ ರಾವ್ ವಂದಿಸಿದರು. ರೂಪಲತಾ ಧರ್ಮಸ್ಥಳ ಹಾಗೂ ಸ್ವಸ್ತಿಕ್ ಕನ್ಯಾಡಿ ಕಾರ್ಯಕ್ರಮ ನಿರೂಪಿಸಿದರು.

Related posts

ಕಲ್ಮಂಜ: ನಿಡಿಗಲ್ ಗೆಳೆಯರ ಬಳಗದ ನೂತನ ಸಭಾಂಗಣ ನಿರ್ಮಾಣದ ಶಿಲಾನ್ಯಾಸ

Suddi Udaya

ಭಜನಾ ಕಮ್ಮಟ; ಭಜನೆಗಳು ಜೀವನ ಶಿಕ್ಷಣ ಕಲಿಸುತ್ತವೆ: ಬಿ.ಕೆ. ಧನಂಜಯ ರಾವ್

Suddi Udaya

ಅಕ್ರಮ ಕೋಳಿ ಅಂಕದ ಮೇಲೆ ಧರ್ಮಸ್ಥಳ ಪೊಲೀಸರ ದಾಳಿ

Suddi Udaya

ಉಜಿರೆ: ‘ಮರು ಉತ್ಪಾದನೆಗೆ ಯೋಗ್ಯವಿಲ್ಲದ ಪ್ಲಾಸ್ಟಿಕ್ ತ್ಯಾಜ್ಯದಿಂದ ಡಾಮಾರು ರಸ್ತೆ ನಿರ್ಮಾಣ” ಕುರಿತು ರಾಜ್ಯ ಮಟ್ಟದ ವಿಚಾರ ಸಂಕಿರಣ

Suddi Udaya

ಸಾಮರಸ್ಯದ ಸಂಕ್ರಾಂತಿಗೆ ವೇಣೂರಿನಲ್ಲಿ ಚಾಲನೆ: ಪರಿಶಿಷ್ಟ ಜಾತಿ ಕುಟುಂಬಿಕರೊಂದಿಗೆ ಸಂಕ್ರಾಂತಿ ಆಚರಿಸಿದ ಶಾಸಕ ಹರೀಶ್ ಪೂಂಜ

Suddi Udaya

ಬೆಳ್ತಂಗಡಿ: ಎಸ್.ಕೆ ಗೋಲ್ಡ್ ಸ್ಮಿತ್ ಇಂಡಸ್ಟ್ರಿಯಲ್ ಕೋ ಆಪರೇಟಿವ್ ಸೊಸೈಟಿಯಿಂದ ಶಾಸಕ ಹರೀಶ್ ಪೂಂಜರ ಭೇಟಿ

Suddi Udaya
error: Content is protected !!