ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕೃಷಿಕರ ವಿರೋಧಿ, ಪರಿಶಿಷ್ಟ ವರ್ಗ ಕಡೆಗಣಿಸಿದ ಬಜೆಟ್ – ಜಿಲ್ಲಾ ಕೆ ಡಿ ಪಿ ಸದಸ್ಯ ನ್ಯಾಯವಾದಿ ಸಂತೋಷ್ ಕುಮಾರ್

ಬೆಳ್ತಂಗಡಿ: ಯುವಕರಿಗೆ ಉದ್ಯೋಗ, ಕೃಷಿಕರಿಗೆ ಅನುಕೂಲ, ಗ್ರಾಮೀಣ ಪ್ರದೇಶಕ್ಕೆ ಸೌಲಭ್ಯ ನೀಡುವ ರೀತಿ ಬಜೆಟ್ ಇರಬಹುದು ಎಂದು ನಿರೀಕ್ಷಿಸಲಾಗಿತ್ತು, ಆದರೆ ಯಾರೂ ಊಹಿಸದ ರೀತಿಯಲ್ಲಿ ಕಳಪೆ ಮಟ್ಟದಲ್ಲಿ ಬಜೆಟ್ ಮಂಡಿಸಲಾಗಿದೆ.

ಕೇಂದ್ರದ ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ದಕ್ಷಿಣ ಭಾರತವನ್ನು ಅದರಲ್ಲೂ ಕರ್ನಾಟಕವನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಮುಖ್ಯವಾಗಿ ಕೃಷಿಗೆ ಕಳೆದ ಬಾರಿಗಿಂತಲೂ ಕಡಿಮೆ ಬಜೆಟ್ ನಿಗದಿ‌ಮಾಡಿ ಅನ್ಯಾಯ ಮಾಡಿದೆ. ಯೂರಿಯಾ ಸಬ್ಸಿಡಿ ಕಡಿತ ಮಾಡಿ ರೈತರಿಗೆ ಅನ್ಯಾಯ ಮಾಡಲಾಗಿದೆ. ಕಳೆದ ಬಾರಿ 1.70 ಲಕ್ಷಕೋಟಿ ರೂ. ಕೃಷಿಗೆ ನೀಡಲಾಗಿತ್ತು, ಈ ಬಾರಿ 1.62 ಲಕ್ಷ ಕೋಟಿ ರೂ. ನಿಗದಿ ಮಾಡಿದೆ. ಹೀಗಾದಲ್ಲಿ ಕೃಷಿಕರು ಬದುಕುವುದು ಹೇಗೆ‌. ಶ್ರೀಮಂತ ವರ್ಗದ ಓಲೈಕೆ ಮಾಡುವ ಭರದಲ್ಲಿ ದುಡಿಯುವ ವರ್ಗವನ್ನು ನಿರ್ಲಕ್ಷಿಸಲಾಗಿದೆ. ಇದೀಗ ಹವಾಮಾನ ‌ವಿಪರೀತ ಬದಲಾಗುತ್ತಿದ್ದು, ಕೃಷಿಕರು ಬೆಳೆ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ, ಇಂತಹ ಸಂದರ್ಭದಲ್ಲೂ ಬೆಳೆ ವಿಮೆಯನ್ನು ಹೆಚ್ಚು ಮಾಡಿಲ್ಲ.

ಇನ್ನು ಪರಿಶಿಷ್ಟ ಜಾತಿ, ಪಂಗಡಗಳು ಹಾಗೂ ಹಿಂದುಳಿದ ವರ್ಗಗಳ ಸಬಲೀಕರಣಕ್ಕೆ ಯಾವುದೇ ಆದ್ಯತೆ ನೀಡಿಲ್ಲ. ಇವುಗಳಲ್ಲಿ ತಾರತಮ್ಯ ನೀತಿ ಹಾಗೂ ಈ ವರ್ಗವನ್ನು ನಿರ್ಲಕ್ಷ್ಯ ಧೋರಣೆಯನ್ನು ಕೇಂದ್ರ ಅನುಸರಿಸಿದೆ. ಕೇಂದ್ರ ಬಜೆಟ್‌ನಲ್ಲಿ ರಾಜ್ಯ ಸರಕಾರಕ್ಕೆ ನೀಡಬೇಕಾಗಿದ್ದ ತೆರಿಗೆ ಪಾಲಿನ ಹಣವನ್ನು ಸರಿಯಾಗಿ ನೀಡಿಲ್ಲ. ಕೇಂದ್ರ ಸರಕಾರಕ್ಕೆ ಬೇಕಾದ ದೊಡ್ಡ ಉದ್ಯಮಿಗಳಿಗೆ ಮತ್ತು ತೆರಿಗೆ ಕಳ್ಳರಿಗೆ ಹೆಚ್ಚಿನ ರಿಯಾಯಿತಿ ಮತ್ತು ಸೌಲಭ್ಯ ಕಲ್ಪಿಸಿದೆ. ಈ ಬಾರಿಯ ಬಜೆಟ್ ಸಾಮಾನ್ಯ ಜನರ ಜೀವನದಲ್ಲಿ ತಲ್ಲಣ ಸೃಷ್ಟಿಸಿದೆ.

Related posts

ಕನ್ಯಾಡಿ-2 ಅಂಗನವಾಡಿ ಕೇಂದ್ರದಲ್ಲಿ ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕದಿಂದ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬಂದಾರು : ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ನೂತನ ಸಭಾಭವನಕ್ಕೆ ಭೂಮಿ ಪೂಜೆ

Suddi Udaya

ತೆಕ್ಕಾರು ಪ್ರಾ.ಕೃ.ಪ. ಸ. ಸಂಘದ ಉಪಾಧ್ಯಕ್ಷ ನಾಭಿರಾಜ್ ಹೆಗ್ಡೆ ನಿಧನ

Suddi Udaya

ನೆರಿಯ ಆರೋಗ್ಯ ಕೇಂದ್ರದ ಸುರಕ್ಷಾಧಿಕಾರಿ ಸರೋಜಾ ನಿವೃತ್ತಿ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯಲ್ಲಿ ” ಸಲ್ಯೂಟ್ ದಿ ಸೈಲೆಂಟ್ ಸ್ಟಾರ್ ” ಕಾರ್ಯಕ್ರಮ

Suddi Udaya

ತೆಲುಗು ನಟ ಶ್ರೀಕಾಂತ್ ಸುರ್ಯ ಶ್ರೀ ಸದಾಶಿವರುದ್ರ ದೇವಸ್ಥಾನಕ್ಕೆ ಭೇಟಿ

Suddi Udaya
error: Content is protected !!