32.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಶಿಕ್ಷಣ ಸಂಸ್ಥೆ

ಫೆ.9-10: ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ವಿಚಾರ ಸಂಕಿರಣ: ವಿವಿಧ ದೇಶ-ರಾಜ್ಯದಿಂದ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಂಶೋಧಕರು, ವಿದ್ವಾಂಸರು ಭಾಗಿ

ಉಜಿರೆ: ಶ್ರೇಷ್ಠ ಮತ್ತು ಮೌಲ್ಯಧಾರಿತ ಶಿಕ್ಷಣದೊಂದಿಗೆ ಕಲೆ, ಕ್ರೀಡೆ, ಸಾಹಿತ್ಯ ಮುಂತಾದ ಕ್ಷೇತ್ರದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ರಾಷ್ಟಿçÃಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದೆ.ಎಸ್.ಡಿ.ಎಂ ಕಾಲೇಜಿನ ಅರ್ಥಶಾಸ್ತç ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ವಾಣಿಜ್ಯ ಮತ್ತು ವ್ಯವಹಾರ ಆಡಳಿತ ವಿಭಾಗಗಳ ಸಹಭಾಗಿತ್ವದಲ್ಲಿ ಎರಡು ದಿನಗಳ ‘ಗ್ರಾಮೀಣ ಜೀವನೋಪಾಯ ಮತ್ತು ಸುಸ್ಥಿರತೆ, ಜಾಗತಿಕ ದೃಷ್ಟಿಕೋನ ವಿಚಾರದ ಕುರಿತು ಅಂತಾರಾಷ್ಟ್ರೀಯ ವಿಚಾರ ಸಂಕಿರಣವನ್ನು ಇಂದ್ರಪ್ರಸ್ಥ ಸಭಾಂಗಣದಲ್ಲಿ ಫೆ 9-10 ರಂದು ಆಯೋಜಿಸಲಾಗಿದೆ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೋ. ವಿಶ್ವನಾಥ ಪಿ ಅವರು ಕಾಲೇಜಿನಲ್ಲಿ ಫೆ 4ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಿಚಾರ ಸಂಕೀರಣಕ್ಕೆ ನವದೆಹಲಿಯ ಭಾರತೀಯ ಸಾಮಾಜಿಕ ವಿಜ್ಞಾನ ಸಂಶೋಧನಾ ಮಂಡಳಿ (ICSSR) ಯಿಂದ ಪ್ರಾಯೋಜಕತ್ವ ದೊರೆತಿದೆ. ಸಮ್ಮೇಳನದ ಉದ್ಘಾಟನೆಯನ್ನು ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಸತೀಶ್ಚಂದ್ರ ಎಸ್. ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಮೇರಿಕಾದ ಮೆಕ್ಸಿಕೋ ಸಿಟಿಯ ಲ್ಯಾಟಿನ್ ಅಮೆರಿಕನ್ ಫ್ಯಾಕಲ್ಟಿ ಆಫ್ ಸೋಷಿಯಲ್ ಸೈನ್ಸ್ ಪ್ರಾಧ್ಯಾಪಕ ಪ್ರೊ. ಮರಿಯಾನೋ ರೋಯಾಸ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಶ್ವನಾಥ್ ಪಿ. ವಹಿಸಿಕೊಳ್ಳಲಿದ್ದಾರೆ.
ಈ ಸಂದರ್ಭದಲ್ಲಿ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಶುಭ ಆಶೀರ್ವಚನದೊಂದಿಗೆ ಮೂವತ್ತಾರು ಸಂಶೋಧನಾ ಲೇಖನಗಳನ್ನೊಳಗೊಂಡ ISBN ಪುಸ್ತಕ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ ಎಂದರು.


