32.3 C
ಪುತ್ತೂರು, ಬೆಳ್ತಂಗಡಿ
September 19, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ವಾರ್ಷಿಕ ಜಾತ್ರಾ ಮಹೋತ್ಸವ: ಪುದುವೆಟ್ಟು ಶ್ರೀ ಗುರುನಾರಾಯಣ ಸೇವಾ ಸಂಘದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ

ಪುದುವೆಟ್ಟು : ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಫೆ.25 ರಿಂದ ಮಾರ್ಚ್ 1 ರ ತನಕ ನಡೆಯುವ ವಾರ್ಷಿಕ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಹಾಗೂ ಕಾರ್ಯಕ್ರಮವನ್ನು ಯಶಸ್ಸು ಗೊಳಿಸುವ ಬಗ್ಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಪುದುವೆಟ್ಟು ವಿನ ಭಕ್ತಾಭಿಮಾನಿಗಳ ಸಮಾಲೋಚನಾ ಸಭೆಯು ಫೆ.01ರಂದುಶ್ರೀ ಗುರುನಾರಾಯಣ ಸೇವಾ ಸಂಘ ಪುದುವೆಟ್ಟು ಇಲ್ಲಿ ನಡೆಯಿತು. ಸಂಘ ದ ಗೌರವಾಧ್ಯಕ್ಷ ಭಾಸ್ಕರ್ ಅಡ್ಯ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಗೆಜ್ಜೆಗಿರಿಯ ಆಡಳಿತ ಸಮಿತಿಯ ಸದಸ್ಯರೂ, ಬೆಳ್ತಂಗಡಿ ತಾಲೂಕಿನ ಜಾತ್ರೋತ್ಸವ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ನಾವರ ಪ್ರಾಸ್ತಾವಿಕವಾಗಿ ಮಾತನಾಡಿ ಶ್ರೀ ಕ್ಷೇತ್ರ ಗೆಜ್ಜೆಗಿರಿ ಜಾತ್ರಾ ಮಹೋತ್ಸವವನ್ನು ಯಶಸ್ಸು ಗೊಳಿಸುವ ಬಗ್ಗೆ ಹಾಗೂ ಕ್ಷೇತ್ರದಲ್ಲಿ ಆಗಲಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿ ತಾಲೂಕಿನ ಭಕ್ತಾಭಿಮಾನಿಗಳನ್ನು ಶ್ರೀ ಕ್ಷೇತ್ರಕ್ಕೆ ಆಹ್ವಾನಿಸಿದರು.

ವೇದಿಕೆಯಲ್ಲಿ ಗುರುನಾರಾಯಣ ಸೇವಾ ಸಂಘ ಪುದುವೆಟ್ಟು ಇದರ ಗೌರವ ಸಲಹೆಗಾರರಾದ ನಾರಾಯಣ ಕಾಯರಂಡ, ಅಧ್ಯಕ್ಷ ಗೋಪಾಲ್ ಪೂಜಾರಿ ಸುರುಳಿ, ಕಾರ್ಯದರ್ಶಿ ಸುಜಿತ್ ಪ್ರಸಾದ್ ಜೊತೆ ಕಾರ್ಯದರ್ಶಿ ಬೇಬಿ ಉಪಾಧ್ಯಕ್ಷರಾದ ರಮ್ಯ ಹೆಚ್ ವಿ ಗುಂಪಕಲ್ಲು, ಯುವ ಬಿಲ್ಲವ ವೇದಿಕೆ ಯ ಅಧ್ಯಕ್ಷರಾದ ಕಿರಣ್ ಕುಮಾರ್, ಕಾರ್ಯದರ್ಶಿಯಾದ ಗಿರೀಶ್ ಅಡ್ಯ, ಮಹಿಳಾ ಬಿಲ್ಲವ ವೇದಿಕೆಯ ಅಧ್ಯಕ್ಷರಾದ ಸರಿತಾ ಅಡ್ಯ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಗ್ರಾಮ ಸಮಿತಿ ಅಧ್ಯಕ್ಷರಾದ ರಮೇಶ್ ಅಡ್ಯ, ಹಾಗೂ ಕಾರ್ಯದರ್ಶಿಯಾದ ಗಣೇಶ್ ಬಲ್ಲಾಡಿ, ಉಪಸ್ಥಿತರಿದ್ದರು. ಸಮಾರಂಭದಲ್ಲಿ ಮೋನಪ್ಪ ಪೂಜಾರಿ ಹರೀಶ ಎ, ಗಿರೀಶ ಪೂಜಾರಿ ಹರಿಣಾಕ್ಷಿ, ಮಲ್ಲಿಕಾ, ಕುಸುಮಾವತಿ, ಶ್ವೇತ, ಮೋಹಿನಿ, ಕೋಟಿ ಪೂಜಾರಿ ಹಾಗೂ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ಶ್ರೀ ಗುರು ನಾರಾಯಣ ಸೇವಾ ಸಂಘ ಪುದುವೆಟ್ಟು ಇದರ ಮಾಜಿ ಅಧ್ಯಕ್ಷರೂ, ಶ್ರೀ ಕ್ಷೇತ್ರ ಗೆಜ್ಜೆಗಿರಿ ಧರ್ಮಸ್ಥಳ ವಲಯ ಸಂಚಾಲಕ ಲಿಂಗಪ್ಪ ಸಾಲಿಯಾನ್ ಪುದುವೆಟ್ಟು ಕಾರ್ಯಕ್ರಮವನ್ನು ಸಂಯೋಜಿಸಿ , ನಿರೂಪಿಸಿದರು.

Related posts

ವಲಯ ಮಟ್ಟದ ಥ್ರೋಬಾಲ್ ಪಂದ್ಯಾಟ: ಸಂತ ತೆರೆಸಾ ಆಂ.ಮಾ. ಶಾಲೆಯ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಬೆಳ್ತಂಗಡಿ : ಚೆಕ್ ಬೌನ್ಸ್ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಹಾಸನದಲ್ಲಿ ಬಂಧಿಸಿದ ವೇಣೂರು ಪೊಲೀಸರು

Suddi Udaya

ಪುದುವೆಟ್ಟು: ವಿಷಸೇವಿಸಿ ವಿದ್ಯಾರ್ಥಿನಿ ಆತ್ಮಹತ್ಯೆ

Suddi Udaya

ಕಳಿಯ ಗ್ರಾ.ಪಂ.ಅಭಿವೃದ್ದಿ ಅಧಿಕಾರಿ ಸಂತೋಷ್ ಪಾಟೀಲ್ ಬೆಳಗಾವಿಗೆ ವರ್ಗಾವಣೆ: ಪ್ರಭಾರ ಅಭಿವೃದ್ಧಿ ಅಧಿಕಾರಿಯಾಗಿ ಕುಂಞ ಕೆ ಅಧಿಕಾರ ಸ್ವೀಕಾರ

Suddi Udaya

ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಕೂಸಪ್ಪ ಕೊಯ್ಯೂರು ಅಸೌಖ್ಯದಿಂದ ನಿಧನ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಐಸಿಯು ವೆಂಟಿಲೇಟರ್‌ಗಳ ಉದ್ಘಾಟನೆ

Suddi Udaya
error: Content is protected !!