September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಅರಸಿನಮಕ್ಕಿ: ಶ್ರೀ ಕ್ಷೇ.ಧ.ಗ್ರಾ. ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಅರಸಿನಮಕ್ಕಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ಅರಸಿನಮಕ್ಕಿ ವಲಯದ ವಾತ್ಸಲ್ಯ ಸದಸ್ಯೆ ಜಯಶ್ರೀಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿಸಿ ಟ್ರಸ್ಟ್ ವತಿಯಿಂದ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಗ್ರಾಮದ ಅಭಿವೃದ್ಧಿಗೆ ಯೋಜನೆಯು ಆಧಾರವಾಗಿ ನಿಂತು ಅದೆಷ್ಟೋ ಕುಟುಂಬಗಳ ಬದುಕನ್ನು ಬೆಳಗಿಸಿದೆ, ಒಂದು ಮನೆಯಲ್ಲಿ ಮನೆಯ ಪೂರ್ಣವಾದ ಮೂಲಭೂತ ಸೌಕರ್ಯ ಇಲ್ಲದೆ, ಆ ಮನೆಯಲ್ಲಿ ಜೀವನವನ್ನು ಕಳೆಯುತ್ತಿದ್ದ ಜಯಶ್ರೀರವರ ಮನೆಯನ್ನು ಗುರುತಿಸಿ, ಜಯಶ್ರೀ ರವರಿಗೆ ಸುಂದರವಾದ ವಾತ್ಸಲ್ಯ ಮನೆಯನ್ನು ಯೋಜನೆಯ ವತಿಯಿಂದ ನಿರ್ಮಿಸಿ ಸಂತೋಷದಿಂದ ಈ ಮನೆಯನ್ನು ಹೇಮಾವತಿ ವೀ ಹೆಗ್ಗಡೆಯವರು ಹಸ್ತಾಂತರಿಸಿ, ಬದುಕಿನ ದಿನನಿತ್ಯ ಉಪಯೋಗದ ಸಾಮಗ್ರಿಗಳ ವಾತ್ಸಲ್ಯ ಕಿಟ್ ವಿತರಿಸಿದರು.

ಬಳಿಕ ಮಾತನಾಡಿದ ಅವರು ನಾವು ಅಸಹಾಯಕರ ಬದುಕಿಗೆ ಬೆಳಕಾದರೆ ನಮ್ಮ ಜೀವನ ಸಾರ್ಥಕ, ನಮ್ಮ ಮಕ್ಕಳಿಗೆ ಶಿಕ್ಷನದೊಂದಿಗೆ ಉತ್ತಮ ಸಂಸ್ಕಾರವನ್ನು ನೀಡಿದಾಗ ಮಾತ್ರ ಕೊನೆ ಕಾಲಕ್ಕೆ ನಮಗೆ ಅಸರೆಯಾಗುತ್ತಾರೆ,ಇಂದು ಇದ್ದ ಪರಿಸ್ಥಿತಿಗಳು ನಾಳೆ ಇರುವುದಿಲ್ಲ, ಬದುಕಿನಲ್ಲಿ ಒಂದು ಒಂದು ಮೆಟ್ಟಿಲುಗಳನ್ನು ಹತ್ತಿಯೇ ಮೇಲಕ್ಕೆ ಹೋಗಬೇಕಾಗುತ್ತದೆ, ಅಂತೆಯೇ ಜೀವನದಲ್ಲಿ ಕಷ್ಟ ಸುಖಗಳನ್ನು ಸಮಾನವಾಗಿ ಸ್ವೀಕರಿಸಿ, ಬದುಕಿನಲ್ಲಿ ಯಶಸ್ಸನ್ನು ಪಡೆಯಬೇಕು ಎಂದರು.

