ಧಾರ್ಮಿಕಪ್ರಮುಖ ಸುದ್ದಿಬೆಳ್ತಂಗಡಿವರದಿ

ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ

ಮರೋಡಿ: ಪುರುಷ ಸಮಾಜದಲ್ಲಿ ಹೆಣ್ಣೊಬ್ಬಳು ತನ್ನ ಹಕ್ಕುಗಳಿಗಾಗಿ ಬಂಡಾಯದ ಪ್ರತಿರೂಪವಾಗಿ ಹುಟ್ಟಿಕೊಂಡ ಸಿರಿ ಆರಾಧನೆಗೆ ತುಳುನಾಡಿನಲ್ಲಿ ವಿಶೇಷ ಸ್ಥಾನಮಾನವಿದೆ. ಇದು ಪರಶುರಾಮ ಸೃಷ್ಟಿಯ ನಮ್ಮ ನೆಲದ ಶ್ರೀಮಂತ ಸಂಸ್ಕೃತಿಗಳಲ್ಲಿ ಒಂದು ಎಂದು ಖ್ಯಾತ ವಾಗ್ಮಿ ಶ್ರೀಕಾಂತ್‌ ಶೆಟ್ಟಿ ಅಭಿಪ್ರಾಯಪಟ್ಟರು.

ಆಲಡೆ ಕ್ಷೇತ್ರ ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ ಪ್ರಯುಕ್ತ ಫೆ.4ರಂದು ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಅವರು ಧಾರ್ಮಿಕ ಪ್ರವಚನ ನೀಡಿದರು.

ತುಳುನಾಡಿನ ಧಾರ್ಮಿಕ ಆಚರಣೆಗಳಿಗೆ ಮತ್ತು ಆಲಡೆ ಕ್ಷೇತ್ರಗಳ ನಡುವೆ ಅವಿನಾಭಾವ ಸಂಬಂಧವಿದೆ. ಆಲಡೆಯ ಸಾನ್ನಿಧ್ಯ ಶಕ್ತಿಗಳ ಅನುಗ್ರಹವಿದ್ದರೆ ಜೀವನ ಪಾವನವಾಗುತ್ತದೆ ಎಂಬ ನಂಬಿಕೆಯಿದೆ. ಈ ಆಲಡೆ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸ ಯುವಪೀಳಿಗೆಯಿಂದ ನಡೆಯಬೇಕು ಎಂದು ಹೇಳಿದರು.

ಇಂದು ಆಲಡೆ ಕ್ಷೇತ್ರಗಳು ನಶಿಸಿ ಹೋಗುತ್ತಿವೆ. ಅವು ಕೇವಲ ದೇವಸ್ಥಾನವಾಗಿ ಬದಲಾಗುತ್ತಿವೆ. ಬಹುತೇಕ ಕಡೆಗಳಲ್ಲಿ ದಲ್ಯ ನಿಲ್ಲುವ ಕ್ರಮವೇ ನಿಂತು ಹೋಗಿದೆ. ಸುಶಿಕ್ಷಿತರು ಹೆಚ್ಚಾದಂತೆ ತುಳುನಾಡಿನ ದೈವಾರಾಧನೆಯ ರಂಗದಲ್ಲಿ ಇಂತಹ ವಿಪತ್ತು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆ. ಆದರೆ, ಮರೋಡಿ ಕ್ಷೇತ್ರದಲ್ಲಿ ಈ ಎಲ್ಲಾ ಆಚರಣೆಗಳು ಶಿಸ್ತುಬದ್ಧವಾಗಿ ನಡೆಯುತ್ತಿರುವುದು ಶ್ಲಾಘನೀಯವಾದುದು. ಈ ಆಚರಣೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು, ಅದನ್ನು ಮುಂದಿನ ತಲೆಮಾರಿಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಅಭಿಪ್ರಾಯಪಟ್ಟರು.

ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ಜಯಂತ ಕೋಟ್ಯಾನ್‌, ಜೀರ್ಣೋದ್ಧಾರ ಸಮಿತಿ ಮುಂಬೈ ಘಟಕದ ಅಧ್ಯಕ್ಷ ನಾರಾಯಣ ಸುವರ್ಣ ಉಪಸ್ಥಿತರಿದ್ದರು. ಯಶೋಧರ ಬಂಗೇರ ಕಾರ್ಯಕ್ರಮ ನಿರೂಪಿಸಿದರು.

Related posts

ಧರ್ಮಸ್ಥಳ ಪ್ರಾ.ಕೃ.ಪ.ಸ. ಸಂಘದ ನಿರ್ದೇಶಕ ಸ್ಥಾನದ ಉಪಚುನಾವಣೆಗೆ ಮಾಜಿ ಸೈನಿಕ ತಂಗಚ್ಚನ್ ಅವಿರೋಧ ಆಯ್ಕೆ

Suddi Udaya

ಪುದುವೆಟ್ಟು ಶ್ರೀ ಧ.ಮಂ..ಹಿ. ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ರಾಜ್ಯ ಸರ್ಕಾರದಿಂದ ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣ : ಇದು ಬಡಜನರ ಮೇಲಿನ ಮರಣ ಶಾಸನ: ಶೇಖರ ಎಲ್

Suddi Udaya

ಜೆಸಿಐ ಬೆಳ್ತಂಗಡಿ ವತಿಯಿಂದ ಡ್ರಗ್ಸ್ ಹಾಗೂ ರಸ್ತೆ ಸುರಕ್ಷತಾ ಜಾಗೃತಿ ನೃತ್ಯ

Suddi Udaya

ಬೆಳ್ತಂಗಡಿ ಮಹಿಳಾ ವೃಂದದಿಂದ ವಿಶ್ವ ಮಹಿಳಾ ದಿನಾಚರಣೆ

Suddi Udaya

ಫೆ.12-13: ಮುಂಡೂರು ಶ್ರೀ ನಾಗಕಲ್ಲುರ್ಟಿ ದೈವಸ್ಥಾನದಲ್ಲಿ ಕಾಲಾವಧಿ ನೇಮೋತ್ಸವ

Suddi Udaya
error: Content is protected !!