ವಿಚಾರ ಗೋಷ್ಠಿ :
ವಿಚಾರಗೋಷ್ಠಿಯಲ್ಲಿ ಪ್ರೊ. ಮರಿಯಾನೋ ರೋಯಾಸ್, ಅರ್ಥಶಾಸ್ತçದ ಪ್ರಾಧ್ಯಾಪಕರು, ಲ್ಯಾಟಿನ್ ಅಮೇರಿಕನ್ ಫ್ಯಾಕಲ್ಟಿ ಆಫ್ ಸೋಶಿಯಲ್ ಸೈನ್ಸ್-ಮೆಕ್ಸಿಕೋ ಸಿಟಿ, ಅವರು ದಿಕ್ಸೂಚಿ ಭಾಷಣವನ್ನು ನಡೆಸಿಕೊಡಲಿದ್ದಾರೆ. ಮೊದಲನೆ ದಿನದಲ್ಲಿ RBI ಪ್ರಾದೇಶಿಕ ಸಂಸ್ಥೆ ಬೆಂಗಳೂರು ಇದರ ಫಿನ್‌ಟೆಕ್ ವಿಭಾಗದ ಸಹಾಯಕ ಮಹಾ ಪ್ರಬಂಧಕ ಸ್ವಪ್ಟಿಲ್ ಶಾನು ಭಾರ್ಗವ್ ಅವರು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕಾಗಿ ಡಿಜಿಟಲ್ ಪಾವತಿ ಮತ್ತು ಫಿನ್‌ಟೆಕ್ ಪಾತ್ರ, ಎಸ್.ಕೆ.ಡಿ.ಆರ್.ಡಿ.ಪಿ ಸಿಇಒ ಅನಿಲ್ ಕುಮಾರ್ ಎಸ್ ಎಸ್ ಅವರು ಎಮ್.ಎಸ್.ಎಮ್.ಇ. ಬೆಂಬಲ ಸಂಸ್ಥೆಯಾಗಿ ಎಸ್.ಕೆ.ಡಿ.ಆರ್.ಡಿ.ಪಿ., ವಿಜಯಪುರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟೆçÃಟ್ ಮತ್ತು ಹೆಚ್ಚುವರಿ ಡೆಪ್ಯೂಟಿ ಕಮಿಷನರ್ ಡಾ. ಔದ್ರಮ ಅವರು ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಜೀವನೋಪಾಯಕ್ಕಾಗಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಎಂಬ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ನಂತರ ಮೂರು ಸಮಾನಾಂತರ ತಾಂತ್ರಿಕ ಅಧಿವೇಶನಗಳಲ್ಲಿ ಸುಮಾರು ಎಪ್ಪತ್ತು ಸಂಶೋಧನಾ ಲೇಖನಗಳ ಮಂಡನೆಯನ್ನು ಮಾಡಲಿದ್ದಾರೆ. ಈ ಅಧಿವೇಶನಗಳನ್ನು ಡಾ. ಉದಯಚಂದ್ರ ಪಿ.ಎನ್., ಮತ್ತು ಡಾ. ಎ. ಜಯಕುಮಾರ ಶೆಟ್ಟಿ,
ನಿವೃತ್ತ ಪ್ರಾಂಶುಪಾಲರುಗಳು, ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಹಾಗೂ ಪ್ರೊ. ಪರಮೇಶ್ವರ, ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕರು ನಡೆಸಿಕೊಡಲಿದ್ದಾರೆ ಎಂದರು.

ಅಂತಾರಾಷ್ಟ್ರೀಯ ವಿಚಾರ ಸಂಕೀರ್ಣದಲ್ಲಿ ಮಲೇಷಿಯಾ, ಮೆಕ್ಸಿಕೋ, ಶ್ರೀಲಂಕಾ ದೇಶಗಳಿಂದ ವಿದ್ವಾಂಸರು ಭಾಗಹಿಸುತ್ತಿದ್ದಾರೆ. ಕರ್ನಾಟಕ, ಒರಿಸ್ಸಾ ರಾಜ್ಯ ಹಾಗೂ ಮುಂತಾದ ಕಡೆಗಳಿಂದ ಸಂಶೋಧಕರು ಆಗಮಿಸುತ್ತಿದ್ದಾರೆ. ವಿಚಾರ ಸಂಕೀರ್ಣದಲ್ಲಿ ಬೇರೆ ಬೇರೆ ದೇಶದ, ರಾಜ್ಯದ 300ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು, ವಿಶ್ವ ವಿದ್ಯಾನಿಲಯದ ಮುಖ್ಯಸ್ಥರು ಭಾಗವಹಿಸುತ್ತಿದ್ದಾರೆ.