ರಾಜ್ಯಾದ್ಯಂತ ವಾತ್ಸಲ್ಯ ಮನೆಯನ್ನು ಇಂದು ನಿರ್ಮಿಸುತ್ತಿದ್ದು, ಆದರೆ ಪ್ರತಿಯೊಂದು ಕಡೆಯಲ್ಲಿಯೂ ಕೂಡ ಅನೇಕ ಸಮಸ್ಯೆಗಳಿಂದ ಒಬ್ಬಂಟಿಯಾಗಿ ಜೀವನವನ್ನು ನಡೆಸುತ್ತಿರುವ ಅನೇಕರಿಗೆ ಹಾಗೂ ಅಸಹಾಯಕರಿಗೆ ಇಂದು ಕೂಡ ಪೂರ್ಣ ಸೌಕರ್ಯದ ಮನೆಯು ಇಲ್ಲದೆ ಇರುವುದನ್ನು ಗಮನಿಸಿ ಇಂದು ವಾತ್ಸಲ್ಯ ಮನೆಯನ್ನು ಪೂರ್ಣ ವ್ಯವಸ್ಥೆಗಳೊಂದಿಗೆ ರಾಜ್ಯದ್ಯಂತ ಅಲ್ಲಿಯ ಸ್ಥಿತಿಗತಿಗಳನ್ನು ಗಮನಿಸಿ ವಾಸ್ತಲ್ಯ ಮನೆಯನ್ನು ನಿರ್ಮಿಸಿ ಕೊಡಲಾಗುತ್ತಿದೆ.

ಈ ಸಂದರ್ಭದಲ್ಲಿ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಹರೀಶ್ ಕೃಷ್ಣ, ಕೇಂದ್ರ ಕಚೇರಿಯ ಪ್ರಾದೇಶಿಕ ನಿರ್ದೇಶಕ ಜಯರಾಮ್, ಜ್ಞಾನವಿಕಾಸ ವಿಭಾಗದ ನಿರ್ದೇಶಕ ವಿಠಲ್ ಪೂಜಾರಿ, ನಿರ್ದೇಶಕ ದಿನೇಶ್ ಪೂಜಾರಿ, ಯೋಜನಾಧಿಕಾರಿ ಯಶೋಧರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸುಧೀರ್, ಜನಜಾಗೃತಿ ತಾಲೂಕು ವೇದಿಕೆ ಸದಸ್ಯರು ಸ್ಥಳೀಯ ಗಣ್ಯರು ಒಕ್ಕೂಟದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸದಸ್ಯರು, ಶೌರ್ಯ ವಿಪತ್ತು ಘಟಕದ ಸ್ವಯಂಸೇವಕರು, ಜ್ಞಾನವಿಕಾಸದ ಸಮನ್ವಯಾಧಿಕಾರಿ ಮಧುರ ವಸಂತ್ ಹಾಗೂ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು.

Related posts

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ನಿಟ್ಟಡೆ: ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಪಠ್ಯೇತರ ಚಟುವಟಿಕೆಗಳ ತರಬೇತಿ

Suddi Udaya

ಡಿ.14: ಅನಾರು ಹಾ.ಉ.ಸ. ಸಂಘದ ನೂತನ ಕಟ್ಟಡ “ಕ್ಷೀರ ವಾರಿಧಿಯ” ಉದ್ಘಾಟನೆ

Suddi Udaya

ಬಂಗಾಡಿ ಪರಿಸರದಲ್ಲಿ ನೆಟ್‌ವರ್ಕ್ ಸಮಸ್ಯೆ: ಬ್ಯಾಂಕ್ ವ್ಯವಹಾರಕ್ಕಾಗಿ ಗ್ರಾಹಕರ ಪರದಾಟ

Suddi Udaya

ಕಳಿಯ : ಮಕ್ಕಳ ಬೇಸಿಗೆ ಶಿಬಿರ ಉದ್ಘಾಟನೆ

Suddi Udaya

ಬೆಳಾಲು ಮಿನಂದೇಲು ಬಳಿ ಹೊತ್ತಿ ಉರಿದ ಸ್ಕೂಟಿ : ಚಿಕಿತ್ಸೆ ಫಲಕಾರಿಯಾಗದೆ ದಿಯಾನ್ ಸಾವು

Suddi Udaya
error: Content is protected !!