22.9 C
ಪುತ್ತೂರು, ಬೆಳ್ತಂಗಡಿ
March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸತ್ಯ ಶೋಧಕ ವೇದಿಕೆ ಮಹಾಸಭೆ: ನೂತನ ಕಚೇರಿ ಉದ್ಘಾಟನೆ

ಬೆಳ್ತಂಗಡಿ : ನಾಗರಿಕ ಸೇವಾ ಟ್ರಸ್ಟ್ ಪ್ರಾರಂಭದಿಂದಲೇ ದಲಿತರ ನಡುವೆ ಪ್ರಾಮಾಣಿಕವಾಗಿ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದೆ. ಸ್ವಾಮಿ ವಿವೇಕಾನಂದರ ಆದರ್ಶದೊಂದಿಗೆ ದೀನ ದಲಿತರ ಜೊತೆ ಕೆಲಸ ಮಾಡುತ್ತಾ ಬಂದಿದೆ ಎಂದು ನಾಗರಿಕ ಸೇವಾ ಟ್ರಸ್ಟ್ ಅಧ್ಯಕ್ಷ ಕೆ.ಸೋಮನಾಥ ನಾಯಕ್ ಹೇಳಿದರು.


ಅವರು ಫೆ.1 ರಂದು ಗುರುವಾಯನಕೆರೆಯಲ್ಲಿ ಸತ್ಯಶೋಧಕ ವೇದಿಕೆ ಬೆಳ್ತಂಗಡಿ ಇದರ ಪ್ರಥಮ ವರ್ಷದ ಮಹಾಸಭೆ , ನೂತನ ಕಚೇರಿ ಹಾಗೂ ವಿದ್ಯಾಜ್ಯೋತಿ ಸಾವಿತ್ರಿಭಾಯಿ ಫುಲೆ ಮತ್ತು ಸ್ವಾಮಿ ವಿವೇಕಾನಂದ ಜನ್ಮದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ನಾಗರಿಕ ಸೇವಾ ಟ್ರಸ್ಟ್ ದಲಿತರ ಶಿಕ್ಷಣಕ್ಕೆ ಸದಾ ಒತ್ತು ನೀಡುತ್ತಿದ್ದು ದಲಿತರ ಉನ್ನತ ಶಿಕ್ಷಣಕ್ಕೂ ನಿಜಾರ್ಥದಲ್ಲಿ ಗಣನೀಯ ಪ್ರೋತ್ಸಾಹ ನೀಡಿದೆ. ದಲಿತರ ಸ್ಥಿತಿಗತಿ ಅಧ್ಯಯನ ನಡೆಸಿದೆ. ಇದರಲ್ಲಿ ದಲಿತ ಕುಟುಂಬಗಳು ಭೂಹಕ್ಕಿನಿಂದ ವಂಚಿತರಾಗಿರುವ ಮಹತ್ವದ ಚಾರಿತ್ರಿಕ ಚಿತ್ರಣ ಸಿಕ್ಕಿತು ಎಂದ ಸೋಮನಾಥ ನಾಯಕ್ ತಿಳಿಸಿದರು.
ಮುಖ್ಯ ಅತಿಥಿ ಪತ್ರಕರ್ತ ಅಚುಶ್ರೀ ಬಾಂಗೇರು ಮಾತನಾಡಿ, ಸತ್ಯಶೋಧ ವೇದಿಕೆಯು ಪ್ರಾರಂಭದಲ್ಲೇ ವಿಭಿನ್ನ, ವಿಶಿಷ್ಟ ಸಮಾಜಮುಖಿ ಕಾರ್ಯಚಟುವಟಿಕೆಗಳನ್ನು ಆಯೋಜಿಸುವ ಮೂಲಕ ಗುರುತಿಸಿಕೊಳ್ಳುತ್ತಿದೆ. ಶೋಷಿತರ ಶಿಕ್ಷಣಕ್ಕೆ ಒತ್ತು ನೀಡುವುದರ ಜೊತೆಗೆ ಸಮಾಜ ಸುಧಾರಕರ, ಸಮಾಜ ಪರಿವರ್ತನಾ ಚಳುವಳಿಯ ಮಹಾನ್ ನಾಯಕರ ಆದರ್ಶದೊಂದಿಗೆ ವೈಚಾರಿಕ, ಸೈದ್ಧಾಂತಿಕ ಜಾಗೃತಿ ಮೂಡಿಸುವ ಮೂಲಕ ಸಮಾಜದಲ್ಲಿ ನಾಯಕತ್ವವನ್ನು ಪ್ರತಿಭಾವಂತರನ್ನು ಹುಟ್ಟು ಹಾಕುವ ಕಾರ್ಯವನ್ನು ಮಾಡುವಂತಾಗಲಿ ಎಂದು ಆಶಿಸಿದರು.

ದಲಿತರ ಭೂಹೋರಾಟ ಸಮಿತಿ ಸಂಚಾಲಕ ಎಂ.ಬಿ.ಕರಿಯ ಮಾತನಾಡಿ ದಲಿತರ ಸ್ಥಿತಿಗತಿಗಳನ್ನು ವಿವರಿಸುತ್ತಾ ಭೂಹೋರಾಟದ ಮೂಲಕ ಭೂವಂಚಿತ ದಲಿತರು ಸಂಘಟಿತರಾಗಿ ತಮ್ಮ ಹಕ್ಕನ್ನು ಪಡೆದುಕೊಳ್ಳಬೇಕಾಗಿದೆ ಎಂದು ತಿಳಿಸಿದರು.


ಸತ್ಯ ಶೋಧಕ ವೇದಿಕೆ ಬೆಳ್ತಂಗಡಿ ಇದರ ಅಧ್ಯಕ್ಷ ಸುಕೇಶ್ ಕೆ ಮಾಲಾಡಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ವೇದಿಕೆ ಒಂದು ವರ್ಷದಲ್ಲಿ ಸಮುದಾಯಗಳ ನಡುವೆ ಕೈಗೊಂಡಿರುವ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳನ್ನು ಮೆಲುಕು ಹಾಕಿದರು.


ವಿವಿಧ ಸಾಂಸ್ಕೃತಿಕ, ಪ್ರತಿಭಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯದರ್ಶಿ ಗಿರೀಶ್ ಪಣಕಜೆ, ಕೋಶಾಧಿಕಾರಿ ಯೋಗೀಶ್ ಪಣಕಜೆ, ವಿಶ್ವನಾಥ ಕಳೆಂಜ, ಸತೀಶ್ ಉಜಿರೆ, ಹರೀಶ್ ಕುಕ್ಕಳ, ಸತೀಶ್ ಮಾರಿಗುಡಿ, ಹರೀಶ್ ಪಣಕಜೆ, ಉಮೇಶ್ ಬೆಳಾಲ್ ಇದ್ದರು. ಬುದ್ಧ ಬಸವ ಅಂಬೇಡ್ಕರ್ ವಚನ ಟ್ರಸ್ಟ್ ಅಧ್ಯಕ್ಷ ಚೆನ್ನಕೇಶವ, ಮುಖಂಡರಾದ ಸಂಜೀವ ಆರ್, ಕರ್ನಾಟಕ ದ.ಸಂ.ಸ. (ಅಂಬೇಡ್ಕರ್ ವಾದ) ತಾಲೂಕು ಸಂಚಾಲಕ ರಮೇಶ್ ಆರ್, ಸಾಮಾಜಿಕ ಹೋರಾಟಗಾರ ಶೇಖರ್ ಎಲ್, ಬಾಬಿ ಎಂ ಮಾಲಾಡಿ, ಶೇಖರ್ ಬಿ.ಕೆ. ಶೀನ ಪಿಲ್ಯ ಮತ್ತಿತರರು ಉಪಸ್ಥಿತರಿದ್ದರು.
ಕು.ರೀಮಾ ಕಳೆಂಜ ನಿರೂಪಿಸಿ ಕು.ಸುಷ್ಮಿತಾ ಮಾಲಾಡಿ ಸ್ವಾಗತಿಸಿದರು. ಕು.ರಮ್ಯಾ ಮುದ್ದಿಗೆ ವಂದಿಸಿದರು. ಪ್ರಾರಂಭದಲ್ಲಿ ಕು.ಮಂಗಳಾ ನಾಡಗೀತೆ ಹಾಡಿದರು.

Related posts

ತೋಟತ್ತಾಡಿ: ಗೋಳಿತ್ತಡಿ ನಿವಾಸಿ ಬಾಬು ಗೌಡ ನಿಧನ

Suddi Udaya

ಪದ್ಮುಂಜ ಪ್ರಾ.ಕೃ.ಪ. ಸಹಕಾರಿ ಸಂಘದ ಪ್ರಭಾರ ಸಿಇಒ ಆಗಿ ಅಂಕಿತಾ ಬಿ ಅಧಿಕಾರ ಸ್ವೀಕಾರ

Suddi Udaya

ಕರ್ನಾಟಕ ರಾಜ್ಯ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕ ಸಂಘಗಳ ಒಕ್ಕೂಟ ಬೆಂಗಳೂರು ಹಾಗೂ ಬೆಳ್ತಂಗಡಿ ಭಾರತೀಯ ಮಜ್ದೂರು ಸಂಘದ ಸಹಭಾಗಿತ್ವದಲ್ಲಿ ನಿರ್ಮಾಣ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಾರ್ಮಿಕರ ಬೃಹತ್ ಪ್ರತಿಭಟನೆ

Suddi Udaya

ಮಣ್ಣಿನ ಹರಕೆ ಖ್ಯಾತಿಯ ಸುರ್ಯ ಶ್ರೀ ಸದಾಶಿವ ರುದ್ರ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ: ಧ್ವಜಾರೋಹಣ

Suddi Udaya

ಸುಲ್ಕೇರಿ ಶ್ರೀರಾಮ‌ ಶಾಲೆಯಲ್ಲಿ ಔಷಧಿ ಸಸ್ಯಗಳ ಗಿಡನೇಡುವ ಕಾರ್ಯಕ್ರಮ

Suddi Udaya

ಉಜಿರೆ: ವಿನೋದ್ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ

Suddi Udaya
error: Content is protected !!