July 24, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಫೆ 8:ಬಳಂಜ ಯುವ ಬಿಲ್ಲವ ವೇದಿಕೆಯಿಂದ ವಾರ್ಷಿಕ ಕ್ರೀಡಾಕೂಟ ಬ್ರಹ್ಮಶ್ರೀ-2026: ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ಹಾಗೂ ವಿವಿಧ ಸ್ಪರ್ಧೆಗಳು

ಬೆಳ್ತಂಗಡಿ: ಜಿಲ್ಲಾ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿ ಹಾಗೂ ಮಹಿಳಾ ಬಿಲ್ಲವ ವೇದಿಕೆಯ ಸಹಕಾರದೊಂದಿಗೆ,ಯುವ ಬಿಲ್ಲವ ವೇದಿಕೆಯ ನೇತೃತ್ವದಲ್ಲಿ, ಸಂಘದ ವ್ಯಾಪ್ತಿಗೆ ಸೀಮಿತವಾಗಿ ಬ್ರಹ್ಮಶ್ರೀ-೨೦೨೬ ವಾರ್ಷಿಕ ಕ್ರೀಡಾಕೂಟವು ಫೆ.೮ರಂದು ಸಂಘದ ವಠಾರದಲ್ಲಿ ನಡೆಯಲಿದೆ ಎಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ತಿಳಿಸಿದ್ದಾರೆ.

ಬೆಳಿಗ್ಗೆ ಕ್ರೀಡಾಕೂಟದ ಉದ್ಘಾಟನೆಯನ್ನು ಗುರುವಾಯನಕೆರೆ ನಿಸರ್ಗ ಕರ್ಟನ್ ಇದರ ಮಾಲಕ ನಾಗೇಶ್ ಕೋಟ್ಯಾನ್ ನೆರವೇರಿಸಲಿದ್ದಾರೆ. ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್‍ಸ್, ಬೆಳ್ತಂಗಡಿ ಇದರ ಅಧ್ಯಕ್ಷ ಸುರೇಶ್ ಬಂಗೇರ ಎಂ.ಡಿ ಇವರು ಕ್ರೀಡಕೂಟಕ್ಕೆ ಚಾಲನೆ ನೀಡಲಿದ್ದಾರೆ.ಕ್ರೀಡಾ ಸಮವಸ್ತ್ರವನ್ನು ಬೆಳ್ತಂಗಡಿ ಯುವ ಬಿಲ್ಲವ ವೇದಿಕೆಯ ಪೂರ್ವಾಧ್ಯಕ್ಷ ಚಿದನಾಂದ ಇಡ್ಯ ಅನಾವರಣಗೊಳಿಸಲಿದ್ದಾರೆ ಎಂದರು.

ಮುಖ್ಯ ಅತಿಥಿಗಳಾಗಿ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಪ್ರಸಾದ್ ಬಿ.ಎಸ್.,ಯುವವಾಹಿನಿ ಕೇಂದ್ರ ಸಮಿತಿ, ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿ ಶುಭಕರ ಪೂಜಾರಿ ಸಾವ್ಯ, ಯುವವಾಹಿನಿ ವೇಣೂರು ಘಟಕಾಧ್ಯಕ್ಷ ಪ್ರಕಾಶ್ ಕೋಟ್ಯಾನ್ ಡೊಂಕುಬೆಟ್ಟು, ಬೆಳ್ತಂಗಡಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಎಂ. ಲೋಕೋಪಯೋಗಿ ಇಲಾಖೆ ಬೆಳ್ತಂಗಡಿ ಇದರ ಇಂಜಿನಿಯರ್ ಸೂರಜ್ ಹಾನಿಂಜ, ಶ್ರೀ ಗುರುದೇವ ಕಾಲೇಜಿನ‌ ಉಪನ್ಯಾಸಕ ಗಣೇಶ್ ಬಿ. ಶಿರ್ಲಾಲು, ಮಾತೃಶ್ರೀ ಸಿಲ್ಕ್ಸ್ ಬೆಳ್ತಂಗಡಿ ಇದರ ಮಾಲಕ ಮೋಹನ್ ಸುವರ್ಣ, ಜೆಸಿಐ ಬೆಳ್ತಂಗಡಿ ಮಂಜುಶ್ರೀ ಅಧ್ಯಕ್ಷ ಜಿತೇಶ್ ಕುಮಾರ್,
ನವಮಿ ಕನ್‌ಸ್ಟ್ರಕ್ಷನ್ ಬೆಳ್ತಂಗಡಿ ನಾಗೇಶ್ ಮುಡಲ ಇವರು ಭಾಗವಹಿಸಲಿರುವರು ಎಂದರು.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಘದ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ,ಗೌರವ ಮಾರ್ಗದರ್ಶಕ ಕೆ. ವಸಂತ ಸಾಲಿಯಾನ್ ಕಾಪಿನಡ್ಕ,ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ವೈ.ನೋಣಯ್ಯ ಪೂಜಾರಿ ಎಲ್ಯೋಟ್ಟು,ರವೀಂದ್ರ ಪೂಜಾರಿ ಹೇವ,ಬಿ. ಸಾಂತಪ್ಪ ಸುವರ್ಣ ಹಾಕೋಟೆ, ಯುವರಾಜ ವೈ ಎಲ್ಯೋಟ್ಟು,ಶ್ಯಾಮ್ ಬಂಗೇರ ಪೆರಾಜೆ,ಬಾಲಕೃಷ್ಣ ಪೂಜಾರಿ ಯೈಕುರಿ,ಹೆಚ್. ದೇಜಪ್ಪ ಪೂಜಾರಿ ಸುಧಾಮ,ತಿಮ್ಮಪ್ಪ ಪೂಜಾರಿ ತಾರಿಪಡ್ಡು,ಸಂತೋಷ್ ಕುಮಾರ್ ಶಿವಗಿರಿ ಕಾಪಿನಡ್ಕ,ದಿನೇಶ್ ಪೂಜಾರಿ ಕುದ್ರೋಟ್ಟು,ಸುರೇಶ್ ಪೂಜಾರಿ ಜೈಮಾತಾ ನಾಲ್ಕೂರು,ದಿನೇಶ್ ಪೂಜಾರಿ ಅಂತರ,ಪ್ರವೀಣ್ ಕುಮಾರ್ ಹೆಚ್.ಎಸ್ ಹೊಸಮನೆ ಮಿತ್ತಿಲ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್ ವಹಿಸಲಿದ್ದಾರೆ ಎಂದರು.

ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ದೆ: ಕ್ರೀಡಾಕೂಟದ ಸಂದರ್ಭದಲ್ಲಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಪ್ರಬಂಧ ಸ್ಪರ್ದೇ ಏರ್ಪಡಿಸಲಾಗಿದೆ. ಪಿಯುಸಿ ವಿದ್ಯಾರ್ಥಿಗಳಿಗೆ ಕಾರಣೀಕ ಪುರುಷರಾದ ಕೋಟಿ- ಚೆನ್ನಯರ ಕುರಿತಾಗಿ ಪ್ರಬಂಧ ಸ್ಪರ್ದೆಯಿದೆ.ಬೆಳಿಗ್ಗೆ 9 ಗಂಟೆಗೆ ಹೆಸರು ನೊಂದಾವಣೆ, ಪ್ರಬಂಧ ಸ್ಪರ್ಧೆಗೆ ಒಂದು ಗಂಟೆಯ ಅವಧಿ ನೀಡಲಾಗಿದೆ.‌ಸರಿಯಾಗಿ 10 ಗಂಟೆಗೆ ಸ್ಪರ್ಧೆ ಪ್ರಾರಂಭವಾಗಲಿದೆ.
ಮಾಹಿತಿಗಾಗಿ
9480258238 ನಂಬರ್ ಸಂಪರ್ಕಿಸಬಹುದಾಗಿದೆ.

Related posts

ಶ್ರೀ ಧ. ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಟಿಡೊಂಜಿ ದಿನ ಹಾಗೂ ಕೆಸರೊಡೊಂಜಿ ದಿನದ ಸಂಭ್ರಮ

Suddi Udaya

ಮೇ 14ರಿಂದ 24ರವರೆಗೆ ಕುಲಶೇಖರ ವೀರನಾರಾಯಣ ದೇವರಿಗೆ ಬ್ರಹ್ಮಕಲಶದ ವೈಭವ : ರೂ. 10 ಕೋಟಿ ವೆಚ್ಚದಲ್ಲಿ ಪುನರ್ ನಿರ್ಮಾಣ: ಪತ್ರಿಕಾಗೋಷ್ಠಿಯಲ್ಲಿ ಮಯೂರ್ ಉಳ್ಳಾಲ್ ಮಾಹಿತಿ

Suddi Udaya

ಸಿರಿ ಸಂಸ್ಥೆಯಲ್ಲಿ ವಿಜಯವಾಣಿ ವಿಜಯೋತ್ಸವ ಕೂಪನ್ ಬಿಡುಗಡೆ

Suddi Udaya

ಸಂಸದ ಕೋಟ ಶ್ರೀನಿವಾಸ್ ಪೂಜಾರಿಯವರಿಗೆ ಮಾತೃ ವಿಯೋಗ

Suddi Udaya

ಬಂದಾರು: ಆದಿಪೂಜಿತ ಸಿದ್ದಿವಿನಾಯಕ ಕನ್ನಡ ಭಕ್ತಿಗೀತೆ ಆಡಿಯೋ ಬಿಡುಗಡೆ

Suddi Udaya

ಯಕ್ಷಗುರು ಮೋಹನ ಬೈಪಾಡಿತ್ತಾಯ ಉಜಿರೆ ಅವರಿಗೆ ತೆಂಕಬೈಲು ಪ್ರಶಸ್ತಿ

Suddi Udaya
error: Content is protected !!