ಎರಡನೇ ದಿನದಲ್ಲಿ ದೆಹಲಿಯ ಜೆ.ಎನ್.ಯು. ಇದರ ಪ್ರಾಧ್ಯಾಪಕರಾದ ಪ್ರೊ. ರಮೇಶ್.ಎಸ್. ಸಾಲ್ಯಾನ್ ಅವರು ಭಾರತದಲ್ಲಿ ಗ್ರಾಮೀಣ ಜೀವನೋಪಾಯಕ್ಕಾಗಿ ಐಸಿಟಿ-ಚಾಲಿತ ಪರಿವರ್ತನೆ, ಶ್ರೀಲಂಕಾದ ನಳಿನಿ ರತ್ನರಾಜ ಇವರು ಸುಸ್ಥಿರ ಗ್ರಾಮೀಣ ಜೀವನೋಪಾಯಕ್ಕಾಗಿ ಸ್ತ್ರೀವಾದಿ ಮಾರ್ಗಗಳು, ಒಡಿಶಾದ ರೆವೆನ್ ಶಾ ವಿಶ್ವವಿದ್ಯಾನಿಲಯದ ಡಾ. ಕಿಶೋರ್ ಕುಮಾರ್ ದಾಸ್ ಅವರು ಕೃಷಿ ಉದ್ಯಮಶೀಲತೆ ಮತ್ತು ಸುಸ್ಥಿರ ಜೀವನೋಪಾಯ, ಅಫ್ಘಾನಿಸ್ತಾನದ ಡಾ. ಅಜೀಜುದ್ದೀನ್ ಸುಲ್ತಾನಿ ಅವರು ಅಸಂಘಟಿತ ವಲಯದಲ್ಲಿ ಆರ್ಥಿಕ ಸೇರ್ಪಡೆ ಮತ್ತು ಸಾಮಾಜಿಕ ಭದ್ರತೆ ಹಾಗೂ ಬೆಂಗಳೂರಿನ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆ ಸಂಸ್ಥೆಯ ನಿವೃತ್ತ ನಿರ್ದೇಶಕ ಪ್ರೊ. ಎಂ.ಜಿ. ಚಂದ್ರಕಾಂತ್ ಇವರು ಆರೋಗ್ಯ ಅರ್ಥಶಾಸ್ತçದ ಸಮಸ್ಯೆಗಳು ಎಂಬ ವಿಷಯಗಳ ಕುರಿತು ವಿಚಾರ ಮಂಡನೆ ಮಾಡಲಿದ್ದಾರೆ. ಸಂವಾದ ಗೋಷ್ಠಿಯನ್ನು ಕೊಣಾಜೆಯ ಮಂಗಳೂರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಪ್ರೊ. ಪ್ರೀತಿ ಕೀರ್ತಿ ಡಿ’ಸೋಜಾ ಇವರು ನಡೆಸಿಕೊಡಲಿದ್ದು, ಈ ಸಂದರ್ಭದಲ್ಲಿ ಡಾ. ರಾಜೇಶ್ ಆಚಾರ್ಯ ಎಚ್. ಸಹ ಪ್ರಾಧ್ಯಾಪಕರು, ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಕರ್ನಾಟಕ, ವಿಜಯ್ ಕುಮಾರ್ ಬಿ. ಪಿ.. ಕಾರ್ಯನಿರ್ವಾಹಕ ನಿರ್ದೇಶಕರು, RUDSET ಸಂಸ್ಥೆ, ಕೇಂದ್ರ ಕಚೇರಿ, ಉಜಿರೆ, ಮನೋರಮಾ ಭಟ್ ಜಿ.ವಿ., ವಕೀಲರು ಮತ್ತು ಮಾಜಿ ನಿರ್ದೇಶಕರು, ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ (ಆರ್), ಉಜಿರೆ, ಕಿರಣ್ ರೊನಾಡ್, ವ್ಯವಸ್ಥಾಪಕ ನಿರ್ದೇಶಕರು, KRS ಟೂರ್ಸ್ ಆ್ಯಂಡ್ ಟ್ರಾವೆಲ್ಸ್ ಮಲೇಷ್ಯಾ, ಶೇಖ್ ಲತೀಫ್, ಕೆ.ಎ.ಎಸ್., ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ, ಬೆಂಗಳೂರು, ಕರ್ನಾಟಕ ಇವರುಗಳು ವಿಚಾರ ಗೋಷ್ಠಿಯ ವಿಷಯದ ಕುರಿತಾಗಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲಿದ್ದಾರೆ ಎಂದರು.
ಸಮಾರೋಪ ಸಮಾರಂಭ: ಅಂತಾರಾಷ್ಟ್ರೀಯ ವಿಚಾರ ಸಂಕಿರಣದ ಸಮಾರೋಪ ಸಮಾರಂಭವು ಫೆ 10 ರಂದು ಮಧ್ಯಾಹ್ನ ೩.೪೫ರಿಂದ ಇಂದ್ರಪ್ರಸ್ಥ ಸಭಾಂಗಣದಲ್ಲಿ ನಡೆಯಲಿದೆ. ದ.ಕ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ನರವಾಡೆ ವಿನಾಯಕ ಕಾರಭಾರಿ ಐಎಎಸ್, ಧರ್ಮಸ್ಥಳ ಶ್ರೀ ಗ್ರಾಮೋದ್ಯೋಗ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಕೆ.ಎನ್. ಜನಾರ್ಧನ್ ಭಾಗವಹಿಸಲಿದ್ದಾರೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಕಾಮರ್ಸ್ ವಿಭಾಗದ ಡೀನ್ ಶಕುಂತಲಾ, ಉಪಪ್ರಾಂಶುಪಾಲರಾದ ನಂದ ಕುಮಾರಿ, ಕಾಮರ್ಸ್ ವಿಭಾಗದ ಮುಖ್ಯಸ್ಥರಾದ ಡಾ.ರತ್ನಾವತಿ, ಎಕಾನಾಮಿಕ್ಸ್ ವಿಭಾಗದ ಮುಖ್ಯಸ್ಥರಾದ ಡಾ.ಗಣರಾಜ್ ಉಪಸ್ಥಿತರಿದ್ದರು.

Related posts

ರಾಷ್ಟ್ರೀಯ ಮಟ್ಟದ ಭಾರ ಎತ್ತುವಿಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಹಿಮಾಚಲ ಪ್ರದೇಶಕ್ಕೆ ತೆರಳಲಿರುವ ಬಂದಾರು ಕೆ ತೇಜಸ್ವಿನಿ ಪೂಜಾರಿ ರವರಿಗೆ ಬೆಳ್ತಂಗಡಿ ಶ್ರೀ ನಾರಾಯಣಗುರು ಸ್ವಾಮಿ ಸೇವಾ ಸಂಘದ ವತಿಯಿಂದ ಆರ್ಥಿಕ ನೆರವು

Suddi Udaya

ಮೇಲಂತಬೆಟ್ಟು ಗ್ರಾ.ಪಂ. ನಲ್ಲಿ ವಿಶೇಷ ಗ್ರಾಮ ಸಭೆ

Suddi Udaya

ಗಣೇಶ ಚತುರ್ಥಿಯ ರಜೆಯನ್ನು ಬದಲಾಯಿಸುವಂತೆ ಮನವಿ

Suddi Udaya

ಎಕ್ಸೆಲ್ ಪದವಿ ಪೂರ್ವ ಕಾಲೇಜಿನಿಂದ ಬೆಳ್ತಂಗಡಿ, ಬಂಟ್ವಾಳ, ಮೂಡುಬಿದಿರೆ, ಉಪ್ಪಿನಂಗಡಿ ಭಾಗಗಳಿಂದ ಕಾಲೇಜು ಬಸ್ ಸೌಲಭ್ಯ

Suddi Udaya

ಓಡೀಲು ಶ್ರೀ ಕ್ಷೇತ್ರ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಉಡುಪಿ ಪೇಜಾವರ ಸ್ವಾಮೀಜಿ ಬೇಟಿ

Suddi Udaya

ಅಕ್ರಮ ಕಲ್ಲು ಕೋರೆ ದಾಳಿ ನೆಪದಲ್ಲಿ ಬಿಜೆಪಿ ಕಾರ್ಯಕರ್ತನ ಬಂಧನ: ಘಟನೆ ಖಂಡಿಸಿ ರಾತ್ರಿ ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಠಾಣೆ ಎದುರು ಪ್ರತಿಭಟನೆ ನಡೆಸಿದಶಾಸಕ ಹರೀಶ್ ಪೂಂಜ

Suddi Udaya
error: Content is protected !!