September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರಾಷ್ಟ್ರೀಯ ಹೆದ್ದಾರಿ ಅರಳಿ ಪ್ರದೇಶಕ್ಕೆ ಅನುಕೂಲವಾಗುವಂತೆ ರಸ್ತೆ ನಿರ್ಮಿಸಲು ಆಗ್ರಹ

ಉಜಿರೆಯ ರೋಟರಿ ಭವನದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನ್ಯೂನತೆ ಸರಿಪಡಿಸಿ, ಸಾರ್ವಜನಿಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ರಸ್ತೆ ನಿರ್ಮಾಣಗೊಳಿಸುವ ಕುರಿತು ಫೆ.2ರಂದು ಸಭೆ ಜರುಗಿತು.

ಕಾಶಿಬೆಟ್ಟಿನ ಅರಳಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿಯ ಎರಡು ಕಡೆ ಇರುವ ಸಂಪರ್ಕ ರಸ್ತೆಯನ್ನು ಪಾದಾಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಬೇಕು.ಕಾಶಿಬೆಟ್ಟಿನಲ್ಲಿ ಬಸ್ ತಂಗುದಾಣ ಈಗಿನಂತೆ ಇರಬೇಕು. ಹೆದ್ದಾರಿಯಿಂದ ಅರಳಿಯ ಜಿಲ್ಲಾ ಪಂಚಾಯಿತಿ ರಸ್ತೆ ಸಂಪರ್ಕ ಮಾಡುವ ಸರ್ವಿಸ್ ರಸ್ತೆ ವ್ಯವಸ್ಥಿತವಾಗಿ ನಿರ್ಮಿಸಬೇಕು ಎಂಬ ವಿಚಾರಗಳ ಕುರಿತು ಚರ್ಚಿಸಲಾಯಿತು.


ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ, ಶಾಸಕ ಹರೀಶ್ ಪೂಂಜ,ಎಂಎಲ್ ಸಿ ಪ್ರತಾಪ್ ಸಿಂಹ ನಾಯಕ್, ಸಂಸದ ಬ್ರಿಜೇಶ್ ಚೌಟ, ಕೇಂದ್ರ ಸಚಿವ ನಿತಿನ್ ಗಡ್ಕರಿ ಉಜಿರೆ ಹಾಗೂ ಲಾಯಿಲ ಗ್ರಾಪಂಗಳಿಗೆ ಮನವಿ ನೀಡುವ ಕುರಿತು ನಿರ್ಣಯಿಸಲಾಯಿತು.

ಸಮಸ್ಯೆಗೆ ಸೂಕ್ತ ಪರಿಹಾರ ದೊರಕದೆ ಇದ್ದರೆ, ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು, ಕಾನೂನು ಹೋರಾಟ ಮಾಡಲು ಅರಳಿಯ ನಿವಾಸಿಗಳಿಗೆ ರೋಟರಿ ಕ್ಲಬ್ ವತಿಯಿಂದ ಸಹಕಾರ ನೀಡುವ ಬಗ್ಗೆ ಪ್ರಸ್ತಾಪಿಸಲಾಯಿತು.
ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ.ದಯಾಕರ್, ಪೂರ್ವಾಧ್ಯಕ್ಷರಾದ ಮನೋರಮಾ ಭಟ್, ಶ್ರೀಕಾಂತ ಕಾಮತ್, ಜಯರಾಮ್, ಪಂಚಾಯಿತಿ ಸದಸ್ಯ ಜಗನ್ನಾಥ ರೈ, ಸ್ಥಳೀಯರಾದ ಶ್ರೀಕಾಂತ ಕಾಮತ್, ಸುರೇಶ್, ಮೋಹಿನಿ, ಭಾಗ್ಯಜ್ಯೋತಿ, ಪ್ರಮೀಳಾ, ಕೃಷ್ಣ, ವಿಜಯ, ಜಯಾನಂದ, ಗಿರೀಶ್, ರವಿಕುಮಾರ್, ವಿನಯ ಕೃಷ್ಣ,ಶಿಲ್ಪಾ, ಅಜಯ್, ಭಾಗೀರಥಿ, ಸುಧಾಕರ್, ಸೃಜನ್ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿದರು.

Related posts

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಪುದುವೆಟ್ಟುನಲ್ಲಿ ಪ್ರತಿಭಟನೆ; ಸರಕಾರಕ್ಕೆ ಮನವಿ

Suddi Udaya

ನಾವೂರು : ರತ್ನ ಪೂಜಾರಿ ನಿಧನ

Suddi Udaya

ಬಿಜೆಪಿ ಓಡಿಲ್ನಾಳ ಶಕ್ತಿ ಕೇಂದ್ರ ಅಧ್ಯಕ್ಷರಾಗಿ ರಾಜ್ ಪ್ರಕಾಶ್ ಶೆಟ್ಟಿ ಆಯ್ಕೆ

Suddi Udaya

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ಧರ್ಮಸ್ಥಳದಲ್ಲಿ 812 ಮಂದಿಯಿಂದ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ: ಪುನರ್ವಸು 2.0 ಸಮ್ಮೇಳನದಲ್ಲಿ ದಾಖಲೆ ಸಾಧನೆ; ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ತಾತ್ಕಾಲಿಕ ಮಾನ್ಯತೆ

Suddi Udaya

ಕುತ್ಲೂರು ನಿವಾಸಿ ಶ್ರೀಮತಿ ನಿಧನ

Suddi Udaya
error: Content is protected